ಚನ್ನಗಿರಿಯಲ್ಲಿ ಸಂಭ್ರಮದ ರಾಮೋತ್ಸವ, ರಾಮತಾರಕ ಹೋಮ

| Published : Jan 23 2024, 01:45 AM IST

ಚನ್ನಗಿರಿಯಲ್ಲಿ ಸಂಭ್ರಮದ ರಾಮೋತ್ಸವ, ರಾಮತಾರಕ ಹೋಮ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಹನುಮಂತದೇವರ ದೇವಾಲಯದ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ಶ್ರೀ ರಾಮತಾರಕ ಹೋಮ ಪಟ್ಟಣದ ಅರ್ಚಕರು ಸೇರಿ ಬೆಳಗ್ಗೆ 8 ರಿಂದಲೇ ವಿಪ್ರ ಪುರೋಹಿತರ ಪರಿಷತ್ ವತಿಯಿಂದ ಜಯಶಂಕರಶಾಸ್ತ್ರಿಯವರ ನೇತೃತ್ವದಲ್ಲಿ ವಿವಿಧ ದ್ರವ್ಯಗಳಿಂದ 1008 ಆಹುತಿ ನೀಡಲಾಯಿತು.

1992ರಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾದವರಿಗೆ ಗೌರವ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ, ಬಾಲರಾಮನಿಗೆ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಚನ್ನಗಿರಿ ಪಟ್ಟಣ ಸೇರಿ ತಾಲೂಕಿನ ಸಂತೆಬೆನ್ನೂರು, ಹಿರೇಕೋಗಲೂರು, ಚಿಕ್ಕಕೋಗಲೂರು ತಾಲೂಕಿನ 61ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶ್ರೀ ರಾಮದೇವರ ಭಾವಚಿತ್ರ ಮತ್ತು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದರು.

ಪಟ್ಟಣದ ಹನುಮಂತದೇವರ ದೇವಾಲಯದ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ವತಿಯಿಂದ ಶ್ರೀ ರಾಮತಾರಕ ಹೋಮ ಪಟ್ಟಣದ ಅರ್ಚಕರು ಸೇರಿ ಬೆಳಗ್ಗೆ 8 ರಿಂದಲೇ ವಿಪ್ರ ಪುರೋಹಿತರ ಪರಿಷತ್ ವತಿಯಿಂದ ಜಯಶಂಕರಶಾಸ್ತ್ರಿಯವರ ನೇತೃತ್ವದಲ್ಲಿ ವಿವಿಧ ದ್ರವ್ಯಗಳಿಂದ 1008 ಆಹುತಿ ನೀಡಲಾಯಿತು.

ತಾಲೂಕಿನಲ್ಲಿ ಒಂದುವರೆ ಸಾವಿರ ಕೋಟಿಗಿಂತ ಹೆಚ್ಚು ಶ್ರೀ ರಾಮತಾರಕ ಜಪ ನಡೆದಿದ್ದು ಅದರ ಪ್ರಯುಕ್ತ ಸೋಮವಾರ ರಾಮತಾರಕ ಹೋಮ ನಡೆಸಲಾಯಿತು ಎಂದು ಅರ್ಚಕ ವಾದಿರಾಜ್ ತಿಳಿಸಿದರು. ಈ ಧಾರ್ಮಿಕ ಕಾರ್ಯಕ್ರಮ ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ವಿಎಚ್ ಪಿ-ಬಜರಂಗದಳದ ಪ್ರಮುಖರಾದ ರವಿಚಂದ್ರ, ಹೇಮಚಂದ್ರು, ಶ್ರೀನಿವಾಸ್, ತುಮ್ ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ರಾಜು ಕರಡೇರ್, ಮಂಜುನಾಥ್, ಚಿಕ್ಕಣ್ಣ, ಹನುಮಂತ್ ಮಡಿವಾಳ್, ವಸಂತ್, ಪ್ರಕಾಶ್, ಚನ್ನಗಿರಿ ನವೀನ್, ಕಿರಣ್ ಕೋರಿ ಪ್ರಸಾದ್ ಸೇರಿ ಸಾರ್ವಜನಿಕರು ಹಾಜರಿದ್ದರು.

ಈ ಸಂದರ್ಭದಲ್ಲಿ 1992ರಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ಪಟ್ಟಣದ ಮಂಜುನಾಥ್, ಬುಳ್ಳಿ ಪ್ರಭಾಕರ್, ವಿಜಯಕುಮಾರ್, ಗೋಪಾಲ್ ರನ್ನು ಗೌರವಿಸಲಾಯಿತು. ಪಟ್ಟಣದ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು. ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.