ಸಾರಾಂಶ
ವಿಜಯಪುರ: ಸಹೋದರ ಮತ್ತು ಸಹೋದರಿಯರ ಪ್ರೀತಿ ಮತ್ತು ರಕ್ಷಣೆಯ ಪ್ರತೀಕವೇ ರಕ್ಷಾಬಂಧನ ಎಂದು ಎ.ಎಚ್.ಕೊಳಮಲಿ ಹೇಳಿದರು. ನಗರದ ಕನಕ ಪಬ್ಲಿಕ್ ಶಾಲೆ ಹಾಗೂ ಕನಕ ನವೋದಯ ಕೋಚಿಂಗ್ ಕ್ಲಾಸ್‌ನಲ್ಲಿ ಆಚರಿಸಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ವಿಜಯಪುರ: ಸಹೋದರ ಮತ್ತು ಸಹೋದರಿಯರ ಪ್ರೀತಿ ಮತ್ತು ರಕ್ಷಣೆಯ ಪ್ರತೀಕವೇ ರಕ್ಷಾಬಂಧನ ಎಂದು ಎ.ಎಚ್.ಕೊಳಮಲಿ ಹೇಳಿದರು.
ನಗರದ ಕನಕ ಪಬ್ಲಿಕ್ ಶಾಲೆ ಹಾಗೂ ಕನಕ ನವೋದಯ ಕೋಚಿಂಗ್ ಕ್ಲಾಸ್‌ನಲ್ಲಿ ಆಚರಿಸಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿ, ಸಹೋದರ ಮತ್ತು ಸಹೋದರಿಯರು ಪರಸ್ಪರ ಪ್ರೀತಿ, ಸಂತೋಷವನ್ನು ಹಂಚಿ ಆಚರಿಸುವ ಭಾರತ ದೇಶದ ಶ್ರೇಷ್ಟ ಹಬ್ಬ ಎಂದರು. ಶಾಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ವಿಶೇಷ ರೀತಿಯಲ್ಲಿ ರಾಖಿ ಹಬ್ಬವನ್ನು ಆಚರಿಸಿದರು.
ಸಂಸ್ಥೆಯ ನಿರ್ದೇಶಕ ರಾಮಸ್ವಾಮಿ ಕೊಳಮಲಿ, ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.