ಮೈಸೂರಿನಲ್ಲಿ ಎಲ್‌ಐಸಿ ಎಂಎಫ್ ಎರಡನೇ ಶಾಖೆಗೆ ಚಾಲನೆ
KannadaprabhaNewsNetwork | Published : Mar 13 2025, 12:46 AM IST
ಮೈಸೂರಿನಲ್ಲಿ ಎಲ್‌ಐಸಿ ಎಂಎಫ್ ಎರಡನೇ ಶಾಖೆಗೆ ಚಾಲನೆ
ಸಾರಾಂಶ
ದೇಶದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮ್ಯೂಚುವಲ್ ಫಂಡ್ ಉದ್ಯಮ ಅಭಿವೃದ್ಧಿ ಕಾಣುವ ನಿರೀಕ್ಷೆ
ಕನ್ನಡಪ್ರಭ ವಾರ್ತೆ ಮೈಸೂರುದೇಶದ ಪ್ರಮುಖ ಮ್ಯೂಚುವಲ್ ಫಂಡ್ ಸಂಸ್ಥೆಗಳಲ್ಲಿ ಒಂದಾದ ಎಲ್.ಐ.ಸಿ ಮ್ಯೂಚುವಲ್ ಫಂಡ್ ಮೈಸೂರಿನಲ್ಲಿ ತನ್ನ ಎರಡನೇ ಶಾಖೆಯನ್ನು ಆರಂಭಿಸಿದೆ.ಎಲ್.ಐ.ಸಿ ಎಂ.ಎಫ್.ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರವಿ ಕುಮಾರ್ ಝಾ ಅವರು ಬುಧವಾರ ನೂತನ ಶಾಖೆ ಉದ್ಘಾಟಿಸಿದರು.ಸರಸ್ವತಿಪುರಂನ 12ನೇ ಮುಖ್ಯರಸ್ತೆ, 5ನೇ ಕ್ರಾಸ್ ನಲ್ಲಿ (ಜವರೇಗೌಡ ಉದ್ಯಾನವನ ಬಳಿ) ಆರಂಭವಾದ ಈ ಶಾಖೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೇಶದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮ್ಯೂಚುವಲ್ ಫಂಡ್ ಉದ್ಯಮ ಅಭಿವೃದ್ಧಿ ಕಾಣುವ ನಿರೀಕ್ಷೆ ಇದ್ದು, ಮೈಸೂರಿನಲ್ಲಿ ನಾವು ಈ ಕಾರಣಕ್ಕಾಗಿಯೇ ನಮ್ಮ ವಹಿವಾಟು ವಿಸ್ತರಿಸುತ್ತಿದ್ದೇವೆ ಎಂದರು.ಮೈಸೂರು ಜ್ಞಾನಾಧಾರಿತ ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳ ಕೇಂದ್ರವಾಗಿರುವುದರಿಂದ ಇದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸಾಂಸ್ಕೃತಿಕವಾಗಿಯೂ ಈ ನಗರ ಅಭಿವೃದ್ಧಿ ಹೊಂದಿದೆ. ಹೆಚ್ಚು ಆದಾಯದ ಜನರು ಮತ್ತು ವೃತ್ತಿಪರರು ಈ ನಗರವನ್ನು ತಮ್ಮ ವಾಸಸ್ಥಾನವಾಗಿ ಹೆಚ್ಚು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 2ನೇ ಶಾಖೆಯ ಆರಂಭದ ಮೂಲಕ ಇಲ್ಲಿಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದರು.ಸಾಂಸ್ಕೃತಿಕವಾಗಿ ಶ್ರೀಮಂತ ನಗರವಾದ ಮೈಸೂರು ರಾಜ್ಯದ ದಕ್ಷಿಣದ ಕೇಂದ್ರ ಭಾಗದಲ್ಲಿದೆ. ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಎಎಂಎಫ್‌ಐ) ಸಂಸ್ಥೆಯ ಪ್ರಕಾರ ಈ ಪ್ರಾಂತ್ಯದಲ್ಲಿ ಎಲ್.ಐ.ಸಿ ಕಂಪೆನಿಯ ನಿರ್ವಹಣೆಯಡಿ ಬರುವ ಸಂಪತ್ತಿನ ಮೌಲ್ಯ (ಎಯುಎಂ) 2024ರ ಡಿ. 31ಕ್ಕೆ ಅನ್ವಯವಾಗುವಂತೆ 8,000 ಕೋಟಿ ರು. ಇದೆ ಎಂದರು.ಒಟ್ಟು ಎಯುಎಂನ ಶೇ 1.17ರಷ್ಟಿದೆ. ಒಟ್ಟು ಎಯುಎಂ 2025ರ ಫೆ. 28ಕ್ಕೆ ಅನ್ವಯವಾಗುವಂತೆ 36,209 ಕೋಟಿ ರು. ಗಳಾಗಿವೆ. ಮ್ಯೂಚುವಲ್ ಫಂಡ್ ವಹಿವಾಟು ಅಭಿವೃದ್ಧಿಗೆ ಕರ್ನಾಟಕದಲ್ಲಿ ಅಪಾರ ಅವಕಾಶವಿದ್ದು, ರಾಜ್ಯವಾರು ಮಾಸಿಕ ಎಯುಎಂನಲ್ಲಿ (ಎಎಯುಎಂ) ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. 2025ರ ಜನವರಿಯಲ್ಲಿ ಕರ್ನಾಟಕದ ಎಎಯುಎಂ 4.72 ಲಕ್ಷ ಕೋಟಿ ರು. ಆಗಿದೆ. ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಎಯುಎಂ ಇದೆ ಎಂದು ಅವರು ಹೇಳಿದರು.ಈ ವೇಳೆ ಕಂಪೆನಿಯ ದಕ್ಷಿಣ ವಲಯದ ಮುಖ್ಯಸ್ಥ ವಾಸುದೇವನ್ ದೇಶಿಕಾಚಾರಿ, ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶ್, ಮಾಜಿ ಸಿಎಂಓ ಶ್ರೀಧರನ್, ವಲಯ ವ್ಯವಸ್ಥಾಪಕ ರಾಜೇಶ್ ಬಾಬು ಇದ್ದರು.---ಕೋಟ್ಎಲ್.ಐ.ಸಿ ಮ್ಯೂಚ್ಯುವಲ್‌ಫಂಡ್‌ಈವರೆಗೆ 46 ಶಾಖೆಯನ್ನು ಹೊಂದಿದ್ದು, ಪ್ರಸಕ್ತ ವರ್ಷ ಉದ್ಘಾಟನೆಗೊಳ್ಳುತ್ತಿರುವ 7ನೇ ಶಾಖೆ ಇದಾಗಿದೆ. ಒಟ್ಟಾರೆ ನಾವು 100 ಶಾಖೆಗಳನ್ನು ಆರಂಭಿಸುವ ಗುರಿ ಹೊಂದಿದ್ದೇವೆ.- ರವಿಕುಮಾರ್ ಝಾ, ಸಿಇಒ, ಎಲ್.ಐ.ಸಿ. ಎಂಎಫ್.