ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಇತಿಹಾಸ ಸಂಶೋಧಕ ಡಾ.ಡಿ.ವೀರೇಶ ಹುಗಲೂರು ಪತ್ತೆ ಮಾಡಿದ್ದಾರೆ. ಈ ಶಾಸನ ರಾಷ್ಟ್ರಕೂಟರ ಅರಸ ಮೂರನೇ ಕೃಷ್ಣನ ಆಳ್ವಿಕೆಯದ್ದಾಗಿ

ಹೂವಿನಹಡಗಲಿ: ತಾಲೂಕಿನ ಹುಗಲೂರು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ರಾಷ್ಟ್ರಕೂಟರ ಕಾಲದ ಶಾಸನ ಪತ್ತೆಯಾಗಿದೆ.

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಇತಿಹಾಸ ಸಂಶೋಧಕ ಡಾ.ಡಿ.ವೀರೇಶ ಹುಗಲೂರು ಪತ್ತೆ ಮಾಡಿದ್ದಾರೆ. ಈ ಶಾಸನ ರಾಷ್ಟ್ರಕೂಟರ ಅರಸ ಮೂರನೇ ಕೃಷ್ಣನ ಆಳ್ವಿಕೆಯದ್ದಾಗಿದೆ. ಈತನ ಸಾಮಂತ ರೊಟ್ಟಯ್ಯನ ಕೋಗಳಿ-500, ಮಾಸವಾಡಿ-140, ಕುಕನೂರು-30 ನ್ನು ಆಳುತ್ತಿರುವಾಗ ಅಣ್ಣಯ್ಯನ ಮೊಮ್ಮಗ ಗೊಗ್ಗಯ್ಯನು ಪುಗ್ಗಿಲೂರು (ಹೂಗಲೂರು)ನ್ನು ಆಳ್ವಿಕೆ ಮಾಡುತ್ತಿರುತ್ತಾನೆ. ಗಾವುಂಡನಾದ ಗೊಗ್ಗಯ್ಯನು ಮಲ್ಲಿಕಾರ್ಜುನ ದೇವರ ಸೇವೆಗಾಗಿ 54 ಮತ್ತರು (ಎಕರೆ) ಭೂಮಿಯನ್ನು ವಿಳ್ಯೆದೆಲೆ ಬೆಳೆಯುವುದಕ್ಕೆ ದಾನ ನೀಡಿರುವ ಉಲ್ಲೇಖವಿದೆ.

ಶಾಸನದ ಕೊನೆಯಲ್ಲಿ ತಾನು ನೀಡಿದ ಭೂಮಿಯನ್ನಾಗಲೀ, ಪರರು ಭೂಮಿಯನ್ನಾಗಲಿ ಅಪಹರಿಸಿದರೇ 60 ಸಾವಿರ ವರ್ಷ ಅವರು ಸಗಣಿ ಹುಳುವಾಗಿ ಹುಟ್ಟಿತ್ತಾರೆಂದು ಶಾಪ ಹಾಕಿರುವುದು ಉಲ್ಲೇಖವಿದೆ. ಶಾಸನ ಅಧ್ಯಯನಕ್ಕೆ ಕವಿವಿಯ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಮರೇಶ ಯತಗಲ್, ಬೆಂಗಳೂರಿನ ಶಾಸನ ತಜ್ಞ ಪ್ರೊ.ದೇವರಾಜಸ್ವಾಮಿ, ಶ್ಯಾಮಸುಂದರ ಗೌಡ ಸಹಕರಿಸಿದ್ದಾರೆ ಎಂದು ಡಾ.ಡಿ.ವೀರೇಶ ಹುಗಲೂರು ತಿಳಿಸಿದರು.