ಸಾರಾಂಶ
ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಶ್ರೀಕೃಷ್ಣ ಭವನ ಹೋಟೆಲ್ ಮುಂಭಾಗದಲ್ಲಿ ಅಯೋಧ್ಯೆ ಶ್ರೀಬಾಲರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಶ್ರೀರಾಮ ಭಕ್ತರು ಸಾರ್ವಜನಿಕರಿಗೆ ಉಚಿತ ಮಜ್ಜಿಗೆಯನ್ನು ವಿತರಿಸುವ ಮೂಲಕ ಭಕ್ತಿ ಪ್ರದರ್ಶಿಸಿದರು.
ಚಳ್ಳಕೆರೆ: ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಶ್ರೀಕೃಷ್ಣ ಭವನ ಹೋಟೆಲ್ ಮುಂಭಾಗದಲ್ಲಿ ಅಯೋಧ್ಯೆ ಶ್ರೀಬಾಲರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಶ್ರೀರಾಮ ಭಕ್ತರು ಸಾರ್ವಜನಿಕರಿಗೆ ಉಚಿತ ಮಜ್ಜಿಗೆಯನ್ನು ವಿತರಿಸುವ ಮೂಲಕ ಭಕ್ತಿ ಪ್ರದರ್ಶಿಸಿದರು.
ನಿವೃತ್ತ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಎನ್.ಪ್ರೇಮ ಕುಮಾರ್ ಮಾತನಾಡಿ, ಅಯೋಧ್ಯೆಯ ಬಾಲರಾಮನ ಪ್ರತಿಷ್ಠಾಪನಾ ಕಾರ್ಯ ವಿಶ್ವಮನ್ನಣೆಗಳಿಸಿದೆ. ಭಾರತದ ಇತಿಹಾಸದಲ್ಲಿ ಯಾವುದೇ ದೇವಸ್ಥಾನ ನಿರ್ಮಾಣವಾದರೂ ವಿಶ್ವಕೀರ್ತಿಗಳಿಸಿರಲಿಲ್ಲ. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ಪುಣ್ಯ ಕಾರ್ಯನಡೆದಿದ್ದು, ಇದು ಕೋಟಿ-ಕೋಟಿ ರಾಮಭಕ್ತರಿಗೆ ಹೆಚ್ಚು ಸಂತಸ ಉಂಟು ಮಾಡಿದೆ. ಕಳೆದ ಸಾವಿರಾರು ವರ್ಷಗಳಿಂದ ಸನಾತನ ಹಿಂದೂಧರ್ಮವನ್ನು ಆಚರಣೆ ಮಾಡಿಕೊಂಡು ಬಂದಿರುವ ಕೋಟಿ, ಕೋಟಿ ಹಿಂದೂ ಭಕ್ತರಿಗೆ ಶ್ರೀರಾಮಚಂದ್ರನ ಆದರ್ಶಗಳೇ ಅಡಿಪಾಯ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಶ್ರೀರಾಮನನ್ನು ಆದರ್ಶವಾಗಿಟ್ಟುಕೊಂಡು ತನ್ನ ಬದುಕನ್ನು ನಿರೂಪಿಸಿಕೊಂಡರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಸಿಸಿಚಾನಲ್ ಎಂಡಿಜಿ ಯಶವಂತ ಕುಮಾರ್, ಕೃಷ್ಣ ಹೋಟೆಲ್ ಮಾಲೀಕ ಕಿಶೋರ್‌ಶೆಟ್ಟಿ, ಮಡಿವಾಳ ಸಮುದಾಯದ ಯುವ ಮುಖಂಡ ಕರೀಕೆರೆ ನಾಗರಾಜು, ಲಕ್ಷ್ಮಿಪುರದ ಹೇಮಂತ ರೆಡ್ಡಿ, ಚಂದ್ರಶೇಖರ್ ಐತಾಳ್, ಎಂ. ಎಸ್.ಮಾರುತಿ, ಎಂ.ಸಂಜೀವಪ್ಪ ಮುಂತಾದವರು ಮಜ್ಜಿಗೆ ವಿತರಿಸಿದರು.