ರಮಾಬಾಯಿ ಅಂಬೇಡ್ಕರ್‌ ಬದುಕು ಎಲ್ಲರಿಗೂ ಸ್ಫೂರ್ತಿ: ಪ್ರದೀಪ್ ತಿಪಟೂರು

| Published : Jun 13 2024, 12:49 AM IST

ರಮಾಬಾಯಿ ಅಂಬೇಡ್ಕರ್‌ ಬದುಕು ಎಲ್ಲರಿಗೂ ಸ್ಫೂರ್ತಿ: ಪ್ರದೀಪ್ ತಿಪಟೂರು
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆಯ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನ ಜರುಗಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮಾಜದ ಹಿತಕ್ಕಾಗಿ, ಜನಾಂಗದ ಒಳಿತಿಗಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆಯ ಕ್ರಾಂತಿಗೆ ಅವರ ಪರಿಶ್ರಮದ ಸಾಧನೆಗೆ ಅವರ ಪತ್ನಿ ರಮಾಬಾಯಿ ಅವರು ಶಕ್ತಿ ಮತ್ತು ತ್ಯಾಗದ ಬದುಕು ಸಾರ್ಥಕತೆ ಪಡೆದಿದೆ. ರಮಾಬಾಯಿ ಅಂಬೇಡ್ಕರ್ ಬದುಕು ಆದರ್ಶವಾಗಿದೆ ಎಂದು ರಂಗ ನಿರ್ದೇಶಕ ಪ್ರದೀಪ್ ತಿಪಟೂರು ಹೇಳಿದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬಾಗಲಕೋಟೆಯ ಗೆಳೆಯರ ಬಳಗ, ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಕರ್ನಾಟಕ ರಂಗ ಪರಿಷತ್ತು, ಬಾಗಲಕೋಟೆ ಇವರ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ ಇವರ ಸಹಕಾರದಲ್ಲಿ ನಡೆದ ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಜಾನಕಿ.ಕೆ.ಎಂ, ಮಾರ್ಗದರ್ಶನದಂತೆ ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನವನ್ನು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದು, ಪದವಿ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಅವರ ಪತ್ನಿ ರಾಮಾಬಾಯಿ ಅಂಬೇಡ್ಕರ್‌ ಅವರು ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಮಾಜದಲ್ಲಿ ಸಾಧಕರಾಗಬೇಕು ಎಂದು ಹೇಳಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸಿ. ಡೂಗನವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರಣಕುಮಾರ್ ಜೈನಾಪುರ, ರಂಗಭೂಮಿ ಚಿಂತಕ ಮಹಾಂತೇಶ ಗಜೇಂದ್ರಗಡ, ಐಕ್ಯೂಎಸಿ ಸಂಚಾಲಕ ಪ್ರೊ.ಅಜಿತ್ ನಾಗರಾಳೆ, ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಜಿ.ಜಿ. ಹಿರೇಮಠ ಉಪಸ್ಥಿತರಿದ್ದರು.

ಶಾರದಾ ಹೊಸಮನಿ ಪ್ರಾರ್ಥಿಸಿದರು. ಪ್ರೊ.ಪರಸಪ್ಪ ತಳವಾರ ಸ್ವಾಗತಿಸಿದರು. ಡಾ.ಸುಮಂಗಲಾ ಮೇಟಿ ನಿರೂಪಿಸಿದರು, ಡಾ.ಚಂದ್ರಶೇಖರ ಕಾಳನ್ನವರ ವಂದಿಸಿದರು.

ಮಿಸೆಸ್ ಅಂಬೇಡ್ಕರ್ ನಾಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರದಲ್ಲಿ ಬೆಂಗಳೂರಿನ ಬಿ.ಎ ಪದವಿ ವಿದ್ಯಾರ್ಥಿ ತಿಲಕ್, ರಾಮಾಬಾಯಿ ಪಾತ್ರದಲ್ಲಿ ಪದವಿ ವಿದ್ಯಾರ್ಥಿನಿ ಅರುಣಾ ಎಂ. ಅಭಿನಯ ಮಾಡಿದ್ದಾರೆ. ಯಶೋಧಾ ಅವರು ಸಂಗೀತ ನೀಡಿದ್ದಾರೆ.ಪ್ರದೀಪ ತಿಪಟೂರು ನಿರ್ದೇಶನ ಮಾಡಿದ್ದಾರೆ.