ಸಾರಾಂಶ
ಸುಮಾರು ೭ಸಾವಿರ ಮೆಕ್ಕೆಜೋಳದ ತೆನೆಗಳನ್ನು ಬಳಸಿ ಅಯೋಧ್ಯೆಯ ರಾಮಮಂದಿರದಂತೆಯೇ ಕಟ್ಟಿ ಊರಿನ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರನ್ನು ಕರೆಸಿ ರಾಮನ ದರ್ಶನ ಮಾಡಿಸಿದರು.
ಕೊಪ್ಪಳ: ತಾಲೂಕಿನ ಓಜಿನಹಳ್ಳಿ ಗ್ರಾಮದ ಮೆಕ್ಕೆಜೋಳದ ಕ್ಷೇತ್ರೋತ್ಸವವನ್ನು ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರ ಪ್ರಯುಕ್ತ ಮೆಕ್ಕೆಜೋಳ ತೆನೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಕ್ಷೇತ್ರೋತ್ಸವ ನಡೆಸಿದ್ದಾರೆ.ತಾಲೂಕಿನ ಬಸವಂತಗೌಡ ಜಂತ್ಲಿ ಅವರ ಜಮೀನಿನಲ್ಲಿ ಕಾವೇರಿ ಸೀಡ್ಸ್ ಕಂಪನಿಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು. ಸುಮಾರು ೭ಸಾವಿರ ಮೆಕ್ಕೆಜೋಳದ ತೆನೆಗಳನ್ನು ಬಳಸಿ ಅಯೋಧ್ಯೆಯ ರಾಮಮಂದಿರದಂತೆಯೇ ಕಟ್ಟಿ ಊರಿನ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರನ್ನು ಕರೆಸಿ ರಾಮನ ದರ್ಶನ ಮಾಡಿಸಿದರು.ಧರ್ಮದ ಕೆಲಸ ಮಾಡಿದ್ದೇವೆ: ಹಿಂದೂ ಸಮಾಜ ರಾಮನಿಗೋಸ್ಕರ 500 ವರ್ಷದ ಹೋರಾಟದ ಪ್ರತಿಫಲದಿಂದ ಅಯೋಧ್ಯೆಯಲ್ಲಿ ಜ.೨೨ಕ್ಕೆ ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ನಾವು ಕೂಡ ಧರ್ಮದ ಕೆಲಸ ಮಾಡಬೇಕೆಂದು ರಾಮಮಂದಿರವನ್ನು ಮೆಕ್ಕೆಜೋಳದ ತನೆಯಿಂದ ಮಾಡಿದ್ದೇವೆ ಎಂದು ಕಾವೇರಿ ಕಂಪನಿಯ ವ್ಯವಸ್ಥಾಪಕ ರಮೇಶ ಜೋಗಿ ಹೇಳಿದರು.ಈ ಸಂದರ್ಭದಲ್ಲಿ ತಾತನಗೌಡ ರುದ್ರಗೌಡ ಜಂತ್ಲಿ ಸೇರಿದಂತೆ ಹಲವಾರು ರೈತರು ಇದ್ದರು.