ಸಾರಾಂಶ
ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಉಪಾಧ್ಯಕ್ಷೆ ಶೀಲಾ, ಹಿಂದಿನ ಅವಧಿಯ ನಿರ್ದೇಶಕರಾದ ಮಧುವನಹಳ್ಳಿ ರಮೇಶ್ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ. ಶೀಲ ಅವರು ಅವಿರೋಧ ಆಯ್ಕೆಯಾದರೆ, ಮಹದೇವಸ್ವಾಮಿ ಮತ್ತು ರಮೇಶ್ ಅವರು ಹೆಚ್ಚು ಮತಗಳಿಸಿ ಜಯಗಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಸಬಾ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನವಾಗಿ ಆಡಳಿತ ಮಂಡಳಿ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಹದೇವಸ್ವಾಮಿ ಅಲಿಯಾಸ್ ಸುರೇಶ್, ಎಂ.ಶೇಖರ್, ಎಸ್.ರವಿಕುಮಾರ್, ಮುಳ್ಳೂರು ಇಂದ್ರ, ಪುಟ್ಟಸ್ವಾಮಿ ಅಧಿಕ ಮತ ಪಡೆದು ಗೆಲುವು ಸಾಧಿಸಿದ್ದಾರೆ.ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಧುವನಹಳ್ಳಿ ರಮೇಶ್, ಸಾಮಾನ್ಯ ವರ್ಗದಿಂದ ಮಹದೇವಸ್ವಾಮಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಬಿಸಿಎಂಬಿ ಕ್ಷೇತ್ರದಿಂದ ಕಣದಲ್ಲಿದ್ದ ಸಿ ಬಸವರಾಜು ಅಧಿಕ ಮತಗಳೊಂದಿಗೆ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಮಂಜುನಾಥ್ ಅವರು ಎಸ್ಸಿ ಮೀಸಲು ಕ್ಷೇತ್ರದಿಂದ, ಎಸ್ ಟಿ ಮೀಸಲು ಕ್ಷೇತ್ರದಿಂದ ಲೋಕೇಶ್, ಸಾಲಗಾರರಲ್ಲದ ಕ್ಷೇತ್ರದಿಂದ ರಾಜಶೇಖರ್ ಆಯ್ಕೆಯಾಗಿದ್ದಾರೆ. ಉಳಿದಂತೆ ಮೀಸಲು ಕ್ಷೇತ್ರದಿಂದ ಶೀಲಾ ಮತ್ತು ಅನ್ನಪೂರ್ಣ (ಅಣಗಳ್ಳಿ ಬಸವರಾಜು ಅವರ ಪತ್ನಿ) ರವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕರನ್ನು ಕಾರ್ಯನಿರ್ವಣಾಧಿಕಾರಿ ನಾಗರಾಜು ಅಭಿನಂದಿಸಿದರು.2ನೇ ಬಾರಿ ಆಯ್ಯೆಯಾದವರು:
ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಉಪಾಧ್ಯಕ್ಷೆ ಶೀಲಾ, ಹಿಂದಿನ ಅವಧಿಯ ನಿರ್ದೇಶಕರಾದ ಮಧುವನಹಳ್ಳಿ ರಮೇಶ್ 2ನೇ ಅವಧಿಗೆಆಯ್ಕೆಯಾಗಿದ್ದಾರೆ. ಶೀಲ ಅವರು ಅವಿರೋಧ ಆಯ್ಕೆಯಾದರೆ, ಮಹದೇವಸ್ವಾಮಿ ಮತ್ತು ರಮೇಶ್ ಅವರು ಹೆಚ್ಚು ಮತಗಳಿಸಿ ಜಯಗಳಿಸಿದ್ದಾರೆ. 2021ರಲ್ಲಿ ಕೊಳ್ಳೇಗಾಲ ಪುರಸಭೆ ಸದಸ್ಯರಾಗಿದ್ದ ಮಠದ ಬೀದಿ ಬಸವರಾಜು ಅವರು ಚುನಾವಣೆಯಲ್ಲಿ ಹೆಚ್ಚು ಮತಗಳಿಸಿ ಆಯ್ಕೆಯಾಗಿರುವುದು ವಿಶೇಷ . ಅಲ್ಲದೆ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಅಣಗಳ್ಳಿ ಬಸವರಾಜು ಅವರು ಈ ಚುನಾವಣೆಯಲ್ಲಿ ಮುನ್ನೂರಕ್ಕೂ ಅಧಿಕ ಮತಗಳಿಸಿದ್ದರೂ ಸಹ ಗೆಲ್ಲಲಾಗದೆ ಪರಾಭವಗೊಂಡಿದ್ದಾರೆ, ಅದೇ ರೀತಿಯಲ್ಲಿ ಕಳೆದ ಬಾರಿ ನಿರ್ದೇಶಕರಾಗಿದ್ದ ಲಕ್ಕರಸನಪಾಳ್ಯ ಮಹೇಶ್, ಕೆಂಪನಪಾಳ್ಯ ಮಹೇಶ್ ಅವರು ಸಹ ಈ ಚುನಾವಣೆಯಲ್ಲಿ ಸೋಲನ್ನೊಪ್ಪಿದ್ದಾರೆ.
ಅಭ್ಯಥಿಗಳು ಗಳಿಸಿದ ಮತಗಳ ವಿವರ:ಸಾಲಗಾರರ 9 ಕ್ಷೇತ್ರಗಳಿಗೆ 26 ಮಂದಿ ಕಣದಲ್ಲಿದ್ದು ಅವರು ಗಳಿಸಿದ ಮತಗಳ ವಿವರ ಇಂತಿದೆ.
ಅಲ್ಬರ್ಟ್ ಮನೋಹರ್ (122,), ಇಬ್ರಾಹಿಂ ಬೇಗ್ (138), ಎಂ.ಪಿ.ಇಂದ್ರ ( 453), ಕೃಷ್ಣರಾಜು ( 91), ಜಗದೀಶ್ ( 97), ಪುಟ್ಟಸ್ವಾಮಿ (399), ಸಿ.ಬಸವರಾಜು (534), ಬಸವರಾಜು.ಎಂ (320), ಎಂ.ಈ.ಬಸವರಾಜು ( 174) , ಬೋಳೇಗೌಡ ( 386), ಎನ್.ಮಹದೇವಸ್ವಾಮಿ ( 381), ಮಹದೇವಸ್ವಾಮಿ.ಪಿ./ಸುರೇಶ್ (583), ಮಹೇಶ್ ( 361 ), ಮಹೇಶ್. ಎಂ (387), ಎಂ.ಮಹೇಶ್ (359), ಮಹೇಶ್. ಕೆ.ಎಸ್ (407), ಮಾದೇಶ್ (143), ಮಂಜುನಾಥ್ (422), ಎಸ್.ರಮೇಶ್ ( 463), ರವಿಕುಮಾರ್ (458 ), ಲೋಕೇಶ್ (395), ಎಂ.ಶಿವಮೂರ್ತಿ (88 ), ಬಿ.ಶಿವರಾಜು (55), ಎಂ.ಶೇಖರ್ (469), ಸಿದ್ದಪ್ಪಸ್ವಾಮಿ (387), ಸೋಮಶೇಖರ್ (258) ಮತಗಳಿಸಿದ್ದಾರೆ. ಚುನಾವಣಾಧಿಕಾರಿಯಾಗಿ ನಾಗೇಶ್, ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ನಾಗರಾಜು, ಸಹಾಯಕರಾಗಿ ಪ್ರಸನ್ನ ಇನ್ನಿತರರು ಕಾರ್ಯನಿರ್ವಹಿಸಿದರು.