ತಾಲೂಕಿನ ರಾಮನಗುಡ್ಡ ಕೆರೆ ಕಳೆದ 40 ವರ್ಷಗಳ ಹಿಂದೆ ನಿರ್ಮಾಣವಾಗಿ ನೀರಿಲ್ಲದೆ ಬರಿದಾಗಿತ್ತು. ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಯೋಜನೆ ಕಲ್ಪಿಸುವ ಸದುದ್ದೇಶದಿಂದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಜ.16 ರಂದು ಚಾಲನೆ ನೀಡುವುದಾಗಿ ಶಾಸಕ ಎಂ. ಆರ್‌. ಮಂಜುನಾಥ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಎರಡುವರೆ ಕೋಟಿ ವೆಚ್ಚದಲ್ಲಿ 1.45 ಕಿ.ಮೀ ಪೈಪ್ ಲೈನ್ ಕಾಮಗಾರಿ ಮುಗಿದ ಹಿನ್ನೆಲೆ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಲೋಕಾರ್ಪಣೆಗೊಳಿಸಲು ಆರಂಭವಾಗಿದೆ. ಕೆರೆಗೆ ನೀರು ತುಂಬಿಸುವ ಸಲುವಾಗಿ ಬೂದುಬಾಳು ಪೈಪ್ ಲೈನ್ ಡೆಲಿವರಿ ಚೇಂಬರ್ ನಿಂದ 1.45 ಕಿಲೋ ಮೀಟರ್ ಪೈಪ್ಲೈನ್ ಕಾಮಗಾರಿ ಮುಗಿದು, ಚೇಂಬರ್ ನಿರ್ಮಾಣವಾಗಿದೆ. ಈ ಕೆರೆಗೆ 40 ವರ್ಷಗಳ ಇತಿಹಾಸ ಇದೆ. ಚಿಂಚೋಳಿ, ರಾಯರ ದೊಡ್ಡಿ, ಎಡರಳ್ಳಿ ದೊಡ್ಡಿ ಭಾಗದ 900 ಎಕರೆ ಜಮೀನಿಗೆ ನೀರಾವರಿಗೆ ಅನುಕೂಲವಾಗಲಿದೆ. ...

ಕೆರೆಗೆ ನೀರು ತುಂಬಿಸುವ ಯೋಜನೆಯಿಂದ ರೈತರಿಗೆ ಅನುಕಟ್ವಾಗಲಿದೆ. ಬರಡು ಭೂಮಿಗೆ ನೀರಾವರಿ ಯೋಜನೆ ಕಲ್ಪಿಸುತ್ತಿರುವುದು ಶ್ಲಾಘನೀಯ.

ವಿನೇಶ್‌, ರೈತ ಮುಖಂಡ, ರಾಯರ ದೊಡ್ಡಿ

ಹಲವಾರು ವರ್ಷಗಳಿಂದ ಕೆರೆಗೆ ನೀರು ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿತ್ತು. ಉಳಿದ ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು .

ಅಮೋಘ, ರೈತ ಮುಖಂಡ, ರಾಯರ ದೊಡ್ಡಿ

ರಾಮನಗುಡ್ಡ ಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಅನುಕೂಲಕ್ಕಾಗಿ ಕಾವೇರಿ ನದಿಯಿಂದ ಪೈಪ್‌ಲೈನ್‌ ಮೂಲಕ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಜ. 16ರಂದು ಕೆರೆಗೆ ನೀರು ತುಂಬಿಸುವ ಬಗ್ಗೆ ದಿನಾಂಕ ನಿಗದಿಯಾಗಿದೆ. ಕೆರೆಗೆ ನೀರು ತುಂಬಿಸುವ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿರುವ ಕೆರೆಗಳಿಗೂ ನೀರು ತುಂಬಿಸುವ ಯೋಜನೆಯನ್ನು ಪೂರ್ಣಗೊಳಿಸಲು ನೀಲ ನಕ್ಷೆ ತಯಾರು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಎಂ.ಆರ್‌. ಮಂಜುನಾಥ್, ಶಾಸಕ, ಹನೂರು ವಿಧಾನಸಭಾ ಕ್ಷೇತ್ರ