ಸಾರಾಂಶ
ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಗಣಿತ ವಿಜ್ಞಾನ ಶಿಕ್ಷಕರು ಹೆಚ್ಚು ಉತ್ತೇಜನವನ್ನು ನೀಡಬೇಕು
ಕನ್ನಡಪ್ರಭ ವಾರ್ತೆ ರಾವಂದೂರು
ಮಕ್ಕಳ ಕಲಿಕೆಗೆ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಹೇಳಿದರು.ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಕಾರ್ಯಗಾರವನ್ನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಗಣಿತ ವಿಜ್ಞಾನ ಶಿಕ್ಷಕರು ಹೆಚ್ಚು ಉತ್ತೇಜನವನ್ನು ನೀಡಬೇಕು ಹಾಗೂ ಕಳೆದ ಬಾರಿಗಿಂತಲೂ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಫಲಿತಾಂಶವನ್ನು ನೀಡಲು ಶಿಕ್ಷಕರು ಮಕ್ಕಳ ಕಲಿಕೆಗೆ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ತಿಳಿಸಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಸಿ. ಪ್ರಶಾಂತ್,
ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆರ್.ವಿ. ವಿಶ್ವನಾಥ್, ತಾಲೂಕು ಸಮನ್ವಯ ಅಧಿಕಾರಿ ಶಿವರಾಜ್ ಮಾತನಾಡಿದರು.ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ನಾಗಶೆಟ್ಟಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜ್, ಮಲ್ಲೇಶ್, ಉಪ ಪ್ರಾಂಶುಪಾಲರಾದ ಸುರೇಶ್, ಮಹದೇವ್, ಮುಖ್ಯೋಪಾಧ್ಯಯರಾದ ರಾಮರಾಜ್, ಸಂಪನ್ಮೂಲ ವ್ಯಕ್ತಿಗಳಾದ ಮೇಲ್ವಿನ್, ರಮೇಶ್ ಬಾಬು, ಬಸವರಾಜ್, ಇಸಿಓ ಗಣೇಶ್, ಎಲ್ಲ ವಿಜ್ಞಾನ ಶಿಕ್ಷಕರು ಇದ್ದರು.