ಹಿಂದೂಧರ್ಮ ಉತ್ತುಂಗಕ್ಕೇರಲು ರಾಮಾನುಜರ ಪಾತ್ರ ಅಪಾರ: ಪರಂಧಾಮರೆಡ್ಡಿ

| Published : May 14 2024, 01:03 AM IST

ಹಿಂದೂಧರ್ಮ ಉತ್ತುಂಗಕ್ಕೇರಲು ರಾಮಾನುಜರ ಪಾತ್ರ ಅಪಾರ: ಪರಂಧಾಮರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶಿಷ್ಟಾದ್ವೈತ ತತ್ವದ ಮೂಲಕ ಹಿಂದೂಧರ್ಮಕ್ಕೆ ತನ್ನದೆ ಕೊಡುಗೆ ನೀಡಿದರು. ಇಂತಹ ದಾರ್ಶನಿಕರ ತತ್ವಾದರ್ಶಗಳನ್ನು ಅವಡಿಸಿಕೊಂಡು ನಡೆದರೆ ಮನುಷ್ಯನ ಜೀವನ ಸಾರ್ಥಕವಾಗಲಿದೆ ಎಂದು ಹಿರಿಯ ಕಲಾವಿದ ಪರಂಧಾಮರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಕನಕಗಿರಿ

ಹಿಂದೂಧರ್ಮ ಉತ್ತುಂಗಕ್ಕೆ ಬೆಳೆಸಲು ರಮಾನುಜರ ಪಾತ್ರ ಅಪಾರವಾಗಿದೆ ಎಂದು ಹಿರಿಯ ಕಲಾವಿದ ಪರಂಧಾಮರೆಡ್ಡಿ ಹೇಳಿದರು.

ಶ್ರೀರಾಘವೇಂದ್ರ ಭಜನಾ ಮಂಡಳಿಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಮಾನುಜಾಚಾರ್ಯರ ಜಯಂತ್ಯುತ್ಸವ ನಿಮಿತ್ತ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಮಾನುಜರು ಜ್ಞಾನ ಹಾಗೂ ಕರ್ಮ ಯೋಗವನ್ನು ಪ್ರತಿಪಾದಿಸುತ್ತಿದ್ದರು. ವಿಶಿಷ್ಟಾದ್ವೈತ ತತ್ವದ ಮೂಲಕ ಹಿಂದೂಧರ್ಮಕ್ಕೆ ತನ್ನದೆ ಕೊಡುಗೆ ನೀಡಿದರು. ಇಂತಹ ದಾರ್ಶನಿಕರ ತತ್ವಾದರ್ಶಗಳನ್ನು ಅವಡಿಸಿಕೊಂಡು ನಡೆದರೆ ಮನುಷ್ಯನ ಜೀವನ ಸಾರ್ಥಕವಾಗಲಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ರಾಮಾನುಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರ ಕುರಿತು ದಾಸವರಣ್ಯರು ರಚಿಸಿದ ಕಿರ್ತನೆಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು. ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಅರ್ಚಕರಾದ ಕಂಠೆಪ್ಪ, ರಾಮಣ್ಣ, ಪ್ರಮುಖರಾದ ಸುರೇಶರೆಡ್ಡಿ ಮಹಲಿನಮನಿ, ಭೀಮರೆಡ್ಡಿ ಓಣಿಮನಿ, ಮೋಹನ ಅಚ್ಚಲಕರ, ವಿಜಯಕುಮಾರ ಹೊಸಳ್ಳಿ, ಭೀಮರಾವ್ ಮರಾಠ, ಗಣೇಶ ಕಳ್ಳಿ, ದೊಡ್ಡಬಸಪ್ಪ ಭತ್ತದ, ವೀರೇಶ ವಸ್ತ್ರದ, ವಿನಯ ಪತ್ತಾರ, ಭರತರೆಡ್ಡಿ ಅಗಸನೂರು, ಮಂಜುನಾಥ ಕುಂಬಾರ ಇತರರು ಇದ್ದರು.