ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ ನ ದೃಶ್ಯ ಸಂವಹನ ವಿಭಾಗವು ಆಯೋಜಿಸಿದ್ದ ಸಿನಿರಮಾ- 7ನೇ ರಾಷ್ಟ್ರ ಮಟ್ಟದ ಕಿರುಚಿತ್ರೋತ್ಸವ ಸಂಪನ್ನಗೊಂಡಿತು.ಈ ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ನಟಿ ಮಿಲನಾ ನಾಗರಾಜ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚಿತ್ರರಂಗಕ್ಕೆ ಉತ್ತಮ ಬರಹಗಾರರ ಕೊರತೆ ಇದೆ. ಚಿತ್ರರಂಗವು ಸೃಜನಶೀಲ ಪ್ರತಿಭೆಗಳನ್ನು ನಿರಂತರವಾಗಿ ಹುಡುಕುತ್ತಿರುತ್ತದೆ. ಚಲನಚಿತ್ರ ನಿರ್ಮಾಪಕರು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಸಿನಿರಮಾದಂತಹ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದರು.
ಇಂದು ವಿದ್ಯಾಥಿಗಳಿಗೆ ಶಿಕ್ಷಣ ಸಂಸ್ಥೆಗಳ ಮೂಲಕ ವಿಪುಲ ದೊರಕುತ್ತಿದ್ದು, ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರು ಅವುಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಈ ಬಾರಿಯ ಸಿನಿರಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದೇಶಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಹಾಗೂ ಫಿಲ್ಮ್ ಮೇಕಿಂಗ್ ಸ್ಕೂಲ್ ಗಳು ಭಾಗವಹಿಸಿದ್ದವು. 70 ಹೆಚ್ಚು ಕಿರುಚಿತ್ರಗಳು ಈ ಕಿರುಚಿತ್ರೋತ್ಸವದಲ್ಲಿ ನೋಂದಣಿಗೊಂಡಿದ್ದು, ಟಾಪ್ ಕಿರುಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಸುಮಾರು 1 ಲಕ್ಷ ರು. ಮೌಲ್ಯದ ಬಹುಮಾನವನ್ನು ನೀಡಲಾಯಿತು.
ಡಿಆರ್ ಸಿ ಸಿನಿಮಾಸ್‌ಸಿ.ಆರ್. ಹನುಮಂತ್, ಅಮೃತ ಮೈಸೂರು ಕ್ಯಾಂಪಸ್‌ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್, ನಿರ್ದೇಶಕ ಅನಂತಾನಂದ ಚೈತನ್ಯ, ಸಂಚಾಲಕ ಮುಕ್ತಿದಾಮೃತ ಚೈತನ್ಯ, ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಬಾಲಾಡಿ ಮೊದಲಾದವರು ಇದ್ದರು.ಕಿರುಚಿತ್ರ ಸ್ಪರ್ಧೆಯ ಪ್ರಶಸ್ತಿ ವಿಜೇತರು:
ಅತ್ಯುತ್ತಮ ಕಿರುಚಿತ್ರ- ಪರಾಗ್ ಪ್ರದೀಪ್ ಸಾವಂತ್- ವೇರ್ ವಿ ಲೀವ್ಡ್- ಮರಾಠಿ (ಪ್ರಥಮ), ರಘು ಆರವ್- ಹಿಂದೆ ಗಾಳಿ ಮುಂದೆ ಮತ್ತೆ- ಕನ್ನಡ (ದ್ವಿತೀಯ) ಮತ್ತು ನಿಖಿಲ್ ರಾಜೇಂದ್ರ ಶಿಂಧೆ- ಡಂಪ್ ಯಾರ್ಡ್- ಮರಾಠಿ (ತೃತೀಯ).ವಿಶೇಷ ವಿಭಾಗ ಪ್ರಶಸ್ತಿಗಳು- ಅತ್ಯುತ್ತಮ ಸಂಕಲನಕಾರ - ಪರಾಗ್ ಪ್ರದೀಪ್ ಸಾವಂತ್- ವೇರ್ ವಿ ಲೀವ್ಡ್ (ಮರಾಠಿ), ಅತ್ಯುತ್ತಮ ನಿರ್ದೇಶಕ- ಪರಾಗ್ ಪ್ರದೀಪ್ ಸಾವಂತ್- ವೇರ್ ವಿ ಲೀವ್ಡ್ (ಮರಾಠಿ), ಅತ್ಯುತ್ತಮ ಛಾಯಾಗ್ರಾಹಕ - ಬಿ.ಎಸ್. ಅಚ್ಯುತ್ - ಹಿಂದೆ ಗಾಳಿ ಮುಂದೆ ಮತ್ತೆ (ಕನ್ನಡ), ಅತ್ಯುತ್ತಮ ನಟನೆ- ಸಂಧ್ಯಾ ಅರಕೆರೆ- ಹಿಂದೆ ಗಾಳಿ ಮುಂದೆ ಮತ್ತೆ (ಕನ್ನಡ). ಉತ್ತಮಕಥೆ- ಶ್ರೀಮಣಿ- ಯಮಕ್ (ಕನ್ನಡ).
60 ಅವರ್ ಫಿಲ್ಮ್ ಮೇಕಿಂಗ್ ಚಾಲೆಂಜ್ ಪ್ರಶಸ್ತಿಗಳು- ಅತ್ಯುತ್ತಮ ಕಿರುಚಿತ್ರ- ಸುತನ್ ದಿಲೀಪ್- ಲಕುಮಿ- ಕನ್ನಡ (ಪ್ರಥಮ), ಅರ್ಚನಾ ಎಸ್. ಭಟ್- ವಿಷ್ಫಲ- ಕನ್ನಡ (ದ್ವಿತೀಯ) ಹಾಗೂ ಕೃಷ್ಣ ರಂಗನಾಥನ್ - 3.4.25- ಇಂಗ್ಲಿಷ್ (ತೃತೀಯ).