ಕೇಂದ್ರದ ಯೋಜನಗಳ ಮಾಹಿತಿ ನೀಡುವ ರಥಯಾತ್ರೆ

| Published : Dec 18 2023, 02:00 AM IST

ಕೇಂದ್ರದ ಯೋಜನಗಳ ಮಾಹಿತಿ ನೀಡುವ ರಥಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಂತಾಮಣಿ ತಾಲೂಕಿನ ಕೆಂಚಾರ್‍ಲಹಳ್ಳಿ ಗ್ರಾಪಂ ಆವರಣದಲ್ಲಿ ವಿಕಸಿತ ಭಾರತ ಸಂಕಲ್ಪ ರಥಯಾತ್ರೆಗೆ ಸಂಸದ ಎಸ್ ಮುನಿಸ್ವಾಮಿ ಸೇರಿದಂತೆ ಗಣ್ಯರು ದೀಪಬೆಳಗುವ ಮೂಲಕ ಚಾಲನೆ ನೀಡಿದರು.

ವಿಕಸಿತ ಭಾರತ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಿ, ಯೋಜನೆಗಳನ್ನು ವಿವರಿಸಿದ ಸಂಸದ ಎಸ್‌.ಮುನಿಸ್ವಾಮಿ

ಚಿಂತಾಮಣಿ:

ಚಿಂತಾಮಣಿ ತಾಲೂಕಿನ ಕೆಂಚಾರ್‍ಲಹಳ್ಳಿ ಗ್ರಾಪಂ ಆವರಣದಲ್ಲಿ ವಿಕಸಿತ ಭಾರತ ಸಂಕಲ್ಪ ರಥಯಾತ್ರೆಗೆ ಸಂಸದ ಎಸ್ ಮುನಿಸ್ವಾಮಿ ಸೇರಿದಂತೆ ಗಣ್ಯರು ದೀಪಬೆಳಗುವ ಮೂಲಕ ಚಾಲನೆ ನೀಡಿದರು.

ಎಸ್ ಮುನಿಸ್ವಾಮಿ ಮಾತನಾಡಿ, ವಿಕಸಿತ ಭಾರತ ಸಂಕಲ್ಪ ರಥಯಾತ್ರೆಯು ಸಂಚಾರಿಸುವೆಡೆ ಆಯಾ ರಾಜ್ಯ ಭಾಷೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಕೇಂದ್ರದ ಯೋಜನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವುದೇ ಯಾತ್ರೆಯ ಉದ್ದೇಶ ಎಂದರು.

ಆರೋಗ್ಯ ಕಾರ್ಡ್‌:

ಜನಸಾಮಾನ್ಯರು ಖಾಸಗಿ ಆಸ್ಪತ್ರೆಗೆ ಹೋದರೆ ಸುಲಿಗೆ ಮಾಡುತ್ತಿದ್ದಾರೆ ಅದನು ಗಮನಿಸಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ೮೦ ಕೋಟಿ ಜನರಿಗೆ ಆ ಯುಷ್ಮಾನ್‌ ಭಾರತ್ ಕಾರ್ಡ್ ನೀಡಿ ಜನರ ಜೀವ ಉಳಿಸಲು ಮುಂದಾಗಿದ್ದಾರೆ. ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತರ ಖಾತೆಗೆ ವಾರ್ಷಿಕ 6 ಸಾವಿರ ರು. ಜಮಾ ಮಾಡಲಾಗಿದೆ ಎಂದರು.

ಜಲ ಜೀವನ್ ಮಿಷನ್ ಮೂಲಕ ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿಗೆ ನಳ ಸಂಪರ್ಕ ಕಲ್ಪಿಸಿದೆ. ಯಾವುದೇ ದಾಖಲೆಗಳಿದೆ ವಿಶ್ವಕರ್ಮ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಭಾಗದ ವೃತ್ತಿ ಆಧಾರಿಸಿ ಬ್ಯಾಂಕ್‌ಗಳು ೧೦ ಸಾವಿರ ದಿಂದ ೨ ಲಕ್ಷ ಸಾಲ ಲಭಿಸಲಿದೆಯೆಂದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು

ಹಿಂದೊಮ್ಮೆ ಓಡಾಡಲು ಸಾಧ್ಯವಿಲ್ಲದಂತಹ ಜಮ್ಮು- ಕಾಶ್ಮೀರದಲ್ಲಿ ಇದೀಗ ಶಾಂತಿ ನೆಮ್ಮದಿ ನೆಲಸಿದ್ದು ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡುವಂತಾಗಿದ್ದು, ಸ್ಥಳೀಯರಿಗೆ ಉದ್ಯೋಗವಕಾಶ ಲಭಿಸುತ್ತಿದೆ. ಪ್ರವಾಸಿಗರು ಭೂಲೋಕದ ಸ್ವರ್ಗವೆನಿಸಿರುವ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸೌಲಭ್ಯನ್ನು ರದ್ದುಪಡಿಸಿ ದೇಶದ ಅವಿಭಾಜ್ಯ ಅಂಗವನ್ನಾಗಿ ಮಾಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದರು.

ಉಕ್ರೇನ್ ರಷ್ಯಾ ಯುದ್ಧದಲ್ಲಿ ನಮ್ಮ ದೇಶದ ಹಾಗೂ ರಾಜ್ಯದ ಉನ್ನತ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ೨೦ಸಾವಿರ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತಂದ ಕೀರ್ತಿ ಮೋದಿಗೆ ಸಲ್ಲುತ್ತದೆ ಎಂದು ಸಂಸದರು ಹೇಳಿದರು.

ಈ ಸಂದರ್ಭದಲ್ಲಿ ದೆಹಲಿಯ ಪ್ರತಿನಿಧಿ ಆಶಿಶ್, ಕೆಂಚಾರ್‍ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ಗಣೇಶ್‌ರೆಡ್ಡಿ, ಉಪಾಧ್ಯಕ್ಷ ಗಂಗಮ್ಮ, ಮುಖಂಡರಾದ ದೇವನಹಳ್ಳಿ ವೇಣುಗೋಪಾಲ್, ಸೀಕಲ್ ರಾಮಚಂದ್ರಗೌಡ, ಆನಂದಗೌಡ ಗ್ರಾ.ಪಂ. ಸದಸ್ಯ ಮತ್ತು ಎಪಿಎಂಸಿ ನಿರ್ದೇಶಕ ಭಾಸ್ಕರ್, ಅಪಸಾನಹಳ್ಳಿ ವೆಂಕಟರಾಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.