ಭಾರತ ಸರ್ವ ಜನಾಂಗದ ನಾಡಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವ ನಾವು, ಪ್ರೀತಿ- ವಿಶ್ವಾಸದಿಂದ ಬದುಕಬೇಕು. ಒಗ್ಗಟ್ಟಿನಿಂದ ಪ್ರಗತಿ ಸಾಧಿಸಬೇಕು. ಮಾನವೀಯತೆ ಸದ್ಗುಣ ಬೆಳೆಸಿಕೊಂಡು ಒಂದಾಗಿ ಬಾಳಬೇಕು.
ಗದಗ: ರಂಜಾನ್ ಶಾಂತಿ, ಸಹನೆ, ತ್ಯಾಗ, ಸಮಾನತೆ ಹಾಗೂ ಸಹೋದರತ್ವದ ಸಂದೇಶ ಸಾರುವ ಪುಣ್ಯಗಳ ವಸಂತ ಕಾಲ ಎಂದು ಧರ್ಮಗುರು ಮೌಲಾಲಿ ಮುಲ್ಲಾ ತಿಳಿಸಿದರು.
ತಾಲೂಕಿನ ಕೋಟುಮಚಗಿ ಗ್ರಾಮದ ಈದ್ಗಾ ಮೈದಾನದಲ್ಲಿ ರಂಜಾನ್ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಮನುಷ್ಯನನ್ನು ಎಲ್ಲ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಸಲುವಾಗಿ ಆಚರಿಸುವ ಇಸ್ಲಾಮಿನ 4ನೇ ಕಡ್ಡಾಯ ಕರ್ಮ, ಒಂದು ತಿಂಗಳ ಕಾಲ ಉಪವಾಸ ವ್ರತಾಚರಣೆಯ ಮಾಡಿದ ಶವ್ವಾಲ್ ತಿಂಗಳ ಚಂದ್ರದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶವ್ವಾಲ್ ತಿಂಗಳ ಮೊದಲ ದಿನವೇ ಈದ್ ಉಲ್ ಫಿತರ್ ಹಬ್ಬ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತದೆ ಎಂದರು.ಭಾರತ ಸರ್ವ ಜನಾಂಗದ ನಾಡಾಗಿದ್ದು, ವಿವಿಧತೆಯಲ್ಲಿ ಏಕತೆ ಕಾಣುವ ನಾವು, ಪ್ರೀತಿ- ವಿಶ್ವಾಸದಿಂದ ಬದುಕಬೇಕು. ಒಗ್ಗಟ್ಟಿನಿಂದ ಪ್ರಗತಿ ಸಾಧಿಸಬೇಕು. ಮಾನವೀಯತೆ ಸದ್ಗುಣ ಬೆಳೆಸಿಕೊಂಡು ಒಂದಾಗಿ ಬಾಳಬೇಕು ಎಂದರು.ಪವಿತ್ರ ರಂಜನ್ ಮಾಸದಲ್ಲಿ ಉಪವಾಸ ಮಾಡಿ ದೇವರ ಕೃಪೆಗೆ ಪಾತ್ರರಾಗಿದ್ದೀರಿ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯಿಟ್ಟು ಧರ್ಮ ಅನುಸರಿಸಿದರೆ ದೇವರ ದಯೆ ಇರುತ್ತದೆ. ದೇವರ ನಾಮಸ್ಮರಣೆಯಿಂದ ಜೀವನ ಪಾವನವಾಗಲಿದೆ. ಇಸ್ಲಾಂ ಸಂದೇಶದಂತೆ ಶಾಂತಿ, ಸೌಹಾರ್ದತೆಯಿಂದ ಧರ್ಮ ಸಹಿಷ್ಣುಗಳಾಗಿ ಬಾಳಿ ಬದುಕುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಜೀವನಸಾಬ ಸರ್ಕಾವಸ, ಉಪಾಧ್ಯಕ್ಷ ಜೀವನಸಾಬ ಹಿರೇಹಾಳ, ಕಾರ್ಯದರ್ಶಿ ಜೆ.ಜೆ. ಹಿರೇಹಾಳ, ಮಾಬುಸಾಬ ಘಟ್ಟದ, ಇಮಾಮಸಾಬ ಮುಲ್ಲಾ, ಆರೀಫ ಮುಲ್ಲಾ, ಗ್ರಾಪಂ ಮಾಜಿ ಸದಸ್ಯರಾದ ಎಂ.ಆರ್. ಬೂದಿಹಾಳ, ದಾವಲಸಾಬ ಬೂದಿಹಾಳ, ಅಕ್ಬರ ನಾಗರಾಳ, ಮೆಹಬೂಬಸಾಬ ಬೂದಿಹಾಳ, ಮುಖಂಡರಾದ ಸಿಕಂದರ್ ಮೀರಾನಾಯ್ಕ, ಇಮಾಮಹುಸೇನ ಹುಯಿಲಗೋಳ, ಹುಸೇನಸಾಬ ಬೂದಿಹಾಳ, ಇಮಾಮಸಾಬ ಅತ್ತಾರ, ಜೀವನಸಾಬ ಆಬಾಜಿನಾಯ್ಕ, ಅಲ್ಲಾಸಾಬ ಮುಳಗುಂದ, ಕಮಲಸಾಬ ಮೀರಾನಾಯ್ಕ, ಬುಡ್ನೆಸಾಬ ನಾಗರಾಳ, ಜೀವನಸಾಬ ಹಿರೇಹಾಳ, ಕಾಲೇಸಾಬ ಮೀರಾನಾಯ್ಕ ಸೇರಿದಂತೆ ಹಲವರಿದ್ದರು.