ಅಮೀನಗಡ ಸಮೀಪದ ಐತಿಹಾಸಿಕ ಐಹೊಳೆಯಲ್ಲಿರುವ ಪುರಾಣ ಪ್ರಸಿದ್ದ ರಾಮಲಿಂಗೇಶ್ವರ ದೇವರ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಅಮೀನಗಡ

ಸಮೀಪದ ಐತಿಹಾಸಿಕ ಐಹೊಳೆಯಲ್ಲಿರುವ ಪುರಾಣ ಪ್ರಸಿದ್ದ ರಾಮಲಿಂಗೇಶ್ವರ ದೇವರ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ತ ಬೆಳಗ್ಗೆ ರಾಮಲಿಂಗೇಶ್ವರ ದೇವರಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ಅಲಂಕಾರ ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಕಳಸದ ಮೆರವಣಿಗೆ. ಸಂಜೆ 6 ಕ್ಕೆ ರಾಮಲಿಂಗೇಶ್ವರ ಮಹಾ ರಥೋತ್ಸವ ಜರುಗಿತು. ರಥೋತ್ಸವದಲ್ಲಿ ತಾಪಂ ಮಾಜಿ ಅಧ್ಯಕ್ಷ ಯುವರಾಜ್ ಎಂ.ದೇಸಾಯಿ, ಬಿ.ಸಿ. ಅಂಟರತಾನಿ, ಗುತ್ತಿಗೆದಾರರಾದ ಸಿದ್ದು ಹಿರೇಮಠ (ನಿಂಬಲಗುಂದಿ), ಸಿದ್ದು ಹೂಗಾರ, ಗ್ರಾಪಂ ಸದಸ್ಯ ಶರಣಪ್ಪ ಮಾಲಗಿತ್ತಿ, ದ್ಯಾವಪ್ಪ ಆಸಂಗಿ,ಪರಸಪ್ಪ ಕುರಿ, ವಿಶಾಲ ದೇಸಾಯಿ, ಅಮರೇಶ ನಾಶಿ, ನಾಗನಗೌಡ ಪಾಟೀಲ, ಪ್ರವಾಸಿ ಮಾರ್ಗದರ್ಶಿಗಳಾದ ಪರಶುರಾಮ ಗೋಡಿ, ಶರಣಪ್ಪ ಮಾಯಾಚಾರಿ, ಕೊಟ್ರೇಶ ಸಾರಂಗಮಠ ಹಾಗೂ ಐಹೊಳೆ, ಕೆಲೂರ, ನಿಂಬಲಗುಂದಿ, ಕಳ್ಳಿಗುಡ್ಡ, ರಾಮಥಾಳ, ಕಮತಗಿ, ಅಮೀನಗಡ, ಸೂಳೇಬಾವಿ, ಕುಣಬೆಂಚಿ, ಸಿದ್ದನಕೊಳ್ಳ, ಬೆನಕನವಾರಿ, ಗುಡೂರ ಮುಂತಾದ ನಗರ, ಪಟ್ಟಣಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಉತ್ತತ್ತಿ, ಖರ್ಜೂರ ಎಸೆದು ಹರಕೆ ತೀರಿಸಿದರು. ರಾತ್ರಿ 10 ಗಂಟೆಗೆ ಜಾತ್ರಾ ಮಹೋತ್ಸವ ನಿಮಿತ್ತ ಪರಶುರಾಮ ಮಾದರ ವಿರಚಿತ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್‌ ನಾಟಕ ಪ್ರದರ್ಶನ ಜರುಗಿತು.