ವ್ಯಾಕರಣ, ಚಿತ್ರಬರಹ ಸೇರಿದಂತೆ ಅನೇಕ ರೀತಿಯ ಬರಹಗಳು ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುತ್ತದೆ

ಯಲಬುರ್ಗಾ: ತಾಲೂಕಿನ ಬಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಶ್ವಬಂಧು ಸೇವಾ ಗುರು ಬಳಗದಿಂದ ೨೬ನೇ ಗೋಡೆ ಬರಹ ಸೇವಾ ಕಾರ್ಯವನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವೀಕ್ಷಣೆ ನಡೆಸಿದರು.

ಬಳಿಕ ಮಾತನಾಡಿ,‌ ವಿಶ್ವಬಂಧು ಸೇವಾಗುರು ಬಳಗದಿಂದ ನಡೆಯುತ್ತಿರುವ ಗೋಡೆ ಬರಹ ಕಾರ್ಯವು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ಜತೆಗೆ ಮಕ್ಕಳಲ್ಲಿ ರಚನಾತ್ಮಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ವ್ಯಾಕರಣ, ಚಿತ್ರಬರಹ ಸೇರಿದಂತೆ ಅನೇಕ ರೀತಿಯ ಬರಹಗಳು ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುತ್ತದೆ. ಇವುಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳುವುದರಿಂದ ವಿದ್ಯಾಭ್ಯಾಸದ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ. ಇಂತಹ ಗೋಡೆ ಬರಹ ಸೇವಾ ಕಾರ್ಯ ಪ್ರಶಂಸಿದ ರಾಯರಡ್ಡಿ ಅವರು ಕಾರ್ಯಗಳನ್ನು ಮುಂದುವರಿಸಲು ತಿಳಿಸಿದರು.

ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುವ ಅತ್ಯುತ್ತಮ ತಂಡ ಇರುವುದರಿಂದ ಹಲವಾರು ರಚನಾತ್ಮಕ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಕುರಿ, ಮುಖ್ಯಶಿಕ್ಷಕ ದೇವಪ್ಪ ತಳವಾರ್ ಮಾತನಾಡಿದರು.

ಗೋಡೆ ಬರಹ ಸೇವಾ ಕಾರ್ಯದಲ್ಲಿ ಶಿಕ್ಷಕರಾದ ಶಿವಶಂಕ್ರಪ್ಪ ಹಳ್ಳದ, ಕೊಟ್ರೇಶ ಪಟ್ಟಣ, ಪ್ರಭು ಶಿವನಗೌಡ್ರ, ಅನ್ವರ್‌ಹುಸೇನ್, ಸಂತು, ಪರಮೇಶ ಚಿಂತಾಮಣಿ, ಶರಣು ವಾಳದ, ಶಿವರಾಜ ಕವಡಿಮಟ್ಟಿ, ಮಂಜುನಾಥ ಮನ್ನಾಪುರ, ಮೆಹಬೂಬ ಬಾವಿಕಟ್ಟಿ, ಸಿದ್ರಾಮಪ್ಪ ತಿಪ್ಪರಸನಾಳ, ಹುಸೇನಸಾಬ್‌ ಬಾಗವಾನ್, ರಾಜಮಹ್ಮದ್ ಬಾಳಿಕಾಯಿ, ನಾಗರಾಜ ಕುರಿ, ಮುರ್ತುಜಾಸಾಬ್‌ ಮುಜಾವರ, ನಾಗರಾಜ ನಡುವಲಕೇರಿ, ಮಂಜುನಾಥ ಕೊಡಕೇರಿ, ಮಂಜುನಾಥ ಬೂದಿಹಾಳ, ಕಳಕನಗೌಡ ಪಾಟೀಲ್, ಪ್ರಭಯ್ಯ ಬಳಗೇರಿಮಠ, ಅಮೀನ್ ಮುಲ್ಲಾ, ರಾಘವೇಂದ್ರ ಗೋನಾಳ, ರಾಜೇಶ ಹಡಪದ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಹಾದಿಮನಿ, ಶಾಲೆಯ ಶಿಕ್ಷಕ ಸಕ್ರಪ್ಪ ಕುಷ್ಟಗಿ, ನಿಂಗಪ್ಪ ತೋಪಲಕಟ್ಟಿ, ದೇವಪ್ಪ ಹಲಗೇರಿ, ಹುಲಗಪ್ಪ ಹಿರೇಮನಿ ಇದ್ದರು.