ಸಾರಾಂಶ
ತಾಲೂಕಿನ ಕಂದಾಯ ಇಲಾಖೆಯಲ್ಲಿ ಸೋಮವಾರ ರೇಷನ್ ಕಾರ್ಡ್ ವಿತರಣೆಯಾಗುತ್ತಿದ್ದು, ಸುಮಾರು 300 ಜನ ಕಾರ್ಡ್ ಪಡೆಯುವ ಉದ್ದೇಶದಿಂದ ಕಚೇರಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದರು. ಹಾಗಾಗಿ ಬೆಳಗ್ಗೆಯಿಂದಲೇ ಕಂದಾಯ ಇಲಾಖೆಯ ಆವರಣದಲ್ಲಿ ಜನಸಂದಣಿಯಿತ್ತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಬಿ.ಸಿ.ರೋಡ್ ಆಡಳಿತ ಸೌಧ ಕಚೇರಿಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಜನಜಂಗುಳಿ. ಕಚೇರಿಯ ಒಳಗೆ ಕಾಲಿಡಲು ಅಸಾಧ್ಯ ಎಂಬಷ್ಟು ಜನದಟ್ಟಣೆ.ಇದೇನಪ್ಪಾ ಅಂತ ಕೇಳಿದರೆ, ‘ರೇಷನ್ ಕಾರ್ಡ್ ವಿತರಣೆ ನಡೆಸುವ ಕಾರ್ಯ ನಡೆಯುತ್ತಿರುವುದು’ ಎಂಬ ಉತ್ತರ ಅಧಿಕಾರಿಗಳಿಂದ.
ತಿದ್ದುಪಡಿ, ಹೆಸರು ಸೇರ್ಪಡೆ, ರದ್ದು ಮತ್ತು ವಾಸ್ತವ್ಯದ ಬದಲಾವಣೆಗಾಗಿ ಸರ್ಕಾರ ಅವಕಾಶ ನೀಡಿ , ಖಾಸಗಿ ಗ್ರಾಮ ಒನ್ ಗಳಲ್ಲಿ ಅರ್ಜಿ ಸ್ವೀಕರಿಸಿಲು ಅವಕಾಶ ನೀಡಿತ್ತು. ಹೀಗೆ ನೀಡಿದ ಅರ್ಜಿಯನ್ನು ಮತ್ತು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಕಂದಾಯ ಇಲಾಖೆಯ ಆಹಾರ ಶಾಖೆಯಲ್ಲಿ ರೇಷನ್ ಕಾರ್ಡ್ ನೀಡಲಾಗುತ್ತಿದೆ.ತಾಲೂಕಿನ ಕಂದಾಯ ಇಲಾಖೆಯಲ್ಲಿ ಸೋಮವಾರ ರೇಷನ್ ಕಾರ್ಡ್ ವಿತರಣೆಯಾಗುತ್ತಿದ್ದು, ಸುಮಾರು 300 ಜನ ಕಾರ್ಡ್ ಪಡೆಯುವ ಉದ್ದೇಶದಿಂದ ಕಚೇರಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದರು. ಹಾಗಾಗಿ ಬೆಳಗ್ಗೆಯಿಂದಲೇ ಕಂದಾಯ ಇಲಾಖೆಯ ಆವರಣದಲ್ಲಿ ಜನಸಂದಣಿಯಿತ್ತು.ಸಮಸ್ಯೆಯಾಗದಂತೆ ವಿತರಣೆ: ಸುಮಾರು 300 ಜನರಿಗೆ ರೇಷನ್ ಕಾರ್ಡ್ ಪಡೆಯಲು ಕಚೇರಿಗೆ ಬರುವಂತೆ ಟೋಕನ್ ನೀಡಿದ್ದು, ಶುಕ್ರವಾರ ,ಶನಿವಾರ ರಜೆಯಾದ ಕಾರಣ ಎಲ್ಲರೂ ಸೋಮವಾರ ಬಂದಿದ್ದಾರೆ. ಮಧ್ಯಾಹ್ನ ವೇಳೆ 150 ಕ್ಕೂ ಅಧಿಕ ಮಂದಿಗೆ ಕಾರ್ಡ್ ನೀಡಲಾಗಿದೆ.ಸಂಜೆ 4 ಗಂಟೆಯೊಳಗೆ ಯಾವುದೇ ಸಮಸ್ಯೆಯಾಗದಂತೆ ವಿತರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಹಾರ ಶಾಖೆ ಅಧಿಕಾರಿ ರವಿ ತಿಳಿಸಿದ್ದಾರೆ.ತಿದ್ದುಪಡಿ, ಹೆಸರು ಸೇರ್ಪಡೆಗಾಗಿ ಇನ್ನು ಒಂದು ತಿಂಗಳ ಕಾಲ ಅವಕಾಶ ನೀಡುವಂತೆ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಒತ್ತಾಯ ಮಾಡಿದ್ದಾರೆ.