ಇತ್ತೀಚೆಗೆ ಮೊಬೈಲ್ ಸೇರಿದಂತೆ ಡಿಜಿಟಲ್ ಓದಿನಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಪುಸ್ತಕಗಳ ಓದು ಮಾತ್ರ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುತ್ತದೆ.
ಧಾರವಾಡ:
ಮನುಷ್ಯ ಬದುಕಲು ನೀರು, ಗಾಳಿ, ಬೆಳಕು ಮತ್ತು ಆಹಾರ ಹೇಗೆ ಮುಖ್ಯವೋ ಹಾಗೆಯೇ ಮಾನವೀಯ ಮೌಲ್ಯ ರೂಢಿಸಿಕೊಳ್ಳಲು ಪುಸ್ತಕಗಳಿಂದ ಮಾತ್ರ ಸಾಧ್ಯ. ಮಕ್ಕಳು ಗ್ರಂಥಾಲಯದ ಸದುಪಯೋಗಪಡಿಸಿಕೊಂಡರೆ ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ಶಿಕ್ಷಕರಾದ ಶುಭಮಂಗಳಾ ಜಿ. ಹೇಳಿದರು.ಇಲ್ಲಿಯ ನೀರಲಕಟ್ಟಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ದಿನದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮೊಬೈಲ್ ಸೇರಿದಂತೆ ಡಿಜಿಟಲ್ ಓದಿನಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಪುಸ್ತಕಗಳ ಓದು ಮಾತ್ರ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಯುವ ಜನಾಂಗ ಮೊಬೈಲ್, ಕಂಪ್ಯೂಟರ್‌ಗಿಂತ ಪುಸ್ತಕ ಬಳಸಬೇಕೆಂದು ಸಲಹೆ ನೀಡಿದರು.
ಈ ವೇಳೆ ಗ್ರಂಥಾಲಯ ಪಿತಾಮಹ ಎಸ್.ಆರ್. ರಂಗನಾಥನ್ ಅವರನ್ನು ಸ್ಮರಿಸಲಾಯಿತು. ವಿದ್ಯಾರ್ಥಿ ಅಥರ್ವ ಕುಲಕರ್ಣಿ ''''''''ಗ್ರಂಥಾಲಯ ಕ್ಷೇತ್ರಕ್ಕೆ ಎಸ್.ಆರ್. ರಂಗನಾಥರ ಕೊಡುಗೆ'''''''' ವಿಷಯದ ಕುರಿತು ಮಾತನಾಡಿದರು. ವಿಶೇಷವಾಗಿ ಮಕ್ಕಳಿಗಾಗಿ ಮ್ಯಾಗ್ಜಿನ್ ರಚನೆ, ಕವನ ರಚನೆ, ಸೃಜನಶೀಲ ಬರವಣಿಗೆ, ಪುಸ್ತಕ ವಿಮರ್ಶೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಒಂದು ಶೈಕ್ಷಣಿಕ ವರ್ಷದಲ್ಲಿ ಗ್ರಂಥಾಲಯ ಬಳಸಿಕೊಂಡು ಅತಿ ಹೆಚ್ಚು ಅಂದರೆ 63 ಪುಸ್ತಕಗಳನ್ನು ಓದಿದ ವಾದಿರಾಜ ದೇಸಾಯಿ ''''''''ವರ್ಷದ ಓದುಗ'''''''' ಪ್ರಶಸ್ತಿ ಪಡೆದುಕೊಂಡರು. ಪ್ರಾಚಾರ್ಯರಾದ ಡಾ. ಅನಿತಾ ರೈ ಹಾಗೂ ಶಾಲಾ ಶಿಕ್ಷಕರಿದ್ದರು. ಸುಶ್ರುತ ಪತ್ತಾರ ಸ್ವಾಗತಿಸಿದರು. ಸೋಹನ್ ಪಾಟೀಲ್ ನಿರೂಪಿಸಿದರು. ಆರಾಧ್ಯ ಸೋನಾರ್ ವಂದಿಸಿದರು.