ಸಾರಾಂಶ
ಪ್ರಸಿದ್ಧ ದರ್ಗಾಗಳಲ್ಲಿ ಮುಸ್ಲಿಂ ಬಾಂಧವರ ದಾಂಗುಡಿ । ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ । ಪರಸ್ಪರ ಶುಭಾಶಯ
ಕನ್ನಡಪ್ರಭ ವಾರ್ತೆ ಬಾಣಾವರಬಾಣಾವರ, ಜಾವಗಲ್, ಅರಸೀಕೆರೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಇಸ್ಲಾಂ ಧರ್ಮದ ಧಾರ್ಮಿಕ ವಿಧಿ ವಿಧಾನಗಳಂತೆ ಆಚರಿಸಿದರು
ಬಾಣಾವರದ ಸುನ್ನಿ ಜಾಮಿಯಾ ಮಸೀದಿಯಿಂದ ಮೆರವಣಿಗೆ ಮೂಲಕ ಅಲ್ಲಾಹನ ನಾಮವನ್ನು ಪಠಿಸುತ್ತ ಹೋರಾಟ ಮುಸ್ಲಿಂ ಬಾಂಧವರು ಈದ್ಗಾ ಮೈದಾನವನ್ನು ತಲುಪಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರುಈ ಸಂದರ್ಭದಲ್ಲಿ ಪ್ರವಚನವನ್ನು ನೀಡಿದಂತಹ ಧರ್ಮ ಗುರು ಸರಪರಾಜ್ ರಜಾ, ಇಸ್ಲಾಂ ಧರ್ಮವು ತ್ಯಾಗ ಶಾಂತಿ ಹಾಗೂ ಪ್ರೀತಿಯ ಧರ್ಮವಾಗಿದ್ದು ಪರಸ್ಪರ ಎಲ್ಲರಲ್ಲಿಯೂ ಸಹ ಪ್ರೀತಿ-ವಿಶ್ವಾಸವನ್ನು ಪಡೆಯುವಂತಹ ಧರ್ಮವಾಗಿದೆ. ದೇಶದ ಅಖಂಡತೆ, ಸಾರ್ವಭೌಮತೆ ಹಾಗೂ ಏಕತೆಗಾಗಿ ಎಲ್ಲರೂ ಏಕತಾ ಮನೋಭಾವದಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬದುಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಅಧ್ಯಕ್ಷ ಸೈಯದ್ ರಹಿಂಸಾಬ್ ಗ್ರಾಮದ ಎಲ್ಲಾ ನಾಗರಿಕರಿಗೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಸಾರ್ವಜನಿಕರಿಗೆ ರಂಜಾನ್ ಹಬ್ಬದ ಶುಭಾಶಯ ತಿಳಿಸಿದರುಮಾಜಿ ತಾಪಂ ಸದಸ್ಯ ರವಿಶಂಕರ್ ಹಾಗೂ ಗ್ರಾಪಂ ಸದಸ್ಯ ಬಿ.ಆರ್.ಸುರೇಶ್, ಮಾಜಿ ಸದಸ್ಯ ಪ್ರಕಾಶ್ ಬಾಳೆಹಣ್ಣನ್ನು ನೀಡುವುದರ ಮೂಲಕ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು. ಮುಸ್ಲಿಂ ಸಮಾಜದ ಯುವಕರು ಸಾರ್ವಜನಿಕರಿಗೆ ಮಜ್ಜಿಗೆ, ತಂಪು ಪಾನೀಯ ಹಾಗೂ ನೀರಿನ ವ್ಯವಸ್ಥೆಯನ್ನು ನೀಡಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ಬಾಣಾವರದ ಮುಸ್ಲಿಂ ಜಮಾತ್ ಕಮಿಟಿಯ ಕಾರ್ಯದರ್ಶಿ ಶರ್ಫಾನ್, ಖಜಾಂಚಿ ಶಬ್ಬೀರ್ ಉಪಾಧ್ಯಕ್ಷ ಅಬ್ಜಲ್ ಅಹಮದ್ ಹಾಗೂ ಮಾಜಿ ಅಧ್ಯಕ್ಷರಾದ ಕೆ.ಸಿ.ಖಾದರ್ ಬಾಷಾ, ಶಫಿ ಅಹಮದ್ ಸಾಬ್ ಹಾಗೂ ಗ್ರಾಮದ ಪ್ರಮುಖರಾದ ಇಲಿಯಾಜ್ ಸಾಬ್, ಗ್ರಾಪಂ ಸದಸ್ಯರಾದ ಸಯ್ಯದ್ ಆಸಿಫ್. ಮೋಮಿನ್. ವಜೀರ್ ಇಮ್ತಿಯಾಜ್, ಅಂಜುಮನ್ ಕಮಿಟಿಯ ಪದಾಧಿಕಾರಿಗಳು ಹಾಗೂ ಇತರೆ ಎಲ್ಲಾ ಗ್ರಾಮದ ಸಮಾಜ ಬಾಂಧವರು, ಅಕ್ಕಪಕ್ಕದ ಗ್ರಾಮದ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಬಾಣಾವರದ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಇಸ್ಲಾಂ ಧರ್ಮದ ಧಾರ್ಮಿಕ ವಿಧಿ ವಿಧಾನಗಳಂತೆ ಆಚರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.