ಸಾರಾಂಶ
ವಾಲ್ಮೀಕಿ ರಚಿಸಿದ ರಾಮಾಯಾಣ ಭಾರತದ ಸಂಸ್ಕೃತಿ ಹಾಗೂ ಇತಿಹಾಸದ ವೈಭೋಗವನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ.
ಧಾರವಾಡ:
ತ್ರೇತಾಯುಗದಲ್ಲಿ ಜನಿಸಿದ, ಕ್ರೂರಿಯಾಗಿದ್ದ ವಾಲ್ಮೀಕಿಯು ರತ್ನಾಕರ ನಾರದ ಮುನಿಗಳ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಮಹರ್ಷಿ ವಾಲ್ಮೀಕಿಯಾಗಿ ಬದಲಾದ ಘಟನೆ ರೋಚಕ ಎಂದು ಜೆಎಸ್ಸೆಸ್ಸ್ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.ಜೆಎಸ್ಸೆಸ್ ಸಂಸ್ಥೆಯಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಅವರು, ವಾಲ್ಮೀಕಿ ರಚಿಸಿದ ರಾಮಾಯಾಣ ಭಾರತದ ಸಂಸ್ಕೃತಿ ಹಾಗೂ ಇತಿಹಾಸದ ವೈಭೋಗವನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ ಎಂದರು.
ರಾಮಾಯಣದಲ್ಲಿ ಮಾತೃ ಹಾಗೂ ಪಿತೃ ಭಕ್ತಿ, ಸ್ವಾಮಿಭಕ್ತಿ, ರಾಜಭಕ್ತಿ, ಸಹೋದರತ್ವ, ಸಾಮಾಜಿಕ ಕಳಕಳಿ, ಧಾರ್ಮಿಕ ವಿಚಾರಗಳು, ಕೌಟುಂಬಿಕ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಒಬ್ಬ ವ್ಯಕ್ತಿಯಲ್ಲಿ ತಾಯಿ, ಗುರುವಿನ ಪ್ರಾಮುಖ್ಯತೆ, ಅತಿಥಿ ಸತ್ಕಾರದಲ್ಲಿ ದೇವರನ್ನು ಕಾಣುವ ಪರಿ, ಸಂಬಂಧಗಳ ಬೆಸುಗೆ, ವಾಕ್ಯ ಪರಿಪಾಲನೆಯಂತಹ ವಿಷಯಗಳು ವರ್ಣಿಸಲು ಅಸಾಧ್ಯ. ಜನರು ತಾವು ಮಾಡುತ್ತಿರುವ ಕೆಲಸ ಹಾಗೂ ಜೀವನಶೈಲಿ ಹೇಗಿದೆ ಎಂಬ ಅರಿವು ಅವರಿಗೆ ಇರುವುದಿಲ್ಲ. ಸರಿಯಾದ ಮಾರ್ಗ ತೋರಿಸಲು ನಾರದ ಮುನಿಗಳಂತ ಗುರುವಿರಬೇಕು. ಅಂದಾಗ ಪ್ರತಿಯೊಬ್ಬ ವ್ಯಕ್ತಿಯೂ ವಾಲ್ಮೀಕಿಯಂತಹ ಜ್ಞಾನ ಪಡೆಯಬಹುದು ಎಂದರು.ಪ್ರಾಚಾರ್ಯ ಮಹಾವೀರ ಉಪಾದ್ಯೆ ನಿರೂಪಿಸಿದರು. ಡಾ. ಸೂರಜ್ ಜೈನ್ ವಂದಿಸಿದರು. ಜಿನ್ನಪ್ಪ ಕುಂದಗೋಳ, ವಿವೇಕ ಲಕ್ಷ್ಮೇಶ್ವರ, ಶ್ರೀಕಾಂತ ರಾಗಿ ಕಲ್ಲಾಪೂರ, ಎನ್.ಎಲ್. ಪುಡಕಲಕಟ್ಟಿ, ಭಲಭೀಮ ಹಾವನೂರ ಇದ್ದರು.