ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ರತ್ನಮ್ಮ ಸಿದ್ದಲಿಂಗಪ್ಪ

| Published : May 14 2025, 12:14 AM IST

ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ರತ್ನಮ್ಮ ಸಿದ್ದಲಿಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಕೊಟ್ಟೂರನಕೊಟ್ಟಿಗೆಯ ಸದಸ್ಯೆ ರತ್ನಮ್ಮ ಸಿದ್ದಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಕೊಟ್ಟೂರನಕೊಟ್ಟಿಗೆಯ ಸದಸ್ಯೆ ರತ್ನಮ್ಮ ಸಿದ್ದಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಸಿದ್ದಲಿಂಗಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಗ್ರೇಡ್ 2 ತಹಸೀಲ್ದಾರ್ ಸುಮತಿಯವರು ರತ್ನಮ್ಮ ಸಿದ್ದಲಿಂಗಪ್ಪ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ನೂತನ ಉಪಾಧ್ಯಕ್ಷೆ ರತ್ನಮ್ಮ ಸಿದ್ದಲಿಂಗಪ್ಪನವರನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕಿರಣ್ ಕುಮಾರ್, ಸದಸ್ಯರಾದ ಪವಿತ್ರಾ ಮಹೇಶ್, ಕೆ.ಎಸ್. ಆದರ್ಶ, ಹೆಚ್.ಎಸ್. ದೇವರಾಜ್, ಕೆ.ಪಿ.ಶ್ರೀನಿವಾಸ್, ಹೆಚ್.ಎಸ್.ರವಿಚಂದ್ರ, ಭವ್ಯ ನಾಗೇಶ್, ಸವಿತಾ ಯೋಗೀಶ್ ಕುಮಾರ್, ರೂಪ ಜವರಪ್ಪ, ಮುನಿಸ್ವಾಮಿ, ಗಂಗಾಮಣಿ ರಂಗಪ್ಪ, ಸೌಭಾಗ್ಯ ಶಿವಯ್ಯ, ರಾಜಲಕ್ಷ್ಮಿ ರಾಘವೇಂದ್ರ, ಕೆ.ಎಚ್.ದೇವರಾಜು, ಶೋಭಾ ಸೀನಾಚಾರ್, ಕೊಟ್ಟೂರನಕೊಟ್ಟಿಗೆ ಗ್ರಾಮದ ಮುಖಂಡರಾದ ಗುಡಿಗೌಡರಾದ ಜಗದೀಶ್, ಸಿದ್ದಲಿಂಗಪ್ಪ, ಅಭಿಲಾಷ್ ಮಂಜಣ್ಣ, ಪೊಲೀಸ್ ಶಂಕರಪ್ಪ, ಗುರುರಾಜ್, ನಾಗರಾಜು, ರಾಜಣ್ಣ, ಅಡಿಕೆ ಶ್ರೀನಿವಾಸ್, ತಿಮ್ಮಣ್ಣ, ಮೋಹನ್ ಕುಮಾರ್ ಸೇರಿದಂತೆ ಹಲವರು ಅಭಿನಂದಿಸಿದರು. ಪಿಡಿಒ ಗೋಪಿನಾಥ್ ಮತ್ತು ಕಾರ್ಯದರ್ಶಿ ಮಂಜುನಾಥ್ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗಳಿಗೆ ಸಹಕರಿಸಿದರು.