ಸಾಮರ್ಥ್ಯ ಅರಿತು ಗುರಿಯೊಂದಿಗೆ ಸಾಧನೆ ಮಾಡಿ: ನಾಗರಾಜ ಯಾದವ

| Published : Sep 26 2024, 09:49 AM IST

ಸಾಮರ್ಥ್ಯ ಅರಿತು ಗುರಿಯೊಂದಿಗೆ ಸಾಧನೆ ಮಾಡಿ: ನಾಗರಾಜ ಯಾದವ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಇತಿಮಿತಿಗಳನ್ನು ಅರಿತುಕೊಂಡು ಜೀವನದಲ್ಲಿ ಗುರಿ ಸಾಧಿಸಬೇಕು.

ಹೊಸಳ್ಳಿಯಲ್ಲಿ ನನ್ನ ಭವಿಷ್ಯ ನನ್ನ ಆಯ್ಕೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಇತಿಮಿತಿಗಳನ್ನು ಅರಿತುಕೊಂಡು ಜೀವನದಲ್ಲಿ ಗುರಿ ಸಾಧಿಸಬೇಕು ಎಂದು ಅನಾಹತ್ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ನಾಗರಾಜ ಯಾದವ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನನ್ನ ಭವಿಷ್ಯ ನನ್ನ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ಇರುವಾಗಲೇ ಶಿಕ್ಷಕರು ಅವರ ಆಸಕ್ತಿ, ಅಭಿರುಚಿ ಗುರುತಿಸಿ ಅದನ್ನು ಪೋಷಿಸಬೇಕು ಎಂದರು.

ಸಮಾಜ ವಿಜ್ಞಾನ ಶಿಕ್ಷಕ ವಿಜಯಕುಮಾರ ದೊಡ್ಮನಿ ಮಾತನಾಡಿ, ಹೆತ್ತವರು ಕನಸನ್ನು ಇಟ್ಟುಕೊಂಡು ತಮಗೆ ವಿದ್ಯಾಭ್ಯಾಸವನ್ನು ಕಲಿಸುತ್ತಾರೆ. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಛಲದಿಂದ ಉನ್ನತ ಹುದ್ದೆ ತಲುಪಬೇಕೆಂದರು.

ವಸತಿ ಶಾಲೆ ಪ್ರಾಂಶುಪಾಲ ವಿ.ಬಿ. ಹನುಮಶೆಟ್ಟಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಂಡು ಸತತ ಅಭ್ಯಾಸದ ಕಡೆ ಗಮನಹರಿಸುವ ಮೂಲಕ ಹೆಚ್ಚು ಅಂಕ ಪಡೆದು ಉತ್ತೀರ್ಣವಾಗಬೇಕು. ಕೇವಲ ಪಾಸಾದರೆ ಸಾಲದು ಮನದಲ್ಲಿಟ್ಟುಕೊಂಡು ಅಭ್ಯಾಸದಲ್ಲಿ ನಿರತರಾಗಬೇಕು ಎಂದರು.

ಶಿಕ್ಷಕರಾದ ಪುರುಷೋತ್ತಮ ಪೂಜಾರ, ಮಲ್ಲಿಕಾರ್ಜುನ ಅಮಗಡಿ, ರವೀಂದ್ರ ಮಾಳೆಕೊಪ್ಪ ಮತ್ತಿತರರಿದ್ದರು. ಶಿಕ್ಷಕ ಶಾಂತವೀರಯ್ಯ ಬಲವಂಚಿಮಠ ಪ್ರಾರ್ಥಿಸಿ, ಹರಿಪ್ರಿಯಾ ಸ್ವಾಗತಿಸಿದರು. ಶಿಕ್ಷಕ ದ್ಯಾಮಣ್ಣ ರಾಜೂರ ನಿರೂಪಿಸಿ, ವಂದಿಸಿದರು.ಇಂದು ಗಾಣಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ:

ಯಲಬುರ್ಗಾ ಪಟ್ಟಣದ ಬುದ್ಧ, ಬಸವ, ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಗಾಣಿಗ ಸಂಘ ಹಾಗೂ ಗಾಣಿಗ ನೌಕರರ ಸಂಘದ ವತಿಯಿಂದ ಸೆ.೨೬ರಂದು ಬೆಳಗ್ಗೆ ೧೧ ಗಂಟೆಗೆ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ೨೦೨೩-೨೪ನೇ ಸಾಲಿನ ಗಾಣಿಗ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.೯೦ ಅಂಕ ಪಡೆದ ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವುದರ ಜತೆಗೆ ಸಮಾಜದ ಗಣ್ಯರಿಗೆ ಸನ್ಮಾನ ಮಾಡಲಾಗುವುದು ಎಂದರು.ಅಂದು ಬೆಳಗ್ಗೆ ಕನಕದಾಸ ವೃತ್ತದಿಂದ ಅಂಬೇಡ್ಕರ್ ಭವನದವರೆಗೂ ಮಹಿಳೆಯದಿಂದ ಕುಂಭ ಕಳಸದೊಂದಿಗೆ ವನಶ್ರೀ ಮಠದ ಜಯದೇವ ಜಗದ್ಗುರು ಸ್ವಾಮೀಜಿಗಳ ಭಾವಚಿತ್ರ ಮೆರವಣಿಗೆ ನಡೆಯಲಿದೆ. ವಿಜಯಪುರದ ವನಶ್ರೀ ಮಠದ ಡಾ. ಜಯಬಸವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಯಡ್ಡೋಣಿ ಸಂಸ್ಥಾನ ಮಠದ ಕೇಶವಾನಂದ ಮಹಾಸ್ವಾಮಿ ಸಮ್ಮುಖ ವಹಿಸುವರು. ಶಾಸಕ ಬಸವರಾಜ ರಾಯರಡ್ಡಿ ಉದ್ಘಾಟಿಸಲಿದ್ದಾರೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಘನ ನೇತೃತ್ವ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ, ರುದ್ರಮುನಿ ಗಾಳಿ, ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭ ಸಮಾಜದ ತಾಲೂಕಾಧ್ಯಕ್ಷ ಸುಧಾಕರ ದೇಸಾಯಿ, ರುದ್ರಮುನಿ ಗಾಳಿ, ಎನ್.ಸಿ. ಗೌಡರ, ಅರವಿಂದಗೌಡ ಪಾಟೀಲ್, ಮಹೇಶ ಹಳ್ಳಿ, ರತನ್ ದೇಸಾಯಿ, ಶಿವಪ್ಪ ವಾದಿ, ಅಯ್ಯನಗೌಡ ಕೆಂಚಮ್ಮನವರ, ಸಂಗಮೇಶ ವಾದಿ, ಉಮೇಶ ಮೆಸಣಗೇರಿ, ಜಯರಾಜ ದೇಸಾಯಿ ಇತರರಿದ್ದರು.