ಸಾರಾಂಶ
ಡಾಟಾ ತೆಗೆದುಕೊಂಡು ಬ್ಲಾಕ್ ಮೇಲೆ ಮಾಡುವ ಕಿಡಿಗೇಡಿಗಳುಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳನಿಮ್ಮ ಮೊಬೈಲ್‌ಗೆ ಗೊತ್ತಿಲ್ಲದ ನಂಬರ್‌ನಿಂದ ಬರುವ ಕಾಲ್ ರೀಸಿವ್ ಮಾಡಿ, ನೀಡುವ ಸೂಚನೆಯನ್ನು ಪಾಲನೆ ಮಾಡಿದರೆ ನಿಮ್ಮ ಡಾಟಾಗಳು ಎತ್ತುವಳಿಯಾಗುತ್ತವೆ. ಅಷ್ಟೇ ಅಲ್ಲ, ಮೊಬೈಲ್‌ನಲ್ಲಿರುವ ಬ್ಯಾಂಕಿಂಗ್ ಆ್ಯಪ್, ಪಾಸ್‌ವರ್ಡ್ ಮೊದಲಾದ ಮಾಹಿತಿ ಎಲ್ಲವನ್ನೂ ಕದಿಯುವ ಸಾಧ್ಯತೆ ಇದೆ.
ಹೌದು, ಡಿಜಿಟಲ್ ಅರೆಸ್ಟ್ ಬಳಿಕ ಈಗ ಮೊಬೈಲ್ ಡಾಟಾ ಕದಿಯಲು ಸೈಬರ್ ಕಳ್ಳರ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹೀಗೆ ಕದ್ದ ಮೇಲೆ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ, ನಿಮ್ಮನ್ನೇ ಡಿಜಿಟಲ್ ಅರೆಸ್ಟ್ ಮಾಡಬಹುದು ಅಥವಾ ನಿಮ್ಮ ಖಾತೆಯಿಂದಲೇ ಹಣ ವರ್ಗಾಯಿಸಿಕೊಳ್ಳಬಹುದು.ಏನಿದು ಹೊಸ ವರಸೆ?:
ನಿಮ್ಮ ಮೊಬೈಲ್‌ಗೆ ಕರೆಯೊಂದು ಬರುತ್ತದೆ. ಕರೆ ಸ್ವೀಕಾರ ಮಾಡಿದ ತಕ್ಷಣ ಅವರು ಹೇಳುವುದು ಹೀಗೆ, ನಿಮ್ಮ ನಂಬರ್ ಇನ್ನು ಅರ್ಧಗಂಟೆಯಲ್ಲಿ ಬಂದಾಗಲಿದೆ. ನಿಮ್ಮ ಮೊಬೈಲ್ ನಂಬರ್ ಸೇವೆ ಮುಂದುವರಿಯಬೇಕು ಎನ್ನುವುದಾದರೆ ಒಂದನ್ನು ಒತ್ತಿ ಅಥವಾ ಮೊಬೈಲ್ ನಂಬರ್ ಬಂದಾಗುವ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಎರಡನ್ನು ಒತ್ತಿ ಎಂದು ಹಿಂದಿಯಲ್ಲಿ ಹೇಳುತ್ತಾರೆ.ಹೀಗೆ, ಹೇಳಿದ ತಕ್ಷಣ ನೀವು ಒಂದನ್ನಾಗಲಿ ಅಥವಾ ಎರಡನ್ನಾಗಲಿ ಒತ್ತಿದರೆ ನಿಮ್ಮ ಮೊಬೈಲ್‌ನಲ್ಲಿ ಇರುವ ಡಾಟಾಗಳನ್ನೆಲ್ಲ ಕಳ್ಳತನ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳನ್ನೇ ಕದಿಯುತ್ತಾರೆ. ಇದಾದ ಮೇಲೆ ಅದರಲ್ಲಿರುವ ಡಾಟಾಗಳನ್ನು ತೆಗೆದುಕೊಂಡು ಬ್ಲಾಕ್ ಮೇಲೆ ಮಾಡುತ್ತಾರೆ.
ಸೆನ್ ಠಾಣೆ ಪಿಐಗೆ ಕರೆ:ಕೊಪ್ಪಳ ಸೆನ್ ಠಾಣೆಯ ಪಿಐ ಅವರಿಗೆ ಇಂಥದ್ದೊಂದು ಕರೆ ಬಂದಿದೆ. ಅನುಮಾನ ಬಂದು ಪರಿಶೀಲನೆ ಮಾಡಿದಾಗ ಇದೆಲ್ಲವೂ ಬೆಳಕಿಗೆ ಬಂದಿದೆ. ಪಿಐ ಮಾಂತೇಶ ಸಜ್ಜನ ಅವರಿಗೆ ಈ ರೀತಿಯ ಕರೆ ಬಂದಿದ್ದು, ಅದನ್ನು ಪರಿಶೀಲನೆ ಮಾಡಿದಾಗ ಇಂಥದ್ದೊಂದು ದಂಧೆ ಗೊತ್ತಾಗಿದೆ.
ಜಾಗೃತಿ:ಹೀಗಾಗಿ, ಈಗ ಕೊಪ್ಪಳ ಸೆನ್ ಠಾಣೆಯ ಮೂಲಕ ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಪಿಐ ಮಹಾಂತೇಶ ಸಜ್ಜನ ತಮಗೆ ಬಂದಿರುವ ಕಾಲ್ ಆಡಿಯೋ ರೆಕಾರ್ಡ್ ಮಾಡಿದ್ದಾರೆ. ಅದನ್ನೇ ಶೇರ್ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇಂಥ ಕಾಲ್‌ಗಳನ್ನು ರಿಸೀವ್ ಮಾಡಬೇಡಿ ಹಾಗೂ ರಿಸೀವ್ ಮಾಡಿದರೂ ಅವರು ನೀಡುವ ಸೂಚನೆ ಪಾಲನೆ ಮಾಡಲೇಬೇಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಮಧ್ಯಾಹ್ನವೇ ಕಾಲ್...
ಸಾಮಾನ್ಯವಾಗಿ ಕೆಲವರು ಮಧ್ಯಾಹ್ನ ಮಲಗಿರುತ್ತಾರೆ, ಇಲ್ಲವೇ ನಿದ್ರೆಯ ಮಂಪರಿನಲ್ಲಿ ಇರುತ್ತಾರೆ. ಈ ಸಮಯದಲ್ಲಿಯೇ ಕಾಲ್ ಬರುತ್ತವೆ. ನಿದ್ರೆಗಣ್ಣಲ್ಲಿ ಕಾಲ್ ರಿಸೀವ್ ಮಾಡಿ, ಹೇಳುವ ಸೂಚನೆಯನ್ನು ಪಾಲನೆ ಮಾಡಿ, ಅನೇಕರು ಪೆದ್ದರಾಗುತ್ತಾರೆ. ಆದ್ದರಿಂದ ಜಾಗರೂಕರಾಗಿರಬೇಕಾಗಿದೆ.