ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕರ್ನಾಟಕದ ಏಕೈಕ ಎರಡು ದಿನಗಳ ತೇರು ಎಳೆಯುವ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ಮಹಾಲಿಂಗೇಶ್ವರರ ಜಾತ್ರೆಯ ಮರು ರಥೋತ್ಸವ ಗುರುವಾರ ಸಂಭ್ರಮ, ಸಡಗರದಿಂದ ಅಪಾರ ಭಕ್ತ ಸಮೂಹದ ಮಧ್ಯೆ ನಡೆಯಿತು.ಸೆ.18 ರಂದು ತುಂಬಿದ ತೇರು ಸಂಜೆ 7 ಗಂಟೆಗೆ ಮಹಾರಥೋತ್ಸವ ಜರುಗಿ 20 ಬೆಳ್ಳಿಗೆ 6 ಗಂಟೆಗೆ ಶ್ರೀ ಚನ್ನಗಿರೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ತೆರಿಗೆ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದರು. ಭಕ್ತರು ಮೊದಲ ದಿನದ ತೇರು ತಲುಪಿಸಿ ಮಹಾಲಿಂಗೇಶ್ವರರ ಕೃಪೆಗೆ ಪಾತ್ರರಾದರು.
ಗುರುವಾರ ನಡೆದ ಮರು ರಥೋತ್ಸವದ ತೆರನ್ನು ಹೂವಿನ ಅಲಂಕಾರದಿಂದ ಸಿಂಗರಿಸಲಾಗಿತ್ತು. ಸಂಜೆ 6 ಗಂಟೆಗೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮುಂದೆ ಬಂಡಿ ಉಚ್ಚಾಯಿ ಅದರ ಮುಂದೆ ಕಂಡ್ಯಾಳ ಬಾಸಿಂಗ, ಅದರ ಮುಂದೆ ನಂದಿಕೋಲು ಮುಂದೆ ಮಂಗಲ ವಾದ್ಯಗಳ ಸಂಗಮವೇ ಜರುಗಿ ನೋಡುಗರ ಗಮನ ಸೆಳೆಯಿತು. ಕರಡಿ ಮೇಳದವರು ಸುಂದರವಾಗಿ ಕರಡಿ ನುಡಿಸಿದಾಗ ನೆರೆದ ಜನ ಸೀಳೆ ಚಪ್ಪಾಳೆ ತಟ್ಟಿ ಹುರದುಂಬಿಸಿದರು. ಕೈಪೆಟ್ ಮೇಳಕ್ಕೆ ಜನ ಕುಣಿದು ಕುಪ್ಪಳಿಸಿದರು. ಕಣಿ ವಾದನಕ್ಕೆ ಕರ್ಣ ತುಂಬಿಕೊಂಡ ಜನ ಮತ್ತೆ ಮತ್ತೆ ಕೇಳುವ ಬಯಕೆ ವ್ಯಕ್ತ ಪಡಿಸಿದರು. ಭಾವೈಕತೆ ಭಾವ ತೋರಿ ದೇವರಿಗೆ ಬೆಂಡ, ಬೆತ್ತಾಸ, ಉತ್ತತ್ತಿ ಹಾರಿಸಿ ದೇವರ ಕೃಪೆಗೆ ಪಾತ್ರರಾದರು. ಎರಡು ಕುದುರೆಗಳು ಜಾತ್ರೆ ಆಕಷರ್ಣಿಯವಾಗಿದ್ದವು.ವಿದ್ಯುತ್ ಅಲಂಕಾರದಿಂದ ಚನ್ನಗಿರೇಶ್ವರ ದೇವಸ್ಥಾನ ನೋಡುಗರ ಗಮನ ಸೆಳೆಯಿತು. ಇಡೀ ಊರು ಮದುವನ ಗಿತ್ತಿಯಂತೆ ಸಿಂಗಾರಗೊಂಡಿತು. ಎಲ್ಲಿ ನೋಡಿದರೂ ಜನಸಾಗರ ಕಣ್ಣಿಗೆ ರಾಚುತ್ತಿತ್ತು. ನಂತರ ಜನರು ದೇವರಿ ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ಮೆರೆದರು.
ರಥೋತ್ಸವದ ನಿಮಿತ್ತ ಊರಿನ ತುಂಬೆಲ್ಲ ಬಯಲಾಟಗಳು, ಡೊಳ್ಳಿನ ಹಾಡುಗಳು, ಪಾರಿಜಾತ, ಭಜನೆಗಳು, ರಸಮಂಜರಿ, ಚೌಡಕಿ ಪದಗಳು, ಗೀಗೀ ಪದಗಳು ಇಡೀ ಊರನ್ನು ಸಂಗೀತದಲ್ಲಿ ತೆಲುವಂತೆ ಮಾಡಿದ್ದವು. ಮರು ರಥೋತ್ಸವದ ದಿನ ಚನ್ನಗಿರೇಶ್ವರ ದೇವಸ್ಥಾನದ ಮುಂದೆ ನಂದಿ (ಅಕ್ಕಳು )ಮಲಗಿತ್ತು. ಭಕ್ತರಿಗೆ ಇದು ಕೈಲಾಸದ ಶಿವನ ನಂದಿಯಂತೆ ಕಾಣುತಿತ್ತು. ಆ ಶಿವನ ಮುಂದೆ ಹೇಗೆ ನಂದಿ ವಿರಾಜಮಾನವಾಗಿರುತ್ತಿತ್ತೋ ಹಾಗೆ ಭೂಲೋಕದ ಈ ಶಿವಾ (ಶ್ರೀ ಮಹಾಲಿಂಗೇಶ್ವರ )ಮುಂದೆ ಸಾಕ್ಷಿ ಕರಿಸಿತು. ಈ ಜೀವಂತ ನಂದಿಯನ್ನು ಕಂಡು ಭಕ್ತರು ಅದನ್ನು ಮುಟ್ಟಿ ನಮಸ್ಕಾರ ಮಾಡಿದರು.ಮರು ರಥೋತ್ಸವ ಕಣ್ಣು ತುಂಬಿಕೊಳ್ಳಲು ಸುತ್ತಮುತ್ತಲಿನ ಹಳಿಗಳಿಂದ ಅಪಾರ ಜನಸ್ತೋಮ ಹರಿದು ಬಂದಿತು. ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಮರು ತೇರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತಲುಪಿ ತೆರಿಗೆ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಪೂಜೆ ಸಲ್ಲಿಸುವುದರೊಂದಿಗೆ 2024ನೇ ಸಾಲಿನ ಮಹಾಜಾತ್ರೆಗೆ ತೆರೆ ಎಳೆದರು.