ಹೊಸ ಬಟ್ಟೆಗಳನ್ನು ತೊಟ್ಟ ಮುಸ್ಲಿಂ ಬಂಧುಗಳು ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಿ ದೇವರನ್ನು ಸ್ಮರಿಸಿಕೊಂಡರು. ಒಬ್ಬರಿಗೊಬ್ಬರು ಅಪ್ಪಿಕೊಂಡು ಪರಸ್ಪರ ಶುಭಾಶಯ ಕೋರುವ ಮೂಲಕ ಒಂದು ತಿಂಗಳಿಂದ ಆಚರಣೆಯ ಸಾಂಪ್ರದಾಯಿಕ ಉಪವಾಸ ಅಂತ್ಯಗೊಳಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದರು. ಪಟ್ಟಣದ ಗಂಜಾಂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬದ ಶುಭಾಶಯಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡರು.

ಹೊಸ ಬಟ್ಟೆಗಳನ್ನು ತೊಟ್ಟ ಮುಸ್ಲಿಂ ಬಂಧುಗಳು ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡಿ ದೇವರನ್ನು ಸ್ಮರಿಸಿಕೊಂಡರು. ಒಬ್ಬರಿಗೊಬ್ಬರು ಅಪ್ಪಿಕೊಂಡು ಪರಸ್ಪರ ಶುಭಾಶಯ ಕೋರುವ ಮೂಲಕ ಒಂದು ತಿಂಗಳಿಂದ ಆಚರಣೆಯ ಸಾಂಪ್ರದಾಯಿಕ ಉಪವಾಸ ಅಂತ್ಯಗೊಳಿಸಿದರು. ಮುಸ್ಲಿಂ ಧರ್ಮ ಗುರುಗಳು ಈದ್ಗಾ ಮೈದಾನದಲ್ಲಿ ತಮ್ಮ ಪ್ರವಚನಗಳ ಮೂಲಕ ಮುಸ್ಲಿಂ ಬಾಂಧವರಿಗೆ ಅಲ್ಲಾನನ್ನು ಪ್ರಾರ್ಥಿಸಿ ಶುಭ ಕೋರಿದರು. ಗಂಜಾಂನ ಈದ್ಗಾ ಮೈದಾನ, ಪಾಲಹಳ್ಳಿ, ಕೊಡಿಯಾಲ, ಕೆಆರ್‌ಎಸ್ ಅರಕೆರೆ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ಬಿಗಿ ಭದ್ರತೆ ವಹಿಸಿದ್ದರು.