ಸಾರಾಂಶ
ರಾಖಿ ಎಂಬುದು ಕೇವಲ ನೂಲು ಮಾತ್ರವಲ್ಲ, ಅದು ರಕ್ಷಣೆಯ ಸಂಕೇತ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಗುಂಡಗಟ್ಟಿ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಶ್ರೀ ಹುಚ್ಚನಾಗಲಿಂಗೇಶ್ವರ ಅನಾಥಾಶ್ರಮದಲ್ಲಿ ರಕ್ಷಾಬಂಧನ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಖಿ ಎಂಬುದು ಕೇವಲ ನೂಲು ಮಾತ್ರವಲ್ಲ, ಅದು ರಕ್ಷಣೆಯ ಸಂಕೇತ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಗುಂಡಗಟ್ಟಿ ಹೇಳಿದರು.
ನಗರದ ಶ್ರೀ ಹುಚ್ಚನಾಗಲಿಂಗೇಶ್ವರ ಅನಾಥಾಶ್ರಮದಲ್ಲಿ ಸೋಮವಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಕ್ಷಾಬಂಧನ ಪವಿತ್ರವಾದ, ಸೋದರತ್ವ ಭಾವನೆಯನ್ನು ಬೆಸೆಯುವ ಹಬ್ಬ. ಈ ಹಬ್ಬದಲ್ಲಿ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ, ಸಹೋದರಿಯರ ರಕ್ಷಣೆಗೆ ಸದಾ ಸಿದ್ಧರಿರಬೇಕೆಂದು ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಮಹಿಳಾ ಪ್ರಮುಖ್ ಎಸ್.ಉಮಾದೇವಿ ಹಿರೇಮಠ್ ಮಾತನಾಡಿ, ಸಹೋದರಿಯರ ರಕ್ಷಣೆಯ ಹೊಣೆ ಸರ್ವಕಾಲಕ್ಕೂ ಸೀಮಿತವಾಗಿರಲಿ. ರಾಖಿ ಕಟ್ಟಿಸಿಕೊಂಡ ಸೋದರರು ಸದಾ ಯಶಸ್ವಿಯ ಉತ್ತುಂಗದಲ್ಲಿ ರಾರಾಜಿಸಲಿ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಲಿತ್ ಕುಮಾರ್ ಜೈನ್. ಕಾರ್ಯದರ್ಶಿ ಅಣಬೇರು ತಾರೇಶ್, ಸಹ ಕಾರ್ಯದರ್ಶಿ ಸುನಿತ ಪ್ರಕಾಶ್, ವೀರೇಶ, ಬಿ.ಎಂ.ಜಿ. ಕುಮುದ ಹಾಗೂ ಆಶ್ರಮದ ಮಕ್ಕಳು ಸಿಬ್ಬಂದಿ, ಇತರರು ಇದ್ದರು. ಅನಂತರದಲ್ಲಿ ಮಕ್ಕಳಿಗೆ ಸಿಹಿ ಹಂಚಿ, ಎಲ್ಲರಿಗೂ ರಾಖಿ ಕಟ್ಟಲಾಯಿತು.- - - -20ಕೆಡಿವಿಜಿ31ಃ:
ದಾವಣಗೆರೆಯಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಸಹಯೋಗದಲ್ಲಿ ರಕ್ಷಾಬಂಧನ ಆಚರಿಸಲಾಯಿತು.