ನಗರದ ಕ್ರಿಯೇಟಿವ್ ಕಾಲೇಜು ಪ್ರತಿವರ್ಷದಂತೆ ಈ ಬಾರಿಯೂ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ಇಲ್ಲಿನ ದ್ವಿತೀಯ ಪಿಯುಸಿಯ ಇಬ್ಬರು ವಿದ್ಯಾರ್ಥಿನಿಯರು ಗಣನೀಯ ಸಾಧನೆ ಮಾಡಿದ್ದಾರೆ. ಪ್ರೇರಣಾ ರಾಮಚಂದ್ರ ಹೆಗ್ಡೆ ಕಾಮರ್ಸ್ ವಿಭಾಗದಲ್ಲಿ 598 ಅಂಕಗಳೊಂದಿಗೆ ರಾಜ್ಯಕ್ಕೆ ಮೂರನೇ ರ್‍ಯಾಂಕ್‌ ಪಡೆದಿದ್ದಾಳೆ.

ಕಾರ್ಕಳ: ನಗರದ ಕ್ರಿಯೇಟಿವ್ ಕಾಲೇಜು ಪ್ರತಿವರ್ಷದಂತೆ ಈ ಬಾರಿಯೂ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ಇಲ್ಲಿನ ದ್ವಿತೀಯ ಪಿಯುಸಿಯ ಇಬ್ಬರು ವಿದ್ಯಾರ್ಥಿನಿಯರು ಗಣನೀಯ ಸಾಧನೆ ಮಾಡಿದ್ದಾರೆ. ಪ್ರೇರಣಾ ರಾಮಚಂದ್ರ ಹೆಗ್ಡೆ ಕಾಮರ್ಸ್ ವಿಭಾಗದಲ್ಲಿ 598 ಅಂಕಗಳೊಂದಿಗೆ ರಾಜ್ಯಕ್ಕೆ ಮೂರನೇ ರ್‍ಯಾಂಕ್‌ ಪಡೆದಿದ್ದಾಳೆ. ಪ್ರಾರ್ಥನಾ ಹರೀಶ್ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 597 ಅಂಕಗಳಿಸಿ 4ನೇ ರ್‍ಯಾಂಕ್‌ ಗಳಿಸಿದ್ದಾಳೆ.ಸಿಎ ಆಗುವ ಗುರಿ ಇದೆ - ಪ್ರೇರಣಾ : ಪ್ರೇರಣಾ ಅವರು ಇಂಗ್ಲಿಷ್, ಸಂಸ್ಕೃತ, ಅರ್ಥಶಾಸ್ತ್ರ ಹಾಗೂ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದಾರೆ‌. ಬ್ಯುಸಿನೆಸ್ ಸ್ಟಡೀಸ್ ಮತ್ತು ಅಕೌಂಟೆನ್ಸಿ ಗಳಲ್ಲಿ ತಲಾ 99 ಅಂಕಗಳನ್ನು ಗಳಿಸಿದ್ದಾರೆ. ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿಯವರಾದ ಪ್ರೇರಣ, ಅವರ ತಂದೆ ರಾಮಚಂದ್ರ ಹೆಗ್ಡೆ ಕೈಗಾ ಎನ್‌ಪಿಸಿಐಎಲ್‌ಯ ಉದ್ಯೋಗಿ, ತಾಯಿ ಶಿಲ್ಪಾ ಗೃಹಿಣಿಯಾಗಿದ್ದಾರೆ. ಅಕ್ಕ ಪ್ರಿಯಾ ದಂತ ವೈದ್ಯೆಯಾಗಿದ್ದು, ಕುಟುಂಬದಲ್ಲಿರುವ ಶೈಣಿಕ ವಾತಾವರಣ, ಶಿಕ್ಷಕರ ಮಾರ್ಗದರ್ಶನ ತನ್ನ ಸಾಧನೆಗೆ ಸಹಾಯ ಮಾಡಿದೆ. ಮುಂದೆ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ) ಆಗಬೇಕೆಂಬ ಗುರಿ ಇದೆ ಎಂದು ಅವರು ಹೇಳಿದ್ದಾರೆ.

ಇಂಜಿನಿಯರ್ ಆಗುತ್ತೇನೆ: ಪ್ರಾರ್ಥನಾ: ನಿಟ್ಟೆಯ ಬಲ್ಪಗುತ್ತು ನಿವಾಸಿಯಾದ ಪ್ರಾರ್ಥನಾ ಶೆಟ್ಟಿ ಬಡಕುಟುಂಬದಲ್ಲಿ ಜಮನಿಸಿದ್ದರೂ ಪರಿಶ್ರಮದಿಂದ ಸಾಧನೆ ಮಾಡಿದ್ದಾಳೆ. ಬೀಡದಂಗಡಿ ನಡೆಸುವ ಹರೀಶ್ ಶೆಟ್ಟಿ ಲೆಮಿನಾ ಸಂಸ್ಥೆಯಲ್ಲಿ ಉದ್ಯೋಗಿ ಪ್ರಮಿಳಾ ಅವರ ಏಕೈಕ ಪುತ್ರಿ. ಸಂಸ್ಕೃತ, ಇಂಗ್ಲಿಷ್ ಮತ್ತು ಗಣಿತದಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದು, ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ತಲಾ 99 ಅಂಕಗಳನ್ನು ಪಡೆದಿದ್ದಾರೆ. ಯಾವುದೇ ಖಾಸಗಿ ಕೋಚಿಂಗ್ ತೆಗೆದುಕೊಳ್ಳದೆ, ದಿನಕ್ಕೆ ಸುಮಾರು 5 ಗಂಟೆಗಳ ಕಾಲ ಓದುತ್ತಿದ್ದುದೇ ಅವರ ಯಶಸ್ಸಿನ ಗುಟ್ಟು. ಕಾಲೇಜಿನ ಶಿಕ್ಷಕರ ಭೋದನೆ, ಹೆತ್ತವರ ಒತ್ತಾಸೆ ಮತ್ತು ಮಾವ ಸುರೇಶ್ ಶೆಟ್ಟಿ ಅವರ ಪ್ರೋತ್ಸಾಹ ತನ್ನ ಸಾಧನೆಯ ಹಿಂದಿದೆ ಎನ್ನುವ ಪ್ರಾರ್ಥನಾ ಇಂಜಿನಿಯರಿಂಗ್ ವ್ಯಾಸಂಗ ಮಾಡಬೇಕು ಎಂಬ ಕನಸು ಹೊಂದಿದ್ದಾಳೆ.