ರಕ್ಷಾ ಬಂಧನ ಮತ್ತು ಶ್ರೀ ಕೃಷ್ಣ ಜನ್ಮಷ್ಟಮಿಯನ್ನು ಆಚರಿಸಲಾಯಿತು. ಈ ಸಂದರ್ಭ ಅಧಿಕ ಮಂದಿ ಭಕ್ತರು ಹಾಜರಿದ್ದರು.

ಗುಡ್ಡೆಹೊಸೂರು: ಕುಶಾಲನಗರದ ರಾಧಕೃಷ್ಣ ಬಡಾವಣೆಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯಾ ವಿಶ್ವವಿದ್ಯಾಲಯ ಶಾಖೆಯ ವತಿಯಿಂದ ರಕ್ಷಾಬಂಧನ ಮತ್ತು ಶ್ರೀ ಕೃಷ್ಣ ಜನ್ಮಷ್ಟಮಿಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಅಧಿಕ ಮಂದಿ ಇಲ್ಲಿನ ಕೇಂದ್ರದ ಭಕ್ತರು ಹಾಜರಿದ್ದರು.

ಈ ಸಂದರ್ಭ ಸಂಚಾಲಕಿ ಧನಲಕ್ಷೀ ರಕ್ಷಾಬಂಧನ ಮಹತ್ವದ ಬಗ್ಗೆ ವಿವರಿಸಿದರು. ಕುಶಾಲನಗರ ಶಾಖೆಯ ಮುಖ್ಯಸ್ಥೆಯಾದ ಲಲಿತಾಮಣಿ ಹಾಜರಿದ್ದರು. ಜಿಲ್ಲಾ ಸಂಚಾಲಕಿ ಗಾಯಿತ್ರಿ ಸರ್ವರಿಗೂ ರಾಕಿ ಕಟ್ಟಿದರು. ನಂತರ ಅನ್ನಸಂತರ್ಪಣೆ ಕಾರ್ಯ ನಡೆಯಿತು.

----------------------------------------------

ಅಂಗನವಾಡಿ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಬಕ್ಕ ಅಂಗನವಾಡಿ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ರಾಧಾ ಕೃಷ್ಣ ಛದ್ಮವೇಷ ಹಾಕಿಸಿ ಸಿಹಿ ಹಂಚುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶೈಲಜಾ, ಕಿರಿಯ ಆರೋಗ್ಯ ಸಹಾಯಕಿ ಕೃತಿಕ ರಾಣಿ , ಆಶಾ ಕಾರ್ಯಕರ್ತೆಯರಾದ ಜಯಚಿತ್ರ, ಉಷಾ, ಪ್ರಮೀಳಾ ಅಂಗನವಾಡಿ ಸಹಾಯಕಿ ಹೇಮ ಸೇರಿದಂತೆ ಪೋಷಕರು ಸಾರ್ವಜನಿಕರು ಭಾಗವಹಿಸಿ ಸಂಭ್ರಮಿಸಿದರು.