ಸಂವಿಧಾನದ ಓದಿ ಅನ್ಯಾಯದ ವಿರುದ್ಧ ಹೋರಾಡಿ

| Published : Jan 28 2024, 01:16 AM IST

ಸಾರಾಂಶ

ಸರ್ಕಾರಿ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವದಲ್ಲಿ ಅಂಜುಮನ್ ಸದಸ್ಯ ಮೌಲಾಬಾಹೇಬ ರಕ್ಕಸಗಿ ಧ್ವಜಾರೋಹಣ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ನಾಲತವಾಡ

ರೈತರು, ಶೋಷಿತರು, ಬಡವರು ಸೇರಿದಂತೆ ದೇಶದ ಧ್ವನಿ ರಹಿತರೆಲ್ಲ ಇಷ್ಟೊಂದು ಧೈರ್ಯದಿಂದ ಈ ದೇಶದಲ್ಲಿ ಜೀವಿಸಲು ಕಾರಣವೇ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂದು ಅಂಜುಮನ್ ಸದಸ್ಯ ಮೌಲಾಬಾಹೇಬ ರಕ್ಕಸಗಿ ಹೇಳಿದರು.

75ನೇ ಗಣರಾಜ್ಯೋತ್ಸವ ಅಂಗವಾಗಿ ಸ್ಥಳೀಯ ಸರ್ಕಾರಿ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಬಂತು. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ದೇಶದ ಏಕತೆಯನ್ನು ಸಂವಿಧಾನ ಉಳಿಸಿದೆ. ಪ್ರತಿ ಭಾರತೀಯನೂ ಈ ಸಂವಿಧಾನದ ಇತಿಹಾಸ, ಅರ್ಥ ತಿಳಿದುಕೊಳ್ಳಬೇಕು. ಯುವ ಪೀಳಿಗೆ ಸಂವಿಧಾನದ ಹಾದಿಯಲ್ಲಿ ನಡೆಯಬೇಕು. ನಾವು ಸಂವಿಧಾನವನ್ನು ಓದಿ ತಿಳಿದಮೇಲೆ ನಾವು ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯ ಎಂದು ತಿಳಿಸಿದರು.

ಮುಖ್ಯಗುರುಗಳಾದ ಎ.ಎಚ್.ಖಾಜಿ ಮಾತನಾಡಿದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು. ಶಾಲೆಯ ಮಕ್ಕಳಿಂದ ದೇಶ ಭಕ್ತಿ ಗೀತೆಗಳ ಮೇಲೆ ನೃತ್ಯ ಹಾಗೂ ಭಾಷಣ ಕಾರ್ಯಕ್ರಮ ನಡೆಯಿತು.

ಈ ವೇಳೆ ಅಂಜುಮನ್ ಕಮೀಟಿ ಅಧ್ಯಕ್ಷ ಲಾಳೇಮಶಾಕ ಅವಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಅಲ್ತಾಫ ಕೊಣ್ಣೂರ ಗಣರಾಜ್ಯೋತ್ಸವ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಅಂಜುಮನ್ ಸದಸ್ಯ ಉಮರಫಾರುಕ್ ಮೂಲಿಮನಿ, ರಜಾಕ ನಾಡದಾಳ, ಮೈಬುಬ ಬಾಗವಾನ, ಸಲೀಂ ಕಸ್ಸಾಬ, ಅಮೀನಸಾಬ ಹಾವರಗಿ, ರಸೂಲಸಾಬ ಖಾಜಿ, ಯಾಸಿಂ ನಾಡದಾಳ, ನಜೀರಹುಸೇನ ಖಾಜಿ, ಲಾಳೇಮಶಾಕ ಅವಟಿ, ಹಾಗೂ ಇನ್ನಿತರರು ಇದ್ದರು.