ಕೆಫೆಬಾಂಬ್‌ ಸ್ಫೋಟಕ್ಕೆ ಶಂಕಿತರು ಸಾಮಗ್ರಿ ಖರೀದಿಸಿದ್ದು ಚೆನ್ನೈನಲ್ಲಿ

| Published : Apr 28 2024, 01:26 AM IST / Updated: Apr 28 2024, 01:00 PM IST

Rameshewaram cafe Bomber
ಕೆಫೆಬಾಂಬ್‌ ಸ್ಫೋಟಕ್ಕೆ ಶಂಕಿತರು ಸಾಮಗ್ರಿ ಖರೀದಿಸಿದ್ದು ಚೆನ್ನೈನಲ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಳಸಲಾದ ಕಚ್ಚಾ ಬಾಂಬ್ ತಯಾರಿಕೆಗೆ ಸಾಮಗ್ರಿಗಳನ್ನು ತಮಿಳುನಾಡಿನ ಚೆನ್ನೈ ನಗರದಲ್ಲಿ ಶಿವಮೊಗ್ಗ ಐಸಿಸ್‌ ಮಾಡ್ಯುಲ್‌ನ ಶಂಕಿತ ಉಗ್ರರು ಖರೀದಿಸಿದ್ದರು ಎಂದು ತಿಳಿದು ಬಂದಿದೆ.

 ಬೆಂಗಳೂರು :  ಇತ್ತೀಚಿನ ಬೆಂಗಳೂರಿನ ಕುಂದಲಹಳ್ಳಿ ದಿ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಳಸಲಾದ ಕಚ್ಚಾ ಬಾಂಬ್ ತಯಾರಿಕೆಗೆ ಸಾಮಗ್ರಿಗಳನ್ನು ತಮಿಳುನಾಡಿನ ಚೆನ್ನೈ ನಗರದಲ್ಲಿ ಶಿವಮೊಗ್ಗ ಐಸಿಸ್‌ ಮಾಡ್ಯುಲ್‌ನ ಶಂಕಿತ ಉಗ್ರರು ಖರೀದಿಸಿದ್ದರು ಎಂದು ತಿಳಿದು ಬಂದಿದೆ.

ತಮಿಳುನಾಡಿನಲ್ಲಿ ಅಜ್ಞಾತವಾಗಿದ್ದುಕೊಂಡೇ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾವೀರ್ ಹುಸೇನ್‌ ಶಾಜಿಬ್ ಹಾಗೂ ಅಬ್ದುಲ್ ಮತೀನ್ ತಾಹ, ಐಟಿ ಕಾರಿಡಾರ್‌ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಆಗ ಸುಧಾರಿತ ಸ್ಫೋಟಕ ವಸ್ತು (ಐಇಡಿ) ತಯಾರಿಕೆಗೆ ಮುಂದಾದ ಶಂಕಿತ ಉಗ್ರರು, ಇದಕ್ಕೆ ಅಗತ್ಯವಾಗಿ ಬೇಕಾದ ಟೈಮರ್‌, ಎಲೆಕ್ಟ್ರಿಕ್ ಸರ್ಕ್ಯುಟ್‌ ಹಾಗೂ ರಾಸಾಯನಿಕ ವಸ್ತುಗಳನ್ನು ಚೆನ್ನೈ ನಗರದಲ್ಲಿ ಖರೀದಿಸಿ ಬಾಂಬ್ ತಯಾರಿಸಿದ್ದರು. ಈ ಮಾಹಿತಿ ಹಿನ್ನಲೆಯಲ್ಲಿ ಕಚ್ಚಾ ವಸ್ತು ಖರೀದಿಸಿದ ಅಂಗಡಿಗಳ ಪರಿಶೀಲನೆಗೆ ಎನ್‌ಐಎ ಮುಂದಾಗಿದೆ ಎನ್ನಲಾಗುತ್ತಿದೆ.

ಕೆಲ ದಿನಗಳ ಹಿಂದೆ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಬಾಂಬರ್ ಮುಸಾವೀರ್ ಹಾಗೂ ಸಂಚುಕೋರ ಮತೀನ್‌ನನ್ನು ಎನ್‌ಐಎ ಬಂಧಿಸಿತ್ತು. ವಿಚಾರಣೆ ವೇಳೆ ಬಾಂಬ್ ತಯಾರಿಕೆ ಕುರಿತು ಶಂಕಿತ ಉಗ್ರರು ಬಾಯ್ಬಿಟ್ಟಿದ್ದಾರೆ. ಸ್ಥಳೀಯವಾಗಿ ಸಾರ್ವಜನಿಕರಿಗೆ ಸಿಗುವ ವಸ್ತುಗಳನ್ನು ಬಳಸಿಯೇ ಕಚ್ಚಾ ಬಾಂಬ್ ತಯಾರಿಸಲಾಗಿತ್ತು. ಆನಂತರ ಫೆ.29 ರಂದು ರಾತ್ರಿ ಚೆನ್ನೈ ನಗರದಿಂದ ಹೊರಟು ಟಿಫನ್ ಬಾಕ್ಸ್ ಬ್ಯಾಗ್‌ನಲ್ಲಿ ಬಾಂಬ್ ತಂದು ಕೆಫೆಯಲ್ಲಿ ಇಡಲಾಯಿತು. ಆದರೆ ನಿರೀಕ್ಷಿತ ಪ್ರಮಾಣದ ಕಚ್ಚಾ ಬಾಂಬ್ ಸಿಡಿಯದೆ ಪ್ರಾಣಹಾನಿ ಸಂಭವಿಸಲಿಲ್ಲ ಎಂದು ಶಂಕಿತರು ಉಗ್ರರು ಹೇಳಿರುವುದಾಗಿ ತಿಳಿದು ಬಂದಿದೆ.