ರಾಮನಗರ: ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿರುವ ನೆರೆಯ ತೆಲಂಗಾಣ ರಾಜ್ಯದ 44 ಪ್ರೊಬೇಷನರಿ ಡೆಪ್ಯೂಟಿ ಕಲೆಕ್ಟರ್‌ಗಳು ಶುಕ್ರವಾರ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರಕ್ಕೆ ಭೇಟಿ ನೀಡಿದ್ದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಭೂದಾಖಲೆಗಳ ನಿರ್ವಹಣೆ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಸಮೀಕ್ಷೆ, ಕಂದಾಯ ಮತ್ತು ನೋಂದಣಿ ಇಲಾಖೆಗಳ ಕಾರ್ಯನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ತರಬೇತಿ ನೀಡಿದರು.ಜಿಲ್ಲೆಯ ಭೂದಾಖಲೆಗಳ ನಿರ್ವಹಣೆಯಲ್ಲಿ ಅನುಸರಿಸುತ್ತಿರುವ ನೂತನ ವಿಧಾನಗಳು ಸೇರಿದಂತೆ ಜಿಲ್ಲೆಯ ಕಂದಾಯ ಇಲಾಖೆಗಳ ನಿರ್ವಹಣೆ, ಕಾರ್ಯವೈಖರಿ ಸಾರ್ವಜನಿಕರಿಗೆ ಅಧಿಕಾರಿಗಳು ಸ್ಪಂದಿಸಿ ಕಾಲ ಮಿತಿಯೊಳಗೆ ಅವರ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಬಗ್ಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ರಾಮನಗರ ತಹಸೀಲ್ದಾರರಾದ ತೇಜಸ್ವಿನಿ, ಉಪ ನೋಂದಣಾಧಿಕಾರಿ ಶ್ರೀದೇವಿ, ಡಿಡಿಎಲ್‌ ಆರ್ ಹನುಮೇಗೌಡ, ಭೂಮಿ ಮೇಲ್ವಿಚಾರಣಾ ಕೋಶದ ಉಪ ತಹಸೀಲ್ದಾರ್ ಅರುಣ್ ಸಾಗರ್, ತೆಲಂಗಾಣ ರಾಜ್ಯದ ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

15ಕೆಆರ್ ಎಂಎನ್ 6.ಜೆಪಿಜಿ

ತೆಲಂಗಾಣ ರಾಜ್ಯದ ಪ್ರೊಬೇಷನರಿ ಡೆಪ್ಯೂಟಿ ಕಲೆಕ್ಟರ್‌ಗಳನ್ನು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಚಂದ್ರಯ್ಯ, ರಾಮನಗರ ತಹಸೀಲ್ದಾರರಾದ ತೇಜಸ್ವಿನಿ, ಉಪ ನೋಂದಣಾಧಿಕಾರಿ ಶ್ರೀದೇವಿ, ಡಿಡಿಎಲ್‌ ಆರ್ ಹನುಮೇಗೌಡ, ಭೂಮಿ ಮೇಲ್ವಿಚಾರಣಾ ಕೋಶದ ಉಪ ತಹಸೀಲ್ದಾರ್ ಅರುಣ್ ಸಾಗರ್, ತೆಲಂಗಾಣ ರಾಜ್ಯದ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.