ಭಗವಾನ್ ೧೦೦೮ ಆದಿನಾಥ ತೀರ್ಥಂಕರ ಶಿಲಾಜಿನಬಿಂಬ ಪುನರ್ ಪ್ರತಿಷ್ಠಾಪನೆ

| Published : Nov 04 2025, 12:15 AM IST

ಸಾರಾಂಶ

ನ.೩೧ರಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ ಮೂರು ದಿನಗಳ ಕಾಲ ನಡೆದ ರಾಜ್ಯಾಭಿಷೇಕ, ವೈರಾಗ್ಯ ಪೂರ್ವಕಕಲ್ಯಾಣ, ಧೀಕ್ಷಾ ಕಲ್ಯಾಣ, ಗರ್ಭಾವತಾರ ಕಲ್ಯಾಣ, ಜನಮಾತೆಗೆ ಸೀಮಂತ ಆರತಿ. ಕೊನೆಯದಿನ ಆದಿನಾಥ ಮುನಿವರ್ಯರ ಆಹಾರ ಧಾನವಿಧಿ, ಕೇವಲ ಜ್ಞಾನವಿಧಿ, ಜಿನಬಿಂಬ, ಕಲಶ ಮಹಾಭಿಷೇಕ ಧಾರ್ಮಿಕ, ಕಾರ್ಯಕ್ರಮಕ್ಕೆ ದೀಪಬೆಳಗಿಸುವ ಮೂಲಕ ಚಾಲನೆ ನೀಡಿದರು.

ಚಾಮರಾಜನಗರ: ತಾಲೂಕಿನ ಮಲೆಯೂರು ಗ್ರಾಮದಲ್ಲಿ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್, ಪ್ರಾಚ್ಯ ವಸ್ತು ಸಂಗ್ರಹಾಲಯ, ಪರಂಪರೆ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ, ಭಕ್ತಾದಿಗಳ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡಿರುವ ಪ್ರಾಚೀನ ಶಿಲಾ ಬಸದಿ ಭಗವಾನ್ ೧೦೦೮ ಆದಿನಾಥ ತೀರ್ಥಂಕರರ ಶಿಲಾ ಜಿನಬಿಂಬ ಪುನರ್ ಪ್ರತಿಷ್ಠಾಪನೆ ಹಾಗೂ ಧಾಮ ಸಂಪ್ರೋಕ್ಷಣೆ, ಪಂಚಕಲ್ಯಾಣ ಪೂರ್ವಕ ಭಗವಾನ್ ೧೦೦೮ ಆದಿನಾಥ ತೀರ್ಥಂಕರರ ಶಿಲಾ ಜಿನಬಿಂಬ ಪುನರ್ ಪ್ರತಿಷ್ಠಾಪನೆಯೊಂದಿಗೆ ಮೂರುದಿನಗಳ ಪೂಜಾ ಕಾರ್ಯಕ್ರಮಕ್ಕೆ ಭಾನುವಾರ ವರ್ಣರಂಜಿತ ತೆರೆಬಿತ್ತು.

ನ.೩೧ರಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ ಮೂರು ದಿನಗಳ ಕಾಲ ನಡೆದ ರಾಜ್ಯಾಭಿಷೇಕ, ವೈರಾಗ್ಯ ಪೂರ್ವಕಕಲ್ಯಾಣ, ಧೀಕ್ಷಾ ಕಲ್ಯಾಣ, ಗರ್ಭಾವತಾರ ಕಲ್ಯಾಣ, ಜನಮಾತೆಗೆ ಸೀಮಂತ ಆರತಿ. ಕೊನೆಯದಿನ ಆದಿನಾಥ ಮುನಿವರ್ಯರ ಆಹಾರ ಧಾನವಿಧಿ, ಕೇವಲ ಜ್ಞಾನವಿಧಿ, ಜಿನಬಿಂಬ, ಕಲಶ ಮಹಾಭಿಷೇಕ ಧಾರ್ಮಿಕ, ಕಾರ್ಯಕ್ರಮಕ್ಕೆ ದೀಪಬೆಳಗಿಸುವ ಮೂಲಕ ಚಾಲನೆ ನೀಡಿದರು.

ಮಂಡ್ಯ ಜಿಲ್ಲೆ ಆರತಿಪುರ ಜೈನ ಮಠದ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ, ಮಲೆಯೂರು ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ೧೦೮ ಪುಣ್ಯಸಾಗರ ಮುನಿ ಮಹಾರಾಜರು, ಶ್ರವಣಬೆಳಗೊಳದ ಮದಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಶನಿವಾರ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹರವೆ ವಿರಕ್ತಮಠದ ಸರ್ಪಭೂಷಣ ಸ್ವಾಮೀಜಿ ಆಶೀರ್ವಚನ ನೀಡಿದರು.

ಶ್ರವಣಬೆಳಗೊಳ ಸರ್ವೇಶ್‌ ಜೈನ್ ಬೀಟ್ ತಂಡದವರು ಸಂಗೀತ ಗಾಯನ ನಡೆಸಿಕೊಟ್ಟರು.

ಅರುಣ್ ಪಂಡಿತ್ ಅವರ ಕಾರ್ಯಕ್ರಮ ನಿರೂಪಣಾ ಶೈಲಿ ಎಲ್ಲರ ಗಮನ ಸೆಳೆಯಿತು.

ರಾಷ್ಟ್ರೀಯ ಜೈನ್ ಮಿಲನ್ ಅಧ್ಯಕ್ಷ ಡಿ.ಸುರೇಂದ್ರಕುಮಾರ್, ವೀರೇಂದ್ರ ಹೆಗಡೆ ಪುತ್ರಿ ಶ್ರದ್ದಾ ಅಮಿತ್ , ಭಗವಾನ್ ೧೦೦೮ ಆದಿನಾಥ ತೀರ್ಥಂಕರ ದಿಗಂಬರ ಜೈನ ಸೇವಾಟ್ರಸ್ಟ್ ಅಧ್ಯಕ್ಷ ವಸುಪಾಲ್ ಹಾಗೂ ಪದಾಧಿಕಾರಿಗಳು. ಪ್ರಾಚ್ಯವಸ್ತು ಸಂಗ್ರಹಾಲಯ, ಪರಂಪರೆ ಇಲಾಖೆ ಆಯುಕ್ತ ದೇವರಾಜ್, ಪಂಚಕಲ್ಯಾಣ ಮಹೋತ್ಸವ ಸಮಿತಿ ಹಾಗೂ ಮಲೆಯೂರು ಗ್ರಾಮಸ್ಥರು, ಜಿಲ್ಲೆಯ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಸಿಬ್ಬಂದಿ, ಸ್ವ- ಸಹಾಯ ಸಂಘಗಳ ಸದಸ್ಯರು ರಾಜ್ಯದ ವಿವಿಧ ಜಿಲ್ಲೆಗಳ ಜೈನ ಸಮಾಜದವರು ಸಂಪೂರ್ಣವಾಗಿ ಸಹಕಾರ ನೀಡುವುದರ ಮೂಲಕ ಕಾರ್ಯಕ್ರಮ ಯಶಸ್ಸು ಕಂಡಿತು.