ಸಾರಾಂಶ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಎರಡನೇ ತಿಂಗಳ ಶ್ರಮದಾನ ಕಾರ್ಯಕ್ರಮ ಭಾನುವಾರ ಬೆಳಗ್ಗೆ 7.30ರಿಂದ 10 ಗಂಟೆವರೆಗೆ ಹಂಪನಕಟ್ಟೆ ಪರಿಸರದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಎರಡನೇ ಆವೃತ್ತಿಯ ಎರಡನೇ ತಿಂಗಳ ಶ್ರಮದಾನ ಕಾರ್ಯಕ್ರಮ ಭಾನುವಾರ ಬೆಳಗ್ಗೆ 7.30ರಿಂದ 10 ಗಂಟೆವರೆಗೆ ಹಂಪನಕಟ್ಟೆ ಪರಿಸರದಲ್ಲಿ ನಡೆಯಿತು.ಗಣ್ಯರು ಸಾಂಕೇತಿಕವಾಗಿ ಹಂಪನಕಟ್ಟೆ ಮುಖ್ಯರಸ್ತೆಯನ್ನು ಸ್ವಚ್ಛಗೊಳಿಸಿದರು. ಸ್ವಯಂ ಸೇವಕರಾದ ದಿನೇಶ್ ಕರ್ಕೇರ, ಸೌರಜ್ ಮಂಗಳೂರು, ವಸಂತಿ ನಾಯಕ್, ಶಿವರಾಮ್ ಅಡ್ಡೂರ್, ಸುನಂದಾ, ಹಿಮ್ಮತ್ ಸಿಂಗ್, ತಾರಾನಾಥ್ ಆಳ್ವ, ಅನಿರುದ್ಧ್ ನಾಯಕ್, ಕುಮಾರ್ ಸತ್ಯನಾರಾಯಣ ಅವಿನಾಶ್ ಅಂಚನ್ ಅವರು ಕ್ಲಾಕ್ ಟವರ್ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಉದಯ್ ಕೆ.ಪಿ., ಸತೀಶ್ ಗೌಡ, ರವಿ ಕೆ, ಪುನೀತ್ ಅವರು ಕ್ಲಾಕ್ ಟವರ್ ಕೆಳಭಾಗದ ಕಾರಂಜಿಯ ಕೊಳಕು ನೀರನ್ನು ಹೊರತೆಗೆದು ಶುಚಿಗೊಳಿಸಿದರು. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ರಾಕೇಶ್‌ಕೃಷ್ಣ ಹಾಗೂ ನೇಹಾ ಶೆಟ್ಟಿ ನೇತೃತ್ವದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ವೆನ್ಲಾಕ್ ಜಿಲ್ಲಾಸ್ಪತ್ರೆ ಆವರಣ ಗೋಡೆಯಿಂದ ಪ್ರಾರಂಭಿಸಿ ವಿವಿ ಕಾಲೇಜಿನವರೆಗಿನ ಆವರಣ ಗೋಡೆಗಳ ಮೇಲಿನ ವರ್ಣಚಿತ್ರಗಳನ್ನು ನೀರು ಹಾಕಿ ಶುಚಿಗೊಳಿಸಿದರು, ಕೊಡಂಗೆ ಬಾಲಕೃಷ್ಣ ನಾಯಕ್ ಮಾರ್ಗದರ್ಶನ ಮಾಡಿದರು. ಬಾಲಕೃಷ್ಣ ಭಟ್ ಹಾಗೂ ಯೋಗೀಶ್ ಕಾರ್ಯತ್ತಡ್ಕ ಟ್ಯಾಂಕರ್ ಮೂಲಕ ನೀರು ಹಾಕಿ ಆವರಣ ಗೋಡೆಗಳನ್ನು ಶುಚಿಗೊಳಿಸಿದರು.‘ಯುವ’ ಸ್ವಯಂಸೇವಕರು ಭಾಗಿ:
ರಾಮಕೃಷ್ಣ ಮಠದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತಿ ವಾರಾಂತ್ಯ ನಡೆಯುತ್ತಿರುವ ‘ಯುವ’ ಎಂಬ ಒಂದು ದಿನದ ನಿವಾಸಿ ಶಿಬಿರದ 20 ಶಿಬಿರಾರ್ಥಿಗಳು ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್ ರಾವ್, ಗೋಪಾಲ್ ಹಾಗೂ ಸಿ.ಎ. ಅಭಿರಾಮ್ ಶಿವಕುಮಾರ್ ನೇತೃತ್ವದಲ್ಲಿ ಕ್ಲಾಕ್ ಟವರ್‌ನಿಂದ ವೆನ್ಲಾಕ್‌ವರೆಗಿನ ರಸ್ತೆಯನ್ನು ಹಾಗೂ ಮಾರ್ಗ ವಿಭಜಕಗಳನ್ನು ಸ್ವಚ್ಛ ಮಾಡಿದರು.ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯದಲ್ಲಿ, ಎಂಆರ್‌ಪಿಎಲ್ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್ ಹಾಗೂ ಮಂಗಳೂರಿನ ಎಸ್.ಸಿ.ಎಸ್. ಆಸ್ಪತ್ರೆ ನಿರ್ದೇಶಕ ಡಾ. ಚಂದ್ರಶೇಖರ್ ಸೊರಕೆ ಜಂಟಿಯಾಗಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಶಾಸಕ ವೇದವ್ಯಾಸ್ ಕಾಮತ್, ಮಾಜಿ ಎಂಎಲ್ಸಿ ಕ್ಯಾ. ಗಣೇಶ್ ಕಾರ್ಣಿಕ್, ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಡಾ. ಸತೀಶ್ ರಾವ್ ಇದ್ದರು.ಸೀತಾರಾಮ, ಉಮಾನಾಥ ಕೋಟೆಕಾರ್, ಸಂಜಯ್ ಪ್ರಭು, ಕಮಾಲಾಕ್ಷ ಪೈ, ಸತ್ಯನಾರಾಯಣ ಕೆ.ವಿ. ಮತ್ತಿತರ ಹಿರಿಯ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ಎಂಆರ್‌ಪಿಎಲ್ ಪ್ರಾಯೋಜಕತ್ವ ಹಾಗೂ ನಿಟ್ಟೆ ವಿವಿ ಸಹಕಾರದಲ್ಲಿ ಈ ಅಭಿಯಾನ ನಡೆಯುತ್ತಿದೆ.