ನರಗುಂದದಲ್ಲಿ ಹೆಣ್ಣು ಮಕ್ಕಳ ರಾಖಿ ಖರೀದಿ ಜೋರು

| Published : Aug 08 2025, 01:03 AM IST

ನರಗುಂದದಲ್ಲಿ ಹೆಣ್ಣು ಮಕ್ಕಳ ರಾಖಿ ಖರೀದಿ ಜೋರು
Share this Article
  • FB
  • TW
  • Linkdin
  • Email

ಸಾರಾಂಶ

ಸಹೋದರತ್ವದ ಸಂಕೇತವಾದ ರಕ್ಷಾ ಬಂಧನ ಹುಣ್ಣಿಮೆ ಇನ್ನೊಂದು ದಿನ ಬಾಕಿ ಇರುವಂತೆಯೇ ನರಗುಂದ, ಕೊಣ್ಣೂರ, ಶಿರೋಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಾಖಿ (ನೂಲು ) ಖರೀದಿ ಜೋರು ಪಡೆದಿದೆ. ಮಹಿಳೆಯರು, ಯುವತಿಯರು ಮಾರುಕಟ್ಟೆಯಲ್ಲಿ ದಿನವಿಡೀ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

ನರಗುಂದ: ಸಹೋದರತ್ವದ ಸಂಕೇತವಾದ ರಕ್ಷಾ ಬಂಧನ ಹುಣ್ಣಿಮೆ ಇನ್ನೊಂದು ದಿನ ಬಾಕಿ ಇರುವಂತೆಯೇ ನರಗುಂದ, ಕೊಣ್ಣೂರ, ಶಿರೋಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಾಖಿ (ನೂಲು ) ಖರೀದಿ ಜೋರು ಪಡೆದಿದೆ. ಮಹಿಳೆಯರು, ಯುವತಿಯರು ಮಾರುಕಟ್ಟೆಯಲ್ಲಿ ದಿನವಿಡೀ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

ನಗರದೆಲ್ಲೆಡೆ ಅಂಗಡಿ-ಮುಂಗಟ್ಟುಗಳು ಹಾಗೂ ರಸ್ತೆ ಬದಿಯ ಬಂಡಿಗಳ ಮೇಲೂ ರಾಖಿ ಮಾರಾಟ ನಡೆಯುತ್ತಿದೆ. ವಿವಿಧ ನಮೂನೆಯ, ಆಕರ್ಷಕ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ.

ಕ್ಯಾಲೆಂಡರ್ ಪ್ರಕಾರ ಆ.9ರಂದು ನೂಲ ಹುಣ್ಣಿಮೆಯನ್ನು ಆಚರಿಸಲಾಗುತ್ತಿದ್ದು, ಅದಕ್ಕೂ ಮುಂಚಿತವಾಗಿಯೇ ತಮ್ಮ ಸಹೋದರರಿಗಾಗಿ ಸಹೋದರಿಯರು ರಾಖಿಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ. ನಗರದ ಬಸ್ ನಿಲ್ದಾಣ ಹತ್ತಿರ, ಪ್ರಮುಖ ಮಾರುಕಟ್ಟೆಯಾದ ಕೇಂದ್ರ ಹಳೆಯ ಬಸ್ ನಿಲ್ದಾಣ ಸೇರಿದಂತೆ ವಿವಿಧ ಅಂಗಡಿ, ಮುಂಗಟ್ಟು ಹಾಗೂ ರಸ್ತೆ ಬದಿ ತಳ್ಳು ಗಾಡಿಗಳ ಮೇಲು ರಾಖಿ ಮಾರಾಟ ಜೋರಾಗಿ ನಡೆದಿರುವು ಕಂಡು ಬರುತ್ತದೆ. ತಾಲೂಕಿನ ವಿವಿಧ ಗ್ರಾಮಗಳ ಜನರು ನಗರಕ್ಕೆ ಆಗಮಿಸಿ ರಾಖಿ ಖರೀದಿಸುತ್ತಿದ್ದಾರೆ. 1 ರಾಖಿ(ನೂಲು)ಗೆ 100 ರು.ಗಳಿಂದ 500ರು. ವರೆಗೂ ನಾನಾ ನಮೂನೆಯ ರಾಖಿಗಳು ಮಾರಾಟಕ್ಕೆ ಲಭ್ಯ ಇವೆ. ಬೆಳ್ಳಿ ನೂಲಿನ ರಾಖಿ, ರೇಷ್ಮೆ ದಾರಗಳುಳ್ಳ ರಾಖಿ, ಮುತ್ತಿನ ರಾಖಿ, ಗಣಪ, ಬಾಹುಬಲಿ ಮತ್ತಿತರೆ ಸಣ್ಣ ಮೂರ್ತಿಗಳನ್ನು ಹೊತ್ತ ರಾಖಿಗಳು ಗಮನ ಸೆಳೆಯುತ್ತಿವೆ. ಪೋಸ್ಟ್ ಮತ್ತು ಕೋರಿಯರ್ ಮೂಲಕವೂ ಕಳುಹಿಸಲು ರಾಖಿಗಳು ಲಭ್ಯ ಇವೆ ಎಂದು ಶ್ರೀ ದಾನೇಶ್ವರಿ ಕಿರಾಣಿ ಸ್ಟೋರ್ ಅಂಗಡಿ ಮಾಲೀಕರಾದ ಸೋಮು ಶೇಬಣ್ಣವರ ಶೇಬಣ್ಣವರ ಹೇಳಿದರು. ಪ್ರತಿ ವರ್ಷ ಅಣ್ಣ ತಂಗಿಯ ಬಾಂಧವ್ಯ ಚೆನ್ನಾಗಿರಲಿ ಎಂಬ ಉದ್ದೇಶದಿಂದ ಆಚರಿಸುವ ರಾಖಿ ಹಬ್ಬ ಮತ್ತೆ ಬಂದಿದೆ. ಆದ್ದರಿಂದ ಸಹೋದರರಿಗೆ ಕಟ್ಟುವ ಸಲುವಾಗಿ ರಾಖಿಯನ್ನು ಖರೀದಿಸಲು ಮಾರುಕಟ್ಟೆಗೆ ಬಂದಿದ್ದೇನೆ. ಶಕ್ತಾನುಸಾರ ಖರೀದಿ ಮಾಡಲಾಗುವುದು ಎಂದು ಕೊಣ್ಣೂರ ಗ್ರಾಪಂ ಅಧ್ಯಕ್ಷೆ ಜಯಶ್ರೀ ಶಿವಪ್ಪಯ್ಯಮಠ ಹೇಳಿದರು. ಹಬ್ಬಕ್ಕಾಗಿಯೇ ಫುಟ್‌ಪಾತ್ ಬಳಿ ಬಂಡಿಯನ್ನು ಹಾಕಿದ್ದೇನೆ. ನನ್ನ ಬಳಿ 1 ರು.ದಿಂದ 200 ರು. ವರೆಗೆ ರಾಖಿಗಳಿವೆ. ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಬಂದು ಖರೀದಿಸುತ್ತಿದ್ದಾರೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಸುಭಾಸ ಉಪ್ಪಾರ ಮಾರುಕಟ್ಟೆ ವ್ಯಾಪಾರಿ