ರಾಮನಗರ: ಏಷ್ಯಾನೆಟ್ ಸುವರ್ಣ ನ್ಯೂಸ್ , ಕನ್ನಡಪ್ರಭ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ ನವೆಂಬರ್ 13 ರಿಂದ 15ರವರೆಗೆ ಮೂರು ದಿನಗಳ ಕಾಲ ರೇಷ್ಮೆನಾಡಿನ ಜನತೆಗಾಗಿ ಆಯೋಜಿಸಿರುವ ಲೈಫ್ಸ್ಟೈಲ್, ಫ್ಯಾಷನ್ ಹಾಗೂ ಫುಡ್ ಫೆಸ್ಟಿವಲ್ ರಾಮನಗರ ಸಂಭ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ
ರಾಮನಗರ: ಏಷ್ಯಾನೆಟ್ ಸುವರ್ಣ ನ್ಯೂಸ್ , ಕನ್ನಡಪ್ರಭ ಹಾಗೂ ಇಂಡ್ ವೇಲ್ಸ್ ಇನೋವೇಶನ್ಸ್ ಪ್ರೈವೆಟ್ ಲಿಮಿಟೆಡ್ ನವೆಂಬರ್ 13 ರಿಂದ 15ರವರೆಗೆ ಮೂರು ದಿನಗಳ ಕಾಲ ರೇಷ್ಮೆನಾಡಿನ ಜನತೆಗಾಗಿ ಆಯೋಜಿಸಿರುವ ಲೈಫ್ಸ್ಟೈಲ್, ಫ್ಯಾಷನ್ ಹಾಗೂ ಫುಡ್ ಫೆಸ್ಟಿವಲ್ ''''''''''''''''ರಾಮನಗರ ಸಂಭ್ರಮ'''''''''''''''' ಕ್ಕೆ ಸಿದ್ಧತೆಗಳು ಪೂರ್ಣಗೊಂಡಿದೆ.
ಫ್ರೀಡಮ್ ಹೆಲ್ತಿ ಕುಕಿಂಗ್ ಆಯಿಲ್ , ಭಾಗ್ಯಲಕ್ಷ್ಮಿ, ಗಣೇಶ್ ಜ್ಯುವೆಲರ್ಸ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಸಮರ್ಥ್ ಟಿವಿಎಸ್ , ನಂದಿ ಟೊಯೋಟಾ ಸಹಯೋಗದೊಂದಿಗೆ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ರಾಮನಗರ ಸಂಭ್ರಮ ಸಮಾರಂಭ ನಡೆಯಲಿದೆ.ಈ ಮೇಳದಲ್ಲಿ ಕರ್ನಾಟಕದ ನೆಚ್ಚಿನ ತಿಂಡಿ ತಿನಿಸುಗಳ ರುಚಿಯನ್ನು ಸವಿಯುವ ಅವಕಾಶವಿದೆ. ಸಾಂಪ್ರದಾಯಿಕ ಹಾಗೂ ಆಧುನಿಕ ಆಹಾರ ಪದಾರ್ಥಗಳ ಸ್ಟಾಲ್ಗಳು, ಶಾಪಿಂಗ್ಗೆ ಅನುಕೂಲವಾಗುವಂತೆ ವೈವಿಧ್ಯಮಯ ಫ್ಯಾಷನ್ ವಸ್ತುಗಳು, ಬಟ್ಟೆ, ಆಭರಣ ಹಾಗೂ ಜೀವನಶೈಲಿ ಉತ್ಪನ್ನಗಳ ಮಾರಾಟ ನಡೆಯಲಿದೆ. ಜೊತೆಗೆ ಮನರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಕುಟುಂಬ ಸಹಿತ ಆನಂದಿಸಬಹುದಾದ ವಿಶೇಷ ಆಕರ್ಷಣೆಗಳು ಇರಲಿವೆ.
