ಮಂಗಳೂರು ರಾಮಕೃಷ್ಣ ಮಠದಲ್ಲಿ ನಡೆಯುತ್ತಿರುವ ಪ್ರಬೋಧ ಉಪನ್ಯಾಸ ಮಾಲಿಕೆಯ ಎರಡನೇ ದಿನದ ಉಪನ್ಯಾಸ ಸಂಪನ್ನಗೊಂಡಿತು. ಅಮೆರಿಕಾದಲ್ಲಿರುವ ನ್ಯೂಯಾರ್ಕ್ ವೇದಾಂತ ಸೊಸೈಟಿಯ ರೆಸಿಡೆಂಟ್ ಮಿನಿಸ್ಟರ್ ಹಾಗೂ ಆಧ್ಯಾತ್ಮಿಕ ನಾಯಕರಾಗಿರುವ ಸ್ವಾಮಿ ಸರ್ವಪ್ರಿಯಾನಂದಜಿ ಅವರು ಎರಡು ದಿನಗಳ ಉಪನ್ಯಾಸಗಳು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಸಂಪನ್ನಗೊಂಡಿತು.
ಮಂಗಳೂರು: ಮಂಗಳೂರು ರಾಮಕೃಷ್ಣ ಮಠದಲ್ಲಿ ನಡೆಯುತ್ತಿರುವ ಪ್ರಬೋಧ ಉಪನ್ಯಾಸ ಮಾಲಿಕೆಯ ಎರಡನೇ ದಿನದ ಉಪನ್ಯಾಸ ಸಂಪನ್ನಗೊಂಡಿತು. ಅಮೆರಿಕಾದಲ್ಲಿರುವ ನ್ಯೂಯಾರ್ಕ್ ವೇದಾಂತ ಸೊಸೈಟಿಯ ರೆಸಿಡೆಂಟ್ ಮಿನಿಸ್ಟರ್ ಹಾಗೂ ಆಧ್ಯಾತ್ಮಿಕ ನಾಯಕರಾಗಿರುವ ಸ್ವಾಮಿ ಸರ್ವಪ್ರಿಯಾನಂದಜಿ ಅವರು ಎರಡು ದಿನಗಳ ಉಪನ್ಯಾಸಗಳು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಸಂಪನ್ನಗೊಂಡಿತು.
ವೃತ್ತಿಪರರಿಗಾಗಿ ನಡೆದ ಪ್ರಭೋಧದ ಎರಡನೇ ದಿನದ ಮೊದಲನೇ ಅವಧಿಯನ್ನು ಮಂಗಳೂರಿನ ನಿಟ್ಟೆ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ ಉದ್ಘಾಟಿಸಿದರು. ಮಂಗಳೂರಿನ ಎಕ್ಸ್ಪರ್ಟ್ ಸಂಸ್ಥೆಗಳ ಸ್ಥಾಪಕ ಹಾಗೂ ಚೇರ್ಮನ್ ನರೇಂದ್ರ ನಾಯಕ್, ವರ್ಕ್ ವರ್ಕ್ ಕೋವರ್ಕಿಂಗ್ ವರ್ಕ್ ಸ್ಪೇಸ್ ಹಾಗೂ ರೋಬೋಸೋಫ್ಟ್ ಟೆಕ್ನಾಲಜೀಸ್ನಸಂಸ್ಥಾಪಕ ರೋಹಿತ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸ್ಥಾಪಕ ಕ್ಯಾ.ಗಣೇಶ್ ಕಾರ್ಣಿಕ್ ಇದ್ದರು.
ಕಾರ್ಯಕ್ರಮದಲ್ಲಿ ಸ್ವಾಮಿ ಸರ್ವಪ್ರಿಯಾನಂದಜಿ ಅವರಿಂದ ‘ಸಕ್ಸಸ್ ವಿಥೌಟ್ ಲೂಸಿಂಗ್ ಪೀಸ್ ೩೯’ ಎಂಬ ವಿಷಯದ ಕುರಿತು ಉಪನ್ಯಾಸ ನೆರವೇರಿತು. ಡಾ.ಸತೀಶ್ ರಾವ್ ವಂದಿಸಿದರು. ಸ್ವಾತಿ ರೈ ನಿರ್ವಹಿಸಿದರು.ಎರಡನೇ ಅವಧಿಯನ್ನು ನಿಟ್ಟೆ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ. ಸಂದೀಪ್ ರೈ ಉದ್ಘಾಟಿಸಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸ್ಥಾಪಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇದ್ದರು. ಕಾರ್ಯಕ್ರಮದಲ್ಲಿ ಸ್ವಾಮಿ ಸರ್ವಪ್ರಿಯಾನಂದಜಿ ಅವರಿಂದ ‘ಹೂ ಹೀಲ್ಸ್ ದ ಹೀಲರ್ ೩೯’ ಎಂಬ ವಿಷಯದ ಕುರಿತು ಉಪನ್ಯಾಸ ನೆರವೇರಿತು. ಡಾ. ಕೆ.ಆರ್.ಕಾಮತ್ ವಂದಿಸಿದರು. ಡಾ.ಪ್ರಿಯ ಡಿ.ಆಳ್ವ ನಿರ್ವಹಿಸಿದರು.
ಸಾರ್ವಜನಿಕರಿಗಾಗಿ ನಡೆದ ಮೂರನೇ ಅವಧಿಯನ್ನು ಮಂಗಳೂರಿನ ರೋಮನ್ ಕ್ಯಾಥೊಲಿಕ್ ಡಯಾಸಿಸ್ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ ಉದ್ಘಾಟಿಸಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ದಿವ್ಯ ಸಾನಿಧ್ಯ ವಹಿಸಿದ್ದರು. ೧೨ ವರ್ಷಗಳ ನಂತರ ಮಂಗಳೂರಿಗೆ ಆಗಮಿಸಿದ ಸ್ವಾಮಿ ಸರ್ವಪ್ರಿಯನಂದಜಿ ಅವರಿಗೆ ಮಂಗಳೂರಿನ ಸಾರ್ವಜನಿಕರ ಪರವಾಗಿ ಗೌರವಾಭಿನಂದನೆ ಸಲ್ಲಿಸಲಾಯಿತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಕಲ್ಲಡ್ಕ ಪ್ರಭಾಕರ ಭಟ್, ಶಾರದಾ ಸಮೂಹ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಹಾಂಗ್ಯೋ ಐಸ್ ಕ್ರೀಮ್ ಪ್ರೈವೇಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ್ ಜಿ. ಪೈ, ಉಡುಪಿಯ ಬೋಳಾಸ್ ಆಗ್ರೋ ಪ್ರೈವೆಟ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ದಾಮೋದರ್ ಕಾಮತ್, ಎಸ್.ಸಿ.ಎಸ್. ಆಸ್ಪತ್ರೆಯ ಚೇರ್ಮನ್ ಡಾ.ಜೀವರಾಜ್ ಸೊರಕೆ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕಾರ್ಯದರ್ಶಿ ರಮೇಶ್, ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸ್ಥಾಪಕ ಗಣೇಶ್ ಕಾರ್ಣಿಕ್ ಇದ್ದರು. ಸ್ವಾಮಿ ಸರ್ವಪ್ರಿಯಾನಂದಜಿ ಅವರಿಂದ ‘ದ ಸರ್ಚ್ ಲಾಸ್ಟಿಂಗ್ ಹ್ಯಾಪಿನೆಸ್’ಎಂಬ ವಿಷಯದ ಕುರಿತು ಉಪನ್ಯಾಸ ನೆರವೇರಿತು. ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು. ಸ್ಮಿತಾ ಶೆಣೈ ನಿರ್ವಹಿಸಿದರು.