ಸಾರಾಂಶ
ಕನ್ನಡಪ್ರಭ ವಾರ್ತೆ ಕಮತಗಿ
ಕಮತಗಿ ಪಪಂನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ ಜಮಖಂಡಿ ಅವರು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.ಈ ವೇಳೆ ಮಾತನಾಡಿದ ಅವರು, ತಮ್ಮೆಲ್ಲರ ಸಹಾಯ ಮತ್ತು ಸಹಕಾರದಿಂದ ನನಗೆ ದೊರತಿರುವ ಅಧ್ಯಕ್ಷ ಸ್ಥಾನವನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದರು.
ನಂತರ ಮಾತನಾಡಿದ ಬಾಗಲಕೋಟೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಕಮತಗಿ ಪಟ್ಟಣವನ್ನು ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಮಾದರಿಯ ಪಟ್ಟಣವನ್ನಾಗಿಸಲು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಬಸವರಾಜ ಕುಂಬಳಾವತಿ, ಗುರಲಿಂಗಪ್ಪ ಪಾಟೀಲ, ದೇವಿಪ್ರಸಾದ ನಿಂಬಲಗುಂದಿ, ಚಂದು ಕುರಿ, ಲಕ್ಷ್ಮಣ ಮಾದರ, ಹುಚ್ಚವ್ವ ಹಗೇದಾಳ, ನಂದಾ ದ್ಯಾಮಣ್ಣವರ, ಮಂಜುಳಾ ಮುರಾಳ, ಕಸ್ತೂರಿಬಾಯಿ ಬಾಗೇವಾಡಿ, ಸುಮಿತ್ರಾ ಲಮಾಣಿ, ಮುಖಂಡರಾದ ಎಸ್ ಎಸ್ ಮಂಕಣಿ, ಹುಚ್ಚಪ್ಪ ಸಿಂಹಾಸನ, ಮಹಾಂತೇಶ ಅಂಗಡಿ,ಯಲ್ಲಪ್ಪ ವಡ್ಡರ, ಎನ್ ಎಲ್ ತಹಶಿಲ್ದಾರ,ಶ್ರೀಕಾಂತ ಹಾಸಲಕರ,ಮಲ್ಲಪ್ಪ ಮೇದಾರ, ಗೋಪಾಲಪ್ಪ ವನಕಿ,ಗಂಗಪ್ಪ ಬೂತಲ,ಹನಮಂತ ಕಡಿವಾಲ,ಶಂಕ್ರಪ್ಪ ಹೆಬ್ಬಾಳ,ಹುಚ್ಚಪ್ಪ ಗೋಕಾವಿ,ಪರಸಪ್ಪ ಜಗ್ಗಲ,ರಮೇಶ ಲಮಾಣಿ,ಲಕ್ಷ್ಮಣ ದ್ಯಾಮಣ್ಣವರ,ಮುಸಂಗಪ್ಪ ಶಿನ್ನೂರ,ನಾಗೇಶ ಮುರಾಳ,ಕುಮಾರ ಶಿನ್ನೂರ,ಸಂಗಮೇಶ ಮನ್ನಿಕೇರಿ,ಯಲ್ಲಪ್ಪ ಮಾಗುಂಡಪ್ಪನವರ, ಪಪಂ ಮುಖ್ಯಾಧಿಕಾರಿ ಎಫ್ ಎನ್ ಹುಲ್ಲಿಕೇರಿ,ಪಪಂ ಸಿಬ್ಬಂದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.