ರಾಮನಗರ: ಯುದ್ದ ಬೇಡ, ಗ್ಯಾಸ್ ಬೇಕು ಎಂದು ಈಡುಗಾಯಿ ಒಡೆಯುವ ಮೂಲಕ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ರಾಮನಗರ: ಯುದ್ದ ಬೇಡ, ಗ್ಯಾಸ್ ಬೇಕು ಎಂದು ಈಡುಗಾಯಿ ಒಡೆಯುವ ಮೂಲಕ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಮಂಗಳವಾರ ಖಾಲಿ ಸಿಲಿಂಡರ್ ಮೇಲೆ ಕೂತು ಪ್ರತಿಭಟಿಸಿದ ವಾಟಾಳ್ ನಾಗರಾಜ್, ಮೂರು ದೇಶಗಳ ನಡುವೆ ನಡೆಯುತ್ತಿರುವ ಯುದ್ದದಿಂದ ಪ್ರಪಂಚದಲ್ಲಿರುವ ಸಣ್ಣ ಸಣ್ಣ ದೇಶಗಳು ಬಹಳ ನೋವಿನ ಜೊತೆ ಕಣ್ಣೀರು ಹಾಕುವಂತಾಗಿದೆ. ಅಮೆರಿಕಾದವರು 50 ಸಾವಿರ ಸೈನಿಕರನ್ನು ಇರಾನ್‌ಗೆ ನುಗ್ಗಿಸುವ ತಂತ್ರ ಹೆಣೆದು ಇರಾನ್ ಸರ್ವನಾಶಕ್ಕೆ ಮುಂದಾಗಿದೆ. ಈ ಹಿಂದೆ ಅಮೆರಿಕಾದವರು ವಿಯೆಟ್ನಾಂ, ಹೀರೋಶಿಮ, ನಾಗಸಾಕಿ ಮೇಲೆ ಬಾಂಬ್ ಹಾಕಿದ್ದರಿಂದ ಇಂದಿಗೂ ಅಲ್ಲಿನ ಜನಜೀವನ ಅಸ್ಥವ್ಯಸ್ಥದಿಂದ ಕೂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.ಗಾಲ್ಫ್ ರಾಷ್ಟ್ರಗಳ ಯುದ್ಧದಿಂದಾಗಿ ಬೇರೆ ರಾಷ್ಟ್ರಗಳ ಮೇಲೂ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಮರ್ಪಕ ಗ್ಯಾಸ್ ಪೂರೈಕೆ ಆಗ್ತಿಲ್ಲ. ಪೆಟ್ರೋಲ್, ಡಿಸೇಲ್ ದರಗಳು ಹೆಚ್ಚಾಗಿದೆ. ಕರ್ನಾಟಕದಲ್ಲಿ ಆಟೋಗಳು ನಿಂತಿವೆ. ಹೋಟೆಲ್‌ಗಳು ಮುಚ್ಚಿವೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಲ್ಲ. ಈ ಕೂಡಲೇ ಅಮೆರಿಕಾ, ಇಸ್ರೇಲ್, ಇರಾನ್ ದೇಶಗಳ ನಡುವಿನ ಯುದ್ದ 15 ದಿನಗಳೊಳಾಗಿ ಯುದ್ದ ನಿಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಯುದ್ದ ಮಾಡುತ್ತಿರುವ ದೇಶಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿ ಯುದ್ದ ನಿಲ್ಲಿಸಲು ಪ್ರಯತ್ನಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷರಾದ ಎಂ.ಜಗದೀಶ್‌ಐಜೂರು, ರಾಜ್ಯ ಉಸ್ತುವಾರಿ ಅಧ್ಯಕ್ಷ ವಿ.ಎನ್. ಗಂಗಾಧರ್ , ಜಿಲ್ಲಾಧ್ಯಕ್ಷ ಸಿ.ಎಸ್ ಜಯಕುಮಾರ್, ದಲಿತ ಘಟಕದ ಜಿಲ್ಲಾಧ್ಯಕ್ಷ ಕೆ.ಜಯರಾಮು, ಮಹಿಳಾ ಘಟಕದ ತಾಲೂಕು ಕಾರ್ಯದರ್ಶಿ ಪುಷ್ಪಲತಾ, ತಾಲೂಕು ಉಪಾಧ್ಯಕ್ಷ ಸಿ.ಎಂ ವಿಜಯಕುಮಾರ್, ತಾಲೂಕು ಕಾರ್ಯಾಧ್ಯಕ್ಷ ಕರುನಾಡ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಆರ್,ವಿ ಕುಮಾರ್. ವಾಟಾಳ್ ನಾಗರಾಜ್ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.31ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ಸಿಲಿಂಡರ್ ಮೇಲೆ ಕೂತು ಪ್ರತಿಭಟಿಸಿದರು.