ರಿಯಾಲಿಟಿ ಶೋ ಬಿಗ್ ಬಾಸ್‌ ನಲ್ಲಿ ರನ್ನರ್ ಆಪ್‌ ಆಗಿ ಹುಟ್ಟೂರು ಕಾಪು ಹೆಜಮಾಡಿಯಲ್ಲಿರುವ ಮನೆಗೆ ಮರಳಿದ ರಕ್ಷಿತಾ ಶೆಟ್ಟಿಗೆ ಊರವರು ಬುಧವಾರ ಮೆರವಣಿಗೆ

ಉಡುಪಿ: ರಿಯಾಲಿಟಿ ಶೋ ಬಿಗ್ ಬಾಸ್‌ ನಲ್ಲಿ ರನ್ನರ್ ಆಪ್‌ ಆಗಿ ಹುಟ್ಟೂರು ಕಾಪು ಹೆಜಮಾಡಿಯಲ್ಲಿರುವ ಮನೆಗೆ ಮರಳಿದ ರಕ್ಷಿತಾ ಶೆಟ್ಟಿಗೆ ಊರವರು ಬುಧವಾರ ಮೆರವಣಿಗೆ ಮಾಡಿ ಸ್ವಾಗತಿಸಿದ್ದಾರೆ.ತುಳ‍ುನಾಡಿನ ಧ್ವಜ ಕಟ್ಟಿದ್ದ ತೆರೆದ ವಾಹನದಲ್ಲಿ ಚಂಡೆವಾದನದೊಂದಿಗೆ ಅಭಿಮಾನಿಗಳು ಆಕೆಯ ಕೊರಳತುಂಬಾ ಹಾರಗಳನ್ನು ಹಾಕಿ ಸ್ವಾಗತಿಸಿದರು. ಈ ಸಂದರ್ಭ ಅಭಿಮಾನಿಯೊಬ್ಬರು ನೀಡಿದ ಬಂಗುಡೆ ಮೀನನ್ನು ಕೈಯಲ್ಲಿ ಹಿಡಿದುಕೊಂಡು ರಕ್ಷಿತಾ ಕುಣಿದು ಸಂತಸ ವ್ಯಕ್ತಪಡಿಸಿದರು.

ನೂರಾರು ಮಂದಿ ಮಹಿಳೆಯರು ಯುವಕರು ರಕ್ಷಿತಾಳಿಗೆ ಜೈಕಾರ ಹಾಕಿದರು, ಆಕೆಯೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.