ಸಾರಾಂಶ
ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಮಾರ್ಚ್ ನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಮಾರ್ಚ್ ನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
ಮಾ.2ರಂದು ಸವದತ್ತಿ ತಾಲೂಕು ಹೂಲಿ ಸಾಂಬಯ್ಯನ ಮಠದಲ್ಲಿ ಲಿಂ. ಶ್ರೀ ಸಂಗಮೇಶ್ವರ ಅಜ್ಜನ ಲಿಂಗಾಂಗ ಸಾಮರಸ್ಯ ಸಮಾರಂಭ, 4ಕ್ಕೆ ಹುಬ್ಬಳ್ಳಿ ತಾಲೂಕು ಹಳ್ಳಿಯಾಳದಲ್ಲಿ ನಂದಿಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ಸಾನ್ನಿಧ್ಯ ವಹಿಸುವರು. 5ಕ್ಕೆ ಹರಿಹರದ ಮಲೆಬೆನ್ನೂರು ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಇಷ್ಟಲಿಂಗ ಮಹಾಪೂಜೆ, 6 ಮತ್ತು 7ರಂದು ಮುದ್ದೇಬಿಹಾಳದ ಕುಂಟೋಜಿಯಲ್ಲಿ ಪುರ ಪ್ರವೇಶ ಮತ್ತು ಹಿರೇಮಠದ ನೂತನ ಶ್ರೀಗಳವರ ಗುರು ಪಟ್ಟಾಧಿಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವರು. 8ಕ್ಕೆ ಬೆಳಿಗ್ಗೆ ವಿಜಯಪುರ ಜಿಲ್ಲೆ ಹೊರ್ತಿ ಕ್ಷೇತ್ರದಲ್ಲಿ ಇಷ್ಟಲಿಂಗ ಮಹಾಪೂಜಾ, ಸಂಜೆ ದಕ್ಷಿಣ ಸೊಲ್ಲಾಪುರದ ಮಾಳಕವಠೆ ಗ್ರಾಮದಲ್ಲಿ ಉತ್ಸವ ಮತ್ತು ಮಹಾಶಿವರಾತ್ರಿ ಸಮಾರಂಭ, 9ಕ್ಕೆ ಆಳಂದ ತಾಲೂಕು ಚಲಗೇರಾದಲ್ಲಿ ಧರ್ಮ ಜಾಗೃತಿ ಸಮಾರಂಭ, 10ರಂದು ಲಕ್ಷ್ಮೇಶ್ವರ ತಾಲೂಕು ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಲಿದ್ದಾರೆ.14ಕ್ಕೆ ಜಗಳೂರು ತಾಲೂಕು ಕೊಡದಗುಡ್ಡ ಕ್ಷೇತ್ರದಲ್ಲಿ ಯಾತ್ರಿ ನಿವಾಸ ಉದ್ಘಾಟನೆ ಮಾಡಲಿದ್ದಾರೆ. ಮಾ.20ರಿಂದ 26 ರವರೆಗೆ ಬಾಳೆಹೊನ್ನೂರು ರಂಭಾಪುರಿ ಮಹಾಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವ ಅಂಗವಾಗಿ ನಡೆದ ವಿವಿಧ ಧರ್ಮ ಸಮಾರಂಭಗಳ ಸಾನ್ನಿಧ್ಯವಹಿಸುವರು.
29ಕ್ಕೆ ಸಕಲೇಶಪುರದ ಎಸಳೂರಿನಲ್ಲಿ ಲಿಂ. ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳ ಪುಣ್ಯ ಸ್ಮರಣೋತ್ಸವ ಹಾಗೂ ಇಷ್ಟಲಿಂಗ ಮಹಾಪೂಜಾ, 30ಕ್ಕೆ ಸೊರಬ ತಾಲೂಕು ದುಗ್ಲಿಯಲ್ಲಿ ಜಾತ್ರಾ ಮಹೋತ್ಸವ ಸಮಾರಂಭ, 31ಕ್ಕೆ ಸೊರಬ ತಾಲೂಕು ಶಾಂತ ಪುರಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ೦೧ಬಿಹೆಚ್‌ಆರ್ ೨: ರಂಭಾಪುರಿ ಶ್ರೀ