ಸರ್ಕಾರಿ ಶಾಲೆಯ ಅವಶ್ಯಕತೆಯನ್ನು ಮನಗಂಡು ೭ ಲಕ್ಷ ರು. ಮೌಲ್ಯದ ಕೊಠಡಿಯನ್ನು ಕೊಡುಗೆಯಾಗಿ ನೀಡಿದ ಪೈಂಟರ್ ಶಶಿಧರ್ ಕಾಪಿಕಾಡ್ ಅವರ ಕಾರ್ಯ ನಾಗರಿಕ ಸಮಾಜಕ್ಕೆ ಪ್ರೇರಣಾದಾಯಿಯಾಗಿದೆ ಎಂದು ಕೆಪಿಸಿಸಿ ಸದಸ್ಯ ರಕ್ಷಿತ್ ಶಿವರಾಂ ಹೇಳಿದರು .
ಉಪ್ಪಿನಂಗಡಿ: ಸರ್ಕಾರಿ ಶಾಲೆಯ ಅವಶ್ಯಕತೆಯನ್ನು ಮನಗಂಡು ೭ ಲಕ್ಷ ರು. ಮೌಲ್ಯದ ಕೊಠಡಿಯನ್ನು ಕೊಡುಗೆಯಾಗಿ ನೀಡಿದ ಪೈಂಟರ್ ಶಶಿಧರ್ ಕಾಪಿಕಾಡ್ ಅವರ ಕಾರ್ಯ ನಾಗರಿಕ ಸಮಾಜಕ್ಕೆ ಪ್ರೇರಣಾದಾಯಿಯಾಗಿದೆ ಎಂದು ಕೆಪಿಸಿಸಿ ಸದಸ್ಯ ರಕ್ಷಿತ್ ಶಿವರಾಂ ಹೇಳಿದರು .ಅವರು ಕರಾಯ ಸರ್ಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಶಿಕ್ಷಣ ಪ್ರೇಮಿ ದಾನಿ ಪೈಂಟರ್ ಶಶಿಧರ್ ಕಾಪಿಕಾಡ್ ಕೊಡುಗೆಯಾಗಿ ನೀಡಿದ ಕೊಠಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೂತನ ಕೊಠಡಿಯನ್ನು ಪುತ್ತೂರು ದ್ವಾರಕನಾಭ ಪ್ರತಿಷ್ಠಾನದ ಗೋಪಾಲ ಕೃಷ್ಣ ಭಟ್ ಉದ್ಘಾಟಿಸಿದರು.ಕೊಠಡಿ ದಾನಿ ಪೈಂಟರ್ ಶಶಿಧರ್ ಕಾಪಿಕಾಡ್ ಶಾಲಾ ವತಿಯಿಂದ ಸನ್ಮಾನ ಸ್ವೀಕರಿಸಿದರು.
ಜಿ.ಪಂ. ಮಾಜಿ ಸದಸ್ಯ ಕೆ.ಕೆ ಸಾಹುಲ್ ಹಮೀದ್ ಮಾತನಾಡಿದರು.ಗ್ರಾ.ಪಂ ಮಾಜಿ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಮಾಜಿ ಪಂಚಾಯಿತಿ ಸದಸ್ಯರಾದ ಅಯೂಬ್ ಡಿ.ಕೆ, ಹೇಮಾವತಿ, ನವೀನ ಪ್ರಮುಖರಾದ ಜಗದೀಶ ಶೆಟ್ಟಿ ಮೈರಾ, ಅನಂತಕೃಷ್ಣ ಕುದ್ದಾಣ್ಣಾಯ, ಗೋಪಾಲಕೃಷ್ಣ ಭಟ್ಟ್, ಹರ್ಷ.ಯಂ, ಲತಿಪ್ ಕೆ, ಸಾದಿಕ್, ಇಲಿಯಾಸ್ ಕರಾಯ, ಬೊಮ್ಮಯ್ಯ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಮಹಾಲಿಂಗ ಕೆ ಸ್ವಾಗತಿಸಿದರು. ವತ್ಸಲ ವಂದಿಸಿದರು. ದೀಪಶ್ರೀ ನಿರೂಪಿಸಿದರು.