ಸಕಾಲಕ್ಕೆ ಸಾಲ ಮರುಪಾವತಿಸಿದರೆ ರಿಯಾಯ್ತಿ ಸೌಲಭ್ಯ

| Published : Sep 11 2025, 12:04 AM IST

ಸಕಾಲಕ್ಕೆ ಸಾಲ ಮರುಪಾವತಿಸಿದರೆ ರಿಯಾಯ್ತಿ ಸೌಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಬ್ಯಾಂಕ್ ಶೇ. 3ರ ಬಡ್ಡಿ ದರದಲ್ಲಿ ಸಾಲ ವಿತರಿಸಿದರೂ ಸಹ ಸರ್ಕಾರದ ಬಡ್ಡಿ ಸಹಾಯ ಧನದ ಸೌಲಭ್ಯ ಪಡೆದುಕೊಳ್ಳಲು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸದೆ ಸುಸ್ತಿದಾರರಾಗುತ್ತಿದ್ದಾರೆ.

ಕುಷ್ಟಗಿ:

ಪಟ್ಟಣದ ಕೃಷ್ಣ ರುಕ್ಮಿಣಿ ಸಭಾ ಮಂಟಪದಲ್ಲಿ ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2024-25ನೇ ಸಾಲಿನ 59ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಗೋಪಾಲರಾವ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆಯಿತು.

ಬ್ಯಾಂಕ್ ಅಧ್ಯಕ್ಷ ಗೋಪಾಲರಾವ ಕುಲಕರ್ಣಿ ಮಾತನಾಡಿ, 59 ವರ್ಷಗಳಿಂದ ರೈತರಿಗೆ ವಿವಿಧ ಯೋಜನೆಯಲ್ಲಿ ಸಾಲ ವಿತರಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲಾಗುತ್ತಿದೆ ಎಂದರು.

2025-26ನೇ ಸಾಲಿಗೆ ಕೇಂದ್ರ ಬ್ಯಾಂಕಿನ ಯೋಜನೆ ಅನುಸಾರ ಸಾಲ ವಸೂಲಾತಿ ಆಗದೆ ಇರುವುದರಿಂದ ಕನಿಷ್ಠ ಸಾಲ ಹಂಚಿಕೆಗೆ ನಿರ್ಬಂಧಗೊಳಿಸಲಾಗಿದೆ. ರೈತರಿಗೆ ಬ್ಯಾಂಕ್ ಶೇ. 3ರ ಬಡ್ಡಿ ದರದಲ್ಲಿ ಸಾಲ ವಿತರಿಸಿದರೂ ಸಹ ಸರ್ಕಾರದ ಬಡ್ಡಿ ಸಹಾಯ ಧನದ ಸೌಲಭ್ಯ ಪಡೆದುಕೊಳ್ಳಲು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸದೆ ಸುಸ್ತಿದಾರರಾಗುತ್ತಿರುವುದು ವಿಷಾದನೀಯ ಎಂದ ಅವರು, ಸಕಾಲಕ್ಕೆ ಸಾಲ ಮರುಪಾವತಿಸಿದರೆ ಬಡ್ಡಿ ರಿಯಾಯಿ ಸೌಲಭ್ಯ ಪಡೆದುಕೊಳ್ಳುವ ಜತೆಗೆ ಬ್ಯಾಂಕಿನ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಈ ವೇಳೆ ಬ್ಯಾಂಕ್‌ ಉಪಾಧ್ಯಕ್ಷ ಬಾಲಪ್ಪ ತಳವಾರ, ನಿರ್ದೇಶಕರಾದ ಶ್ಯಾಮರಾವ್ ಕುಲಕರ್ಣಿ, ಶೇಖರಗೌಡ ಮಾಲಿಪಾಟೀಲ್, ಮಹಾಲಿಂಗಪ್ಪ ದೋಟಿಹಾಳ, ಭರಮಗೌಡ ಮಾಲಿಪಾಟೀಲ್, ಮಹಾಂತೇಶ ಕರಡಿ, ಬಸನಗೌಡ ದಿಡ್ಡಿಮನಿ, ಶಿವಯ್ಯ ಗಡಾದರ, ಅಮರೇಶ ಕಲಕಬಂಡಿ, ಮಹಾಂತೇಶ ವತ್ತಿ, ಸೋಮವ್ವ ರಾಠೋಡ, ಈರಮ್ಮ ಚೌಡಿ, ಶಾಂತವ್ವ ಮುಳ್ಳೂರ, ಬಸವರಾಜಗೌಡ ಪಾಟೀಲ್, ಚಂದ್ರಪ್ಪ ಪಿ. ಲಮಾಣಿ, ವಿಮಲಾ ಹೋರಪ್ಯಾಟಿ, ಶಿವಶಂಕರಗೌಡ ಕಡೂರು, ನರಸಿಂಹದಾಸ ತೋಟದ, ತಿಪ್ಪಣ್ಣ ಬಿಜಕಲ್ ಸೇರಿದಂತೆ ನೂರಾರು ಜನರು ಇದ್ದರು.