ಸಾರಾಂಶ
ದಾಬಸ್‌ಪೇಟೆ: ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಖಾಸಗಿ ಬಸ್ ಕ್ಲೀನರ್ ಅತ್ಯಾಚಾರ ಎಸಗಿರುವ ಪ್ರಕರಣ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಅಕ್ಕತಮ್ಮನಹಳ್ಳಿ ಆನಂದ್ ಅಲಿಯಾಸ್ ಗಾಂಚಾಲಿ(24) ಬಂಧಿತ ಆರೋಪಿ. ಸೋಂಪುರ ಮೂಲದ ಬಾಲಕಿ ವಾರದ ಹಿಂದೆ ಶಾಲೆಗೆ ಹೋಗಿ ಮತ್ತೆ ಮನೆಗೆ ಬಾರದೇ ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾಗಿರುವ ಬಗ್ಗೆ ದಾಬಸ್‌ಪೇಟೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಕರೆ ಆಧಾರದ ಮೇಲೆ ತನಿಖೆ ಆರಂಭಿಸಿದ ದಾಬಸ್‌ಪೇಟೆ ಪೊಲೀಸರು, ಯಲಹಂಕ ಬಳಿ ಬಾಡಿಗೆ ಮನೆಯಲ್ಲಿರಿಸಿದ್ದ 14 ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿ ದಿನನಿತ್ಯ ದಾಬಸ್‌ಪೇಟೆಯಿಂದ ತ್ಯಾಮಗೊಂಡ್ಲುನಲ್ಲಿರುವ ಶಾಲೆಗೆ ಖಾಸಗಿ ಬಸ್ ನಲ್ಲಿ ಹೋಗಿ ಬರುತ್ತಿದ್ದಳು. ಆಗ ಬಸ್‌ನಲ್ಲಿ ಆರೋಪಿ ಪರಿಚಯವಾಗಿದೆ. ಅನಂತರ ಪ್ರೇಮಕ್ಕೆ ತಿರುಗಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದನೆನ್ನಲಾಗಿದೆ. ಅರೋಪಿ 2021ರಲ್ಲಿ ಬ್ಯಾಡರಹಳ್ಳಿ ಠಾಣೆಯಲ್ಲಿ ಇದೇ ರೀತಿ ಫೋಕ್ಸೊ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದನು.