ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

| Published : Dec 26 2023, 01:30 AM IST

ಸಾರಾಂಶ

ಕುರುಗೋಡು ತಾಲೂಕಿನ ಸಿದ್ದರಾಂಪುರ ಗ್ರಾಮದ ಸಿದ್ದೇಶ್ವರ ತಾತನವರ ಮಠದಲ್ಲಿ 19ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಅಡ್ಡಪಲ್ಲಕ್ಕಿ ಸೇವೆ ನಡೆಯಿತು.

ಕುರುಗೋಡು: ಭಕ್ತರಿಗೆ ಅಧ್ಯಾತ್ಮದ ಸನ್ಮಾರ್ಗದ ತೋರಿದ ಕದಳೀವನ ಸಿದ್ದೇಶ್ವರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ರಂಭಾಪುರಿಯ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಶ್ರೀಗಳು ಬಣ್ಣಿಸಿದರು.

ಸಮೀಪದ ಸಿದ್ದರಾಂಪುರ ಗ್ರಾಮದ ಸಿದ್ದೇಶ್ವರ ತಾತನವರ ಮಠದಲ್ಲಿ 19ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಜರುಗಿದ ಅಡ್ಡಪಲ್ಲಕ್ಕಿ ಸೇವೆ ಸ್ವೀಕರಿಸಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮ ಪಾಲನೆಯ ಸೂತ್ರವನ್ನು ಸಿದ್ದೇಶ್ವರ ತಾತನವರು ಜೀವನದುದ್ದಕ್ಕೂ ಅನುಸರಿಸಿದ ಪರಿಣಾಮ ಸಾವಿರಾರು ಭಕ್ತ ಹೃದಯಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂಬುದಕ್ಕೆ ಇಲ್ಲಿ ನೆರೆದಿರುವ ಭಕ್ತರೇ ಸಾಕ್ಷಿ ಎಂದರು.

ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಶ್ರೀ ಮಾತನಾಡಿ, ಗುರುವಿನ ಕೈಯಲ್ಲಿ ಅರಳಿದ ಭಕ್ತರು ಸಂಸ್ಕಾರವಂತರಾಗಿ ಸನ್ಮಾರ್ಗದಲ್ಲಿ ನಡೆಯುತ್ತಾರೆ ಎಂದರು.ಅಡ್ಡಪಲ್ಲಕ್ಕಿ: ಗ್ರಾಮದ ಮುಖ್ಯರಸ್ತೆಯಿಂದ ಪ್ರಾರಂಭಗೊಂಡ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠದಲ್ಲಿ ಸಮಾವೇಶಗೊಂಡಿತು. ಮಲ್ಲಿಕಾರ್ಜುನ ಶ್ರೀ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಚಿದಾನಂದ ತಾತ, ಕಲ್ಯಾಣ ಶ್ರೀ, ಸೋಮನಾಥ ಶ್ರೀ, ವೀರಭದ್ರ ಶ್ರೀ, ನಾಗಭೂಷಣ ಶ್ರೀ, ಕುಮಾರಸ್ವಾಮಿ ತಾತ, ಗಂಗಾಧರ ತಾತ ಮತ್ತು ಸೋಮಣ್ಣ ತಾತ, ಕರಿಸಿದ್ದೇಶ್ವರ ಶ್ರೀ, ಅಭಿನವ ಸಿದ್ದಲಿಂಗ ಶ್ರೀ, ಶಿವಯೋಗಿ ಶಿವಾಚಾರ್ಯ ಶ್ರೀಗಳು, ಅಜಾತಶಂಭುಲಿಂಗ ಶ್ರೀಗಳು, ಅಭಿನವ ಪ್ರಭುಸ್ವಾಮಿಗಳು, ಸಿದ್ದಲಿಂಗ ಶ್ರೀಗಳು, ನಂಜುಂಡಿ ತಾತನವರು, ಸಿದ್ದಯ್ಯ ತಾತನವರು, ಶಿವಪ್ಪ ತಾತನವರು, ದೊಡ್ಡಬಸವರಾರ್ಯ ತಾತನವರು ಇದ್ದರು.