ರಾಮನಗರ: ರಾಮೋತ್ಸವದ ಅಂಗವಾಗಿ ನಮ್ಮ ಓಟ ಆರೋಗ್ಯ ಮತ್ತು ಸ್ವಚ್ಛತೆಗಾಗಿ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮ್ಯಾರಥಾನ್‌ನಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ರಾಮನಗರ: ರಾಮೋತ್ಸವದ ಅಂಗವಾಗಿ ನಮ್ಮ ಓಟ ಆರೋಗ್ಯ ಮತ್ತು ಸ್ವಚ್ಛತೆಗಾಗಿ ಶೀರ್ಷಿಕೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮ್ಯಾರಥಾನ್‌ನಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಮಾರುತಿ ನಗರದ ಬಳಿ ಆರಂಭಗೊಂಡ ಓಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ ಸದಸ್ಯರು ಲವಲವಿಕೆಯಿಂದ ಪಾಲ್ಗೊಂಡಿದ್ದರು.

ಶಾಸಕ ಯೋಗೇಶ್ವರ್ ಅವರು ರಾಮನಗರದ ಶ್ರೀ ಆಂಜನೇಯಸ್ವಾಮಿ ಆರ್ಚ್ ಮುಂಭಾಗ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್ , ಬಮೂಲ್ ನಿರ್ದೇಶಕ ಹರೀಶ್, ಕೆಡಿಪಿ ಸದಸ್ಯೆ ಅನಿತಾ, ರೋಟರಿ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಪರಮೇಶ್ ಮತ್ತಿತರರು ಹಾಜರಿದ್ದರು.

16 ವರ್ಷ ಮೇಲ್ಪಟ್ಟ ಪುರುಷರು (10 ಕಿ.ಮೀ.) ಆಂಜನೇಯ ಆರ್ಚ್‌ನಿಂದ ಪ್ರಾರಂಭಿಸಿ ಹಳೇ ಬೆಂ-ಮೈ ಹೆದ್ದಾರಿ ಮಾರ್ಗವಾಗಿ ಐಜೂರು ವೃತ್ತ, ಅರ್ಚಕರಹಳ್ಳಿ ಬಳಿ ಯೂಟರ್ನ್ ಪಡೆದು ನ್ಯಾಯಾಲಯದ ರಸ್ತೆ, ಎಂ.ಜಿ.ರಸ್ತೆ, ವಾಟರ್ ಟ್ಯಾಂಕ್ ವೃತ್ತದ ಮೂಲಕ ಆಂಜನೇಯ ಆರ್ಚ್ ಬಳಿಗೆ ವಾಪಸ್ಸಾದರು.

ಮಹಿಳೆಯರು ಮತ್ತು ಹಿರಿಯ ನಾಗರಿಕರು (5 ಕಿ.ಮೀ)ಆಂಜನೇಯ ಆರ್ಚ್‌ನಿಂದ ಪ್ರಾರಂಭವಾಗಿ ಹಳೇ ಬೆಂ-ಮೈ ಹೆದ್ದಾರಿ ಮಾರ್ಗವಾಗಿ ಐಜೂರು ವೃತ್ತ ತಲುಪಿ ಅಲ್ಲಿಂದ ಕೆಂಗಲ್ ಹನುಮಂತಯ್ಯ ವೃತ್ತದಿಂದ ಎಂ.ಜಿ.ರಸ್ತೆ, ವಾಟರ್ ಟ್ಯಾಂಕ್ ವೃತ್ತದ ಮೂಲಕ ಆಂಜನೇಯ ಆರ್ಚ್ ಬಳಿಗೆ ಹಿಂತಿರುಗಿದರು.

17ಕೆಆರ್ ಎಂಎನ್ 6.ಜೆಪಿಜಿ

ಚನ್ನಪಟ್ಟಣ ಶಾಸಕ ಯೋಗೇಶ್ವರ್ ಮ್ಯಾರಥಾನ್‌ಗೆ ಚಾಲನೆ ನೀಡಿದರು.