ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹಾಡಹಗಲೇ ಅವರ ಪತ್ನಿ ಎದುರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದು ಪರಾರಿ ಆಗಿರುವ ಘಟನೆ ಹಾಡಹಗಲೇ ನಗರದಲ್ಲಿ ಶುಕ್ರವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಹಾಡಹಗಲೇ ಅವರ ಪತ್ನಿ ಎದುರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದು ಪರಾರಿ ಆಗಿರುವ ಘಟನೆ ಹಾಡಹಗಲೇ ನಗರದಲ್ಲಿ ಶುಕ್ರವಾರ ನಡೆದಿದೆ.ಯಲಹಂಕದ ಕೋಗಿಲು ಕ್ರಾಸ್ ಸಮೀಪದ ನಿವಾಸಿ ಚರಣ್ ಗೌಡ (40) ಕೊಲೆಯಾದ ದುರ್ದೈವಿ. ಯಲಹಂಕ ಉಪನಗರದ 1ನೇ ಹಂತದ ವಿಶ್ವೇಶ್ವರಯ್ಯ ನಗರದಲ್ಲಿ ತಮ್ಮ ಕಚೇರಿ ಬಳಿ ಬೆಳಗ್ಗೆ ಕಾರಿನಿಂದಿಳಿದು ತೆರಳುವಾಗ ಹೊಂಚು ಹಾಕಿ ಇಬ್ಬರು ದಾಳಿ ನಡೆಸಿದ್ದಾರೆ.
ಈ ವೇಳೆ ತಮ್ಮ ಚರಣ್ ಜೊತೆ ಇದ್ದ ಅವರ ಪತ್ನಿ ಚೀರಾಟ ಕೇಳಿದ ನೆರೆಹೊರೆಯವರು ರಕ್ಷಣೆಗೆ ಧಾವಿಸಿದ್ದಾರೆ. ಅಷ್ಟರಲ್ಲಿ ಅಲ್ಲಿಂದ ಹಂತಕರು ಕಾಲ್ಕಿತ್ತಿದ್ದಾರೆ. ಕೂಡಲೇ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ಮೃತ ಪತ್ನಿ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ದುರಾದೃಷ್ಟವಾಶಾತ್ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ.3 ವರ್ಷಗಳ ಹಿಂದೆ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹರಿಸಂದ್ರದ ಚರಣ್ ಗೌಡ ಹಾಗೂ ವಿಮರ್ಶಿಣಿ ವಿವಾಹವಾಗಿದ್ದು, ಮದುವೆ ಬಳಿಕ ಕೋಗಿಲು ಕ್ರಾಸ್ ಸಮೀಪ ದಂಪತಿ ನೆಲೆಸಿದ್ದರು. ನಗರ ಹಾಗೂ ಹೊರ ಜಿಲ್ಲೆಗಳಲ್ಲಿ ಚರಣ್ ರಿಯಲ್ ಎಸ್ಟೇಟ್ ವ್ಯವಹಾರ ತೊಡಗಿದ್ದರು. ಯಲಹಂಕ ಉಪನಗರ 1ನೇ ಹಂತದ ವಿಶ್ವೇಶ್ವರಯ್ಯ ನಗರದಲ್ಲಿ ಅವರ ರಿಯಲ್ ಎಸ್ಟೇಟ್ ಕಚೇರಿ ಇದೆ.
ಎಂದಿನಂತೆ ಬೆಳಗ್ಗೆ ಕಚೇರಿಗೆ ಪತ್ನಿ ಜತೆ ಕಾರಿನಲ್ಲಿ ಅವರು ಬಂದಿದ್ದಾರೆ. ಆಗ ಕಾರಿನಿಂದ ಇಳಿದು ಮೊದಲ ಮಹಡಿಯಲ್ಲಿದ್ದ ಕಚೇರಿಗೆ ಚರಣ್ ಪತ್ನಿ ತೆರಳುತ್ತಿದ್ದರು. ಕಾರು ನಿಲುಗಡೆ ಮಾಡಿ ಕೆಳಗಿಳಿದ ತಕ್ಷಣವೇ ಚರಣ್ ಮೇಲೆ ದುಷ್ಕರ್ಮಿಗಳಿಬ್ಬರು ಎರಗಿದ್ದಾರೆ. ಪತಿ ಚೀರಾಟ ಕೇಳಿ ಮುಂದೆ ಹೋಗಿದ್ದ ವಿಮರ್ಶಿ, ಕೂಡಲೇ ಮರಳಿದ್ದಾರೆ. ಆದರೆ ಅವರ ಮುಂದೆಯೇ ಮನಬಂದಂತೆ ಹಲ್ಲೆ ನಡೆಸಿ ಹಂತಕರು ಪರಾರಿ ಆಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಚರಣ್ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾರು ತೆಗೀರಿ ಆಸ್ಪತ್ರೆಗೆ ಹೋಗೋಣ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತಿಯ ಜೀವ ಉಳಿಸಲು ಮೃತ ಚರಣ್ ಪತ್ನಿ ವಿಮರ್ಶಿಣಿ ಯತ್ನಿಸಿದ್ದಾರೆ. ಕಾರು ತೆಗೀರಿ ಆಸ್ಪತ್ರೆಗೆ ಹೋಗೋಣ ಎಂದು ಅವರು ಗೋಳಾಡಿದ್ದಾರೆ. ತಮ್ಮ ಪತಿ ಮುಂದೆ ವಿಮರ್ಶಿಣಿ ಆಕ್ರಂದನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿವೆ.ಭೂ ವಿವಾದದ ವೈರತ್ವ?
ಭೂ ವ್ಯವಹಾರದ ಹಿನ್ನಲೆಯಲ್ಲಿ ಚರಣ್ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಗರ ಹೊರವಲಯದ ಜಮೀನು ವಿಚಾರವಾಗಿ ಕೆಲವರ ಜತೆ ಅವರಿಗೆ ಮನಸ್ತಾಪವಾಗಿತ್ತು. ಈ ಜಿದ್ದಿನಿಂದ ಸುಪಾರಿ ಕೊಟ್ಟು ಚರಣ್ ಅವರನ್ನು ವಿರೋಧಿಗಳು ಹತ್ಯೆ ಮಾಡಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.