ಸಾರಾಂಶ
ಕೊಳಲು ವಾದಕ ರಾಕೇಶ ಚೌರಾಸಿಯಾಗೆ ಡಾ. ಗಂಗೂಬಾಯಿ ಹಾನಗಲ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 65 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ. ಪದ್ಮಶ್ರೀ ಡಾ. ಎಂ.ಎಂ. ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಧಾರವಾಡ:
ಭಾರತೀಯ ಸಂಗೀತ ವಿದ್ಯಾಲಯ, ದಾಸ ಟ್ರಸ್ಟ್ ಹಾಗೂ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯ ಜಂಟಿಯಾಗಿ ಆ. 11ರಂದು ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಡಾ. ಗಂಗೂಬಾಯಿ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಆಯೋಜಿಸಿದೆ.ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಭಾರತೀಯ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ವಿನಯ ನಾಯಕ, ಅಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು. ಕೊಳಲು ವಾದಕ ರಾಕೇಶ ಚೌರಾಸಿಯಾಗೆ ಡಾ. ಗಂಗೂಬಾಯಿ ಹಾನಗಲ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 65 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ. ಪದ್ಮಶ್ರೀ ಡಾ. ಎಂ.ಎಂ. ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದು ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ರಾಕೇಶ ಚೌರಾಸಿಯಾ ಅವರ ಕೊಳಲು ವಾದನಕ್ಕೆ ಕಲಾವಿದ ಓಜನ್ ಅಧಿಯಾ ತಬಲಾ ಸಾಥ್ ನೀಡುವರೆಂದು ಮಾಹಿತಿ ನೀಡಿದರು.
ಇದಕ್ಕೂ ಮೊದಲು ಗಾಯಕಿ ರೋಸಿ ದತ್ತಾ ಅವರ ಗಾಯನಕ್ಕೆ ಶ್ರೀಧರ್ ಮಾಂಡ್ರೆ ತಬಲಾ ಹಾಗೂ ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್ ನೀಡುವರು. ಮಾಯಾ ರಾಮನ್, ಮಂಜಲಿ ಮೋಕ್ತಾಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಸುದ್ದಿಗೊಷ್ಠಿಯಲ್ಲಿ ಖ್ಯಾತ ಸಂಗೀತಗಾರ ಶಫೀಕ್ ಖಾನ್, ತಬಲಾ ವಾದಕ ಪ್ರವೀಣ ಹೂಗಾರ ಇದ್ದರು.