ರಾಮನಗರ ನಗರಸಭೆ: 60.87 ಲಕ್ಷ ಉಳಿತಾಯ ಬಜೆಟ್

| Published : Mar 07 2024, 01:46 AM IST

ಸಾರಾಂಶ

ರಾಮನಗರ: ಹೊಸ ಆದಾಯ ಮೂಲ ಶೋಧಿಸದೆ, ತೆರಿಗೆಗಳು ಹಾಗೂ ಕೇಂದ್ರ - ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ನಗರಸಭೆ ಅಧ್ಯಕ್ಷೆ ವಿಜಯ ಕುಮಾರಿ ಅವರು 2024-25ನೇ ಸಾಲಿನಲ್ಲಿ 60.87 ಲಕ್ಷ ರು. ಉಳಿತಾಯ ಬಜೆಟ್ ನ್ನು ಬುಧವಾರ ಮಂಡಿಸಿದರು.

ರಾಮನಗರ: ಹೊಸ ಆದಾಯ ಮೂಲ ಶೋಧಿಸದೆ, ತೆರಿಗೆಗಳು ಹಾಗೂ ಕೇಂದ್ರ - ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ನಗರಸಭೆ ಅಧ್ಯಕ್ಷೆ ವಿಜಯ ಕುಮಾರಿ ಅವರು 2024-25ನೇ ಸಾಲಿನಲ್ಲಿ 60.87 ಲಕ್ಷ ರು. ಉಳಿತಾಯ ಬಜೆಟ್ ನ್ನು ಬುಧವಾರ ಮಂಡಿಸಿದರು.

ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ವಿಜಯಕುಮಾರಿ ಮಂಡಿಸಿದ ಆಯವ್ಯಯದ ಮೇಲೆ ಸದಸ್ಯರು ಕೆಲವೊಂದು ವಿಷಯಗಳ ಕುರಿತು ಚರ್ಚೆ ನಡೆಸಿ ಒಪ್ಪಿಗೆ ನೀಡಿದರು. ಪ್ರಸಕ್ತ ಸಾಲಿನಲ್ಲಿ ಒಟ್ಟು 6643.15 ಲಕ್ಷ ರು.ಆದಾಯ ನಿರೀಕ್ಷಿಸಲಾಗಿದೆ. 7352.75 ಲಕ್ಷ ರು.ವೆಚ್ಚ ತೋರಿಸಲಾಗಿದ್ದು, ಅತ್ಯಲ್ಪ 60.87 ಲಕ್ಷ ರು. ನಿರೀಕ್ಷಿತ ಉಳಿತಾಯ ತೋರಿಸಲಾಗಿದೆ.

ನಗರಸಭೆಯ ಆಯವ್ಯಯದಲ್ಲಿ ಪ್ರಮುಖವಾಗಿ ವಿವಿಧ ಯೋಜನೆಗಳಡಿ ಬಿಡುಗಡೆಯಾಗಿ ವೆಚ್ಚವಾಗದ ಬ್ಯಾಂಕ್ ಶಿಲ್ಕು 770.47 ಲಕ್ಷ ಹಾಗೂ ಪ್ರಸಕ್ತ ಸಾಲಿನ ನಿರೀಕ್ಷಿತ ಆದಾಯ 6643.15 ಲಕ್ಷ ರು. ಸೇರಿದಂತೆ ಒಟ್ಟು 7413.62 ಲಕ್ಷ ರು.ಗಳಲ್ಲಿ ವಿವಿಧ ಉದ್ಧೇಶಗಳಿಗೆ ವೆಚ್ಚ ಮಾಡಲು 7352.75 ಲಕ್ಷಗಳನ್ನು ಮೀಸಲಿಡಲಾಗಿದೆ.

ಪ್ರಮುಖ ಆದಾಯಗಳು:

15ನೇ ಹಣಕಾಸು ಅನುದಾನದಲ್ಲಿ 440 ಲಕ್ಷ, ಎಸ್ ಎಫ್ ಸಿ ವಿಶೇಷ ಅನುದಾನದಲ್ಲಿ 542 ಲಕ್ಷ, ಕೇಂದ್ರ ಪುರಸ್ಕೃತ ಏಷ್ಯನ್ ಡೆವಲೆಪ್ ಮೆಂಟ್ ಬ್ಯಾಂಕ್ ನ ಸಹಯೋಗದೊಂದಿಗೆ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ 82 ಕೋಟಿ, ಎಸ್ ಎಫ್ ಸಿ ಮುಕ್ತ ನಿಧಿಯಿಂದ ಎಸ್ ಇಪಿ - ಟಿಎಸ್ ಪಿ ಯೋಜನೆಗೆ 38 ಲಕ್ಷ, ನಿರೀಕ್ಷೆ ಮಾಡಲಾಗಿದೆ.

ವಾಣಿಜ್ಯ ಸಂಕೀರ್ಣಗಳಿಂದ ಬಾಡಿಗೆ 34.50 ಲಕ್ಷ ರು. ಅಂಬೇಡ್ಕರ್ ಭವನ ಮತ್ತು ಪುರಭವನಗಳ ಬಾಡಿಗೆ 2.50 ಲಕ್ಷ ರು. ಕಟ್ಟಡ ಪರವಾನಗಿ ಶುಲ್ಕದಿಂದ 10 ಲಕ್ಷ ರು. ಉದ್ದಿಮೆ ಪರವಾನಗಿ ಶುಲ್ಕದಿಂದ 50 ಲಕ್ಷ, ರಸ್ತೆ ಅಗೆತ ಮತ್ತು ಪುನ್ಥಾಪನೆ ಶುಲ್ಕ 25 ಲಕ್ಷ , ಟೆಂಡರ್ ಫಾರಂ ಮಾರಾಟದಿಂದ 75 ಸಾವಿರ , ಜನನ - ಮರಣ ಪ್ರಮಾಣ ಪತ್ರಗಳ ಶುಲ್ಕ 5 ಸಾವಿರ, ವಾಹನ ಬಾಡಿಗೆ - 50 ಸಾವಿರ, ದಂಡ ಮತ್ತು ಇತರೆ 10 ಸಾವಿರ. ವಿದ್ಯುತ್ ಖಾತೆ ಅನುದಾನ - 2.50 ಕೋಟಿ, ನೀರು ಸರಬರಾಜು ವಿದ್ಯುತ್ ಅನುದಾನ 4.2 ಕೋಟಿ, ಎಸ್‌ಎಫ್ ಸಿ ಮುಕ್ತನಿಧಿ ಅನುದಾನ 1.50 ಕೋಟಿ , ಇತರೆ ಅನುದಾನ 5 ಲಕ್ಷ ನಿರೀಕ್ಷಿಸಲಾಗಿದೆ.

ಅಭಿವೃದ್ಧಿ ಶುಲ್ಕ 45 ಲಕ್ಷ , ದಂಡ ಮತ್ತು ಜುಲ್ಮಾನೆಗಳಿಂದ 1.65 ಕೋಟಿ , ಜಾಹಿರಾತು ತೆರಿಗೆಯಿಂದ 5 ಲಕ್ಷ, ಬಾಡಿಗೆ ಮತ್ತು ಇತರೆ 50 ಸಾವಿರ, ಖಾತಾ ನಕಲು ಶುಲ್ಕ 5 ಲಕ್ಷ, ಖಾತಾ ಬದಲಾವಣೆ ಶುಲ್ಕ 1.50 ಲಕ್ಷ, ಬ್ಯಾಂಕ್ ಬಡ್ಡಿ 10 ಲಕ್ಷ, ಅಭಿವೃದ್ಧಿ ಶುಲ್ಕ 45 ಲಕ್ಷ, ಸ್ವಯಂ ಘೋಷಿತ ಆಸ್ತಿ ತೆರಿಗೆಯ ಆದಾಯ 6 ಕೋಟಿ, ಆಸ್ತಿ ತೆರಿಗೆಯೊಂದಿಗೆ ವಸೂಲಾಗುವ ಘನತ್ಯಾಜ್ಯ ನಿರ್ವಹಣಾ ಕರ 75 ಲಕ್ಷ, ನಮೂನೆ ಶುಲ್ಕಗಳು 6 ಲಕ್ಷ , ಉಪಕರಣಗಳ ಸಂಗ್ರಹಣ ಶುಲ್ಕ 15 ಲಕ್ಷ , ನಗರಸಭೆ ಅಧಿಕಾರಿ ಮತ್ತು ನೌಕರರ ವೇತನಕ್ಕಾಗಿ 5 ಕೋಟಿ, ಕಾರ್ಮಿಕರ ಕಲ್ಯಾಣ ನಿಧಿಯಿಂದ 8 ಲಕ್ಷ, ಕಾನೂನು ಮತ್ತು ಲೆಕ್ಕ ಪರಿಶೋಧನಾ ಶುಲ್ಕ 15 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.

ಪ್ರಮುಖ ವೆಚ್ಚಗಳು:

ಬಜೆಟ್‌ನ ವೆಚ್ಚದ ಬಾಬ್ತಿನಲ್ಲಿ ನಗರದಲ್ಲಿನ ರಸ್ತೆ ದುರಸ್ತಿ ಮತ್ತು ನಿರ್ವಹಣೆಗಾಗಿ 15 ಲಕ್ಷ, ಚರಂಡಿಗಳ ದುರಸ್ತಿ ಮತ್ತು ನಿರ್ವಹಣೆಗಾಗಿ15 ಲಕ್ಷ, ಕಟ್ಟಡಗಳ ದುರಸ್ತಿ ಮತ್ತು ನಿರ್ವಹಣೆಗಾಗಿ 15 ಲಕ್ಷ, ಬೀದಿ ದೀಪಗಳ ರಿಪೇರಿ ಮತ್ತು ನಿರ್ವಹಣೆಗಾಗಿ 25 ಲಕ್ಷ, ವಿದ್ಯುತ್ ಶುಲ್ಕಕ್ಕಾಗಿ 2.50 ಕೋಟಿ ಮೀಸಲಿಡಲಾಗಿದೆ.

ತೆರೆದ ಚರಂಡಿ ಹಾಗೂ ಸೇತುವೆಗಳ ದುರಸ್ತಿ - ನಿರ್ವಹಣೆಗಾಗಿ 15 ಲಕ್ಷ, ಬೀದಿ ನಾಯಿಗಳು ಮತ್ತು ಮಂಗಗಳ ಇತರೆ ನಿಯಂತ್ರಣಕ್ಕಾಗಿ 20 ಲಕ್ಷ, ಘನತ್ಯಾಜ್ಯ ನಿರ್ವಹಣೆಗಾಗಿ 1.25 ಕೋಟಿ, ಹೊರ ಗುತ್ತಿಗೆ ವೆಚ್ಚ 70 ಲಕ್ಷ , ಘನತ್ಯಾಜ್ಯ ವಸ್ತುಗಳ ಹೊರ ಗುತ್ತಿಗೆ ನಿರ್ವಹಣೆಗಾಗಿ 36 ಲಕ್ಷ , ಮನೆ ಮನೆಗೆ ಬಿನ್ಸ್ - ಸಾಮಗ್ರಿ ಖರೀದಿ 25 ಲಕ್ಷ.

ಯುಜಿಡಿ ರಿಪೇರಿ ಮತ್ತು ನಿರ್ವಹಣೆಗಾಗಿ 25 ಲಕ್ಷ, ಟ್ಯಾಂಕರ್ ನೀರು ಸರಬರಾಜುಗಾಗಿ 10 ಲಕ್ಷ, ನೀರು ಸರಬರಾಜು ಕಾಮಗಾರಿಗಾಗಿ 15 ಲಕ್ಷ, ಎಲ್ಲಾ ಸ್ಮಶಾನಗಳ ಶುಚೀಕರಣ ಮತ್ತು ನಿರ್ವಹಣೆಗಾಗಿ 10ಲಕ್ಷ, ವಿದ್ಯುತ್ ಚಿತಾಗಾರ 5 ಲಕ್ಷ, ಎಸ್ಸಿಎಸ್ಟಿಗಳ ಕಲ್ಯಾಣ ಕಾರ್ಯಕ್ರಮಕ್ಕಾಗಿ 30 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ನಿಧಿಗೆ 15 ಲಕ್ಷ ನಿಗದಿ ಪಡಿಸಲಾಗಿದೆ.

ವಿಶೇಷ ಚೇತನರ ಕಲ್ಯಾಣ ನಿಧಿಗಾಗಿ 6 ಲಕ್ಷ, ಫುಟ್ ಪಾತ್ ವ್ಯಾಪಾರಿಗಳಿಗೆ ಪ್ರತ್ಯೇಕ ಮಾರುಕಟ್ಟೆ ಸ್ಥಾಪನೆಗಾಗಿ 7.50 ಲಕ್ಷ , ಜಾಹಿರಾತು ಮತ್ತು ಪ್ರಸರಣಕ್ಕೆ 10ಲಕ್ಷ, ರಾಷ್ಟ್ರೀಯ ಹಬ್ಬಗಳಿಗೆ 15 ಲಕ್ಷ, ಸ್ಥಳೀಯ ಹಬ್ಬುಗಳು ಇತರೆಗೆ 15 ಲಕ್ಷ ಮೀಸಲಿಡಲಾಗಿದೆ.

ಉಪಾಧ್ಯಕ್ಷ ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಮತ್ ಉಲ್ಲಾ ಖಾನ್, ಆಯುಕ್ತ ನಾಗೇಶ್ ಉಪಸ್ಥಿತರಿದ್ದರು.

ಬಾಕ್ಸ್ ............

- ನಗರಸಭಾ ವ್ಯಾಪ್ತಿಯಲ್ಲಿರುವ ಪ್ರಮುಖ ರಸ್ತೆಗಳ ಬದಿಗಳಲ್ಲಿ ಟಬುಬಿಯಾ - ರೋಸಿಯಾ ಗಿಡಗಳನ್ನು ನೆಡುವುದು ಹಾಗೂ ರಸ್ತೆ ಸೌಂದರೀಕರಣಗೊಳಿಸುವ ಗಿಡಗಳನ್ನು ನೆಡುವುದು. ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು 45 ಲಕ್ಷ ಮೀಸಲಿಡಲಾಗಿದೆ.

-ನಗರಸಭೆ ವತಿಯಿಂದ 50 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕಾಗಿ 10 ಲಕ್ಷ, ಪಾರ್ಕ್ ಗಳ ಅಭಿವೃದ್ಧಿಗಾಗಿ ತಲಾ 20 ಲಕ್ಷ ಮೀಸಲಿಡಲಾಗಿದೆ.

-ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪತ್ತಿ ಮಾಡಿ ಅಡುಗೆಯಲ್ಲಿ ಬಳಸಲು ವಾರ್ಡ್ ನಂ.27ರಲ್ಲಿ ಹಿಂದುಳಿದ ವರ್ಗದವರ ವಿದ್ಯಾರ್ಥಿನಿ ನಿಲಯದಲ್ಲಿ 100 ಕೆಜಿ ಹಾಗೂ ವಾರ್ಡ್ ನಂ.01ರ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿ 50 ಕೆಜಿ ಸಾಮರ್ಥ್ಯದ ಬಯೋಗ್ಯಾಸ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ.

-ಬಾಲಕಿಯರ ಮತ್ತು ಮಹಿಳಾ ಶಾಲಾ ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಯಂತ್ರ ಮತ್ತು ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರಗಳನ್ನು ಅಳವಡಿಸಲು 2.50 ಲಕ್ಷ ವಿನಿಯೋಗಿಸಲು ಉದ್ದೇಶಿಸಲಾಗಿದೆ.

-ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ನಿವೇಶನ ರಹಿತ 5 ಸಾವಿರ ಬಡ ಕುಟುಂಬಗಳಿಗೆ ಈಗಾಗಲೇ ಗುರುತಿಸಿರುವ ಬೋಳಪ್ಪನಹಳ್ಳಿ , ಕೊತ್ತೀಪುರ ಇತ್ಯಾದಿ ಪ್ರದೇಶಗಳಲ್ಲಿ ಆಶ್ರಯ ನಿವೇಶನ ಒದಗಿಸುವ ಉದ್ದೇಶ ಹೊಂದಲಾಗಿದೆ.

ಬಾಕ್ಸ್ ...

ಕಂದಾಯ ಶಾಖೆಯಿಂದ 780 ಲಕ್ಷ ನಿರೀಕ್ಷೆ

ಸರ್ಕಾರದ ವತಿಯಿಂದ ಬರುವ ಅನುದಾನವನ್ನು ಹೊರತು ಪಡಿಸಿದರೆ ನಗರಸಭೆಯ ಸ್ವಂತ ಸಂಪನ್ಮೂಲದ ಕ್ರೂಢೀಕರಣದಲ್ಲಿ ಕಟಟ್ಡದ ಮತ್ತು ನಿವೇಶನಗಳ ಕಂದಾಯವನ್ನು ಸ್ವಯಂ ಘೋಷಿತ ಪದ್ಧತಿಯಂತೆ ಕಂದಾಯ ವಸೂಲಿ ಮಾಡಲಾಗುತ್ತಿದೆ.

ನಗರದ ಎಲ್ಲಾ ಆಸ್ತಿಗಳ ಕರವನ್ನು Property Tax Calculator ಮೂಲಕ ಸಂಪೂರ್ಣ online ತಂತ್ರಾಂಶದ ಮೂಲಕವೇ ಲೆಕ್ಕಾಚಾರ ಹಾಕಿ ವಸೂಲಿ ಮಾಡಲಾಗುತ್ತಿದ್ದು, 2024-25ನೇ ಸಾಲಿಗೆ 780 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಇದರಿಂದ ಹೆಚ್ಚಿನ ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಬರುತ್ತಿದ್ದು, ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.

ಖಾತಾ ವರ್ಗಾವಣೆ, ಖಾತಾ ನಕಲು ಹಾಗೂ ಇತರೆ ಆದಾಯ ಮೂಲಗಳಿಂದ 20.75 ಲಕ್ಷ , ನೂತನ ಬಡಾವಣೆಗಳ ಅಭಿವೃದ್ಧಿ ಶುಲ್ಕ 45 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.

6ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷೆ ವಿಜಯ ಕುಮಾರಿ, ಉಪಾಧ್ಯಕ್ಷ ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಮತ್ ಉಲ್ಲಾಖಾನ್ ಹಾಗೂ ಆಯುಕ್ತ ನಾಗೇಶ್ ಬಜೆಟ್ ಪ್ರತಿ ಪ್ರದರ್ಶಿಸುತ್ತಿರುವುದು.