ಕಂದಾಯ ನೌಕರರ ಬ್ಯಾಂಕ್ ಅಧ್ಯಕ್ಷರಾಗಿ ರಾಯವ್ವಗೋಳ ಪುನರಾಯ್ಕೆ

| Published : Jan 06 2025, 01:03 AM IST

ಕಂದಾಯ ನೌಕರರ ಬ್ಯಾಂಕ್ ಅಧ್ಯಕ್ಷರಾಗಿ ರಾಯವ್ವಗೋಳ ಪುನರಾಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಿ.ಬೆಳಗಾವಿ ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕಿನ ಹಾಲಿ ಅಧ್ಯಕ್ಷ ಬಸವರಾಜ ರಾಯವ್ವಗೋಳ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ದಿ.ಬೆಳಗಾವಿ ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕಿನ ಹಾಲಿ ಅಧ್ಯಕ್ಷ ಬಸವರಾಜ ರಾಯವ್ವಗೋಳ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

ಬ್ಯಾಂಕಿನ ಸಭಾಗೃಹದಲ್ಲಿ ಆಡಳಿತ ಮಂಡಳಿಯ 2024-29ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಶ್ರೀಕಾಂತ ಹೈಗರ್‌ ಅವಿರೋಧ ಆಯ್ಕೆಯಾದರು.

ಬಳಿಕ ಮಾತನಾಡಿದ ಅಧ್ಯಕ್ಷ ಬಸವರಾಜ ರಾಯವ್ವಗೋಳ ಮಾತನಾಡಿ, ನಿರೀಕ್ಷೆಯಂತೆ ಜಿಲ್ಲಾ ಕಂದಾಯ ನೌಕರರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹುದ್ದೆಗೆ ಎರಡನೇ ಬಾರಿಗೆ ಆಯ್ಕೆಯಾಗಿದ್ದು ಜವಾಬ್ದಾರಿ ಹೆಚ್ಚಿಸಿದೆ. ಬರುವ ದಿನಗಳಲ್ಲಿ ನೌಕರರ ಸಂಘಟನೆಯನ್ನು ಮತ್ತಷ್ಟು ಸದೃಢವಾಗಿ ಕಟ್ಟುವುದರೊಂದಿಗೆ ಕಂದಾಯ ನೌಕರರ ಹಿತಾಸಕ್ತಿ ಕಾಪಾಡಲಾಗುವುದು. ಅಧಿಕಾರವಧಿಯಲ್ಲಿ ನೌಕರರ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಲಾಗುವುದು ಎಂದು ಹೇಳಿದರು.

ಸಹಕಾರ ಸಂಘಗಳ ಅಪರ ನಿಬಂಧಕ ಎಸ್.ಎಸ್. ಗೌಡಪ್ಪನವರ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಬ್ಯಾಂಕಿನ ಎನ್.ಆರ್. ಪಾಟೀಲ, ಬಸವರಾಜ ಕೊಂಡಿಕೊಪ್ಪ, ದುಂಡಪ್ಪ ವಟಗುಡೆ, ಹೇಮಂತಗೌಡ ಪಾಟೀಲ, ಬಾಬು ಸೀತಾರ, ಮಹೇಶ ಹಿರೇಮಠ, ಗೀತಾ ತಳವಾರ, ಮ್ಯಾನೇಜರ್ ಸಂದೀಪ ಜಾಧವ ಮತ್ತಿತರರು ಉಪಸ್ಥಿತರಿದ್ದರು.