ಸಾರಾಂಶ
ಅನುವಂಶಿಕತೆ, ಪರಿಸರ, ಜೀವನಶೈಲಿ, ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ, ಕಲ್ಲಿನ ಪ್ರತಿಬಂಧಕ ಅಂಶಗಳ ನಡುವೆ ಅಸಮತೋಲನದಿಂದ ಸಮಸ್ಯೆ ಉಂಟಾಗುತ್ತದೆ. ಆದ್ರ‍್ರೀಕರಣ, ಅತಿ ಆದ್ರಿಕರಣ, ಬೀಜಿಕರಣ. ಸ್ಪಟಿಕ ಬೆಳವಣಿಗೆ,ಸ್ಫಟಿಕ ಧಾರಣೆ, ಕಲ್ಲಿನ ರಚನೆಯ ವಿಧಾನದಿಂದ ಹರಳುಗಳು ರೂಪುಗೊಳ್ಳುತ್ತವೆ. ಸ್ಥಳದ ಮತ್ತು ಕಲ್ಲಿನ ಮಿಶ್ರಣದ ಮೇಲೆ ಕಲ್ಲುಗಳ ವರ್ಗೀಕರಣ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮೂತ್ರಪಿಂಡದಲ್ಲಿನ ಕಲ್ಲುಗಳು ವಯಸ್ಕರಂತೆ ಮಕ್ಕಳು ಮಾತ್ರವಲ್ಲ ಶಿಶುಗಳಲ್ಲೂ ಕಾಣಿಸಿಕೊಳ್ಳಬಹುದು. ಪ್ರತಿ ನಿತ್ಯ ಆಹಾರದಲ್ಲಿ ಹೆಚ್ಚಿನ ಉಪ್ಪು ಬಳಸುವುದರಿಂದ ಮಕ್ಕಳಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ಸಮಸ್ಯೆ ಕಂಡು ಬರುತ್ತದೆ ಎಂಬುದು ಸಾಕಷ್ಟು ಪುರಾವೆಗಳಿವೆ ಎಂದು ಎಸ್.ಎಸ್.ಹೈಟೆಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಯೂರಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎನ್.ನವೀನ್ ತಿಳಿಸಿದರು.ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಇತ್ತೀಚೆಗೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಮಕ್ಕಳ ಮೂತ್ರಪಿಂಡದಲ್ಲಿ ಕಲ್ಲುಗಳು-ಕಾರಣ ಮತ್ತು ಪರಿಹಾರ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿ, ಅನುವಂಶಿಕತೆ, ಪರಿಸರ, ಜೀವನಶೈಲಿ, ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ, ಕಲ್ಲಿನ ಪ್ರತಿಬಂಧಕ ಅಂಶಗಳ ನಡುವೆ ಅಸಮತೋಲನದಿಂದ ಸಮಸ್ಯೆ ಉಂಟಾಗುತ್ತದೆ. ಆದ್ರ‍್ರೀಕರಣ, ಅತಿ ಆದ್ರಿಕರಣ, ಬೀಜಿಕರಣ. ಸ್ಪಟಿಕ ಬೆಳವಣಿಗೆ,ಸ್ಫಟಿಕ ಧಾರಣೆ, ಕಲ್ಲಿನ ರಚನೆಯ ವಿಧಾನದಿಂದ ಹರಳುಗಳು ರೂಪುಗೊಳ್ಳುತ್ತವೆ. ಸ್ಥಳದ ಮತ್ತು ಕಲ್ಲಿನ ಮಿಶ್ರಣದ ಮೇಲೆ ಕಲ್ಲುಗಳ ವರ್ಗೀಕರಣ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಉಪ್ಪು ಸೇವನೆ ಮಿತ ಗೊಳಿಸಬೇಕು. ದ್ರವರೂಪದ ಆಹಾರಕ್ಕೆ ಹೆಚ್ಚು ಬಳಕೆ, ಹಣ್ಣು, ತರಕಾರಿ, ಅದರಲ್ಲೂ ಹುಳಿ ಅಂಶಗಳಿರುವ ಹಣ್ಣು ಹೆಚ್ಚು ಬಳಕೆ, ಮಾಂಸ, ಸಂಸ್ಕರಿಸಿದ ಆಹಾರ, ಫಾಸ್ಟ್ ಫುಡ್, ಸೋಡಾ ಕಡಿಮೆ ಬಳಕೆ ಮಾಡುವುದು, ತೂಕದ ನಿರ್ವಹಣೆ, ಶಿಫಾರಸು ಮಾಡಿದ ಪ್ರಮಾಣದ ಕ್ಯಾಲ್ಸಿಯಂ ಆಹಾರ, ಫ್ರಕ್ಟೋಸ್ ಕಾನ್ ಸಿರಪ್ ಬಳಕೆ, ಗಿಡ ಮೂಲಿಕೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಕೇಂದ್ರದ ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಡಾ.ಸಿ.ಆರ್.ಬಾಣಾಪುರಮಠ್, ಡಾ.ಪಿ.ಎಸ್.ಸುರೇಶಬಾಬು, ಡಾ.ರೇವಪ್ಪ, ಡಾ.ಎ.ಎಸ್.ಮೃತ್ಯುಂಜಯ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಸಿಬ್ಬಂದಿ ರೊಳ್ಳಿ ಮಂಜುನಾಥ್ ಇತರರಿದ್ದರು.