ಸ್ಥಳೀಯ ವ್ಯಾಪಾರಿಗಳು, ಉದ್ಯಮಿಗಳು ಹಾಗು ಸ್ಟಾಲ್ ನಿರ್ವಾಹಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ಟಾಲ್ ಬುಕಿಂಗ್ ಮಾಡಲು 8971519734, 9986565888ಸಂಖ್ಯೆಗಳಿಗೆ ಸಂಪರ್ಕಿಸಬಹುದು. ರಾಮನಗರ ಜನತೆಯ ಉತ್ಸಾಹ, ಶಾಪಿಂಗ್ ಹಾಗು ರುಚಿಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಯೋಜಕರು ಈ ಸಂಭ್ರಮವನ್ನು ಏರ್ಪಡಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಭಾವಹಿಸುವಂತೆ ಜನರಿಗೆ ಮುಕ್ತ ಆಹ್ವಾನ ನೀಡಲಾಗಿದ್ದು, ಪ್ರವೇಶ ಉಚಿತವಾಗಿದೆ.ವಿವಿಧ ಸ್ಪರ್ಧೆಗಳು :
ಅಡುಗೆ ಮಹಾರಾಣಿ, ಮುದ್ದು ಮಗು, ನೃತ್ಯ, ಫ್ಯಾಮಿಲಿ ಫ್ಯಾಷನ್ ಶೋ, ಬೊಂಬಾಟ್ ಜೋಡಿ, ವೇಷ ಭೂಷಣ, ಗಾಯನ, ಕಿಡ್ಸ್ ಫ್ಯಾಷನ್ ಶೋ, ಚಿತ್ರಕಲಾ ಸ್ಪರ್ಧೆ ಹಾಗೂ ಬೆಂಕಿ ರಹಿತ ಅಡುಗೆ ಸ್ಪರ್ಧೆಗಳು ನಡೆಯಲಿವೆ.ಮೂರು ದಿನಗಳ ಕಾರ್ಯಕ್ರಮದಲ್ಲಿ ಕಿರುತೆರೆ ಮತ್ತು ಚಲನಚಿತ್ರ ನಟ ನಟಿಯರು ಭಾಗವಹಿಸಿ ರಾಮನಗರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.
ಈ ಸಂಭ್ರಮದಲ್ಲಿ ನೀವು ಭಾಗಿಯಾಗಿ ಕರ್ನಾಟಕದ ನೆಚ್ಚಿನ ತಿಂಡಿ-ತಿನಿಸುಗಳ ರುಚಿಯನ್ನು ಸವಿಯಬಹುದು, ಶಾಪಿಂಗ್ ಹಾಗೂ ವೈವಿಧ್ಯಮಯ ಫ್ಯಾಷನ್ ವಸ್ತುಗಳನ್ನು ಖರೀದಿಸಬಹುದು, ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಬಹುದು, ಒಂದೇ ಸೂರಿನಡಿ ಎಲ್ಲವನ್ನೂ ಆನಂದಿಸುವ ಸುವರ್ಣಾವಕಾಶ ನೀಡಲಾಗುತ್ತಿದ್ದು ಎಲ್ಲರೂ ಭಾಗಿಯಾಗಿ ಸದುಪಯೋಗ ಪಡಿಸಿಕೊಳ್ಳಲು ಕೋರುತ್ತೇವೆ.ಬಾಕ್ಸ್............
ಶಾಸಕ ಇಕ್ಬಾಲ್ ಹುಸೇನ್ ಅವರಿಂದ ಚಾಲನೆ:ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ರಾಮನಗರದಲ್ಲಿ ನವೆಂಬರ್ 13ರಿಂದ 15ರವರೆಗೆ ಆಯೋಜಿಸಿರುವ ರಾಮನಗರ ಸಂಭ್ರಮಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಲಿದ್ದಾರೆ.
ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ನಗರಸಭೆ ಆಯುಕ್ತ ಡಾ.ಜಯಣ್ಣ,ಗಣೇಶ್ ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್ , ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಕುಮಾರಸ್ವಾಮಿ, ನಗರಸಭೆ ಮಾಜಿ ಸದಸ್ಯ ಬೈರೇಗೌಡ ಮತ್ತಿತರರು ಭಾಗವಹಿಸುವರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ರಾಮನಗರ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ವೇದಿಕೆ ಕಾರ್ಯಕ್ರಮದ ನಂತರ ಕನ್ನಡ ಕೋಗಿಲೆ ಸೂಪರ್ ಸಿಂಗರ್ ಖ್ಯಾತಿಯ ಚನ್ನಪ್ಪ ಯಾವಗಲ್ , ಗಾಯಕ ಲೋಕೇಶ್ ವೈಷ್ಣವಿ ಮೆಲೋಡಿಸ್ ಅವರಿಂದ ಸಂಗೀತ ಸಂಜೆ ಹಾಗೂ ಮಿಮಿಕ್ರಿ ಸಾಗರ್ ಅವರಿಂದ ಹಾಸ್ಯ ಸಂಜೆ ನಡೆಯಲಿದೆ.12ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಮನಗರ ಸಂಭ್ರಮಕ್ಕೆ ಸಿದ್ಧತೆಗಳು ನಡೆದಿರುವುದು